Donald Trump in Porn Star Case: ಡೊನಾಲ್ಡ್ ಟ್ರಂಪ್‍ಗೆ 1.22 ಲಕ್ಷ ಡಾಲರ್ ದಂಡ!  

ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಜೊತೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸಂಜೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯದ ವಿಚಾರಣೆ ವೇಳೆ ತಾನು ಸಂಪೂರ್ಣ ನಿರಪರಾಧಿ ಎಂದು ಟ್ರಂಪ್ ಹೇಳಿದ್ದರು.

Written by - Puttaraj K Alur | Last Updated : Apr 5, 2023, 09:03 AM IST
  • ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ
  • ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್
  • ವಿಚಾರಣೆ ಬಳಿಕ ಟ್ರಂಪ್‍ಗೆ 1.22 ಲಕ್ಷ ಡಾಲರ್ ದಂಡ ವಿಧಿಸಿದ ನ್ಯಾಯಾಲಯ
Donald Trump in Porn Star Case: ಡೊನಾಲ್ಡ್ ಟ್ರಂಪ್‍ಗೆ 1.22 ಲಕ್ಷ ಡಾಲರ್ ದಂಡ!   title=
ಟ್ರಂಪ್‍ಗೆ 1.22 ಲಕ್ಷ ಡಾಲರ್ ದಂಡ!

ನವದೆಹಲಿ: ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತಡರಾತ್ರಿ ನ್ಯಾಯಾಲಯಕ್ಕೆ ಹಾಜರಾದರು. ಅಮೆರಿಕದ ನಿಯಮಗಳ ಪ್ರಕಾರ ಮೊದಲು ಅವರನ್ನು ಬಂಧಿಸಲಾಯಿತು. ಈ ಸಮಯದಲ್ಲಿ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾನ್‌ಹ್ಯಾಟನ್ ನ್ಯಾಯಾಲಯದ ಹೊರಗೆ ಜಮಾಯಿಸಿದ್ದರು. ಹಿಂಸಾಚಾರದ ಸಾಧ್ಯತೆ ಗಮನದಲ್ಲಿಟ್ಟುಕೊಂಡು ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಿದ್ದರು.

ನಾನು ನಿರಪರಾಧಿ ಎಂದ ಟ್ರಂಪ್!

ಮೂಲಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಅವರು ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಅವರೊಂದಿಗಿನ ಸಂಬಂಧಕ್ಕಾಗಿ 34 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ನ್ಯಾಯಾಲಯಕ್ಕೆ ಹಾಜರಾದ ಟ್ರಂಪ್ ಅವರು ತಾನು ನಿರಪರಾಧಿ ಎಂದು ಘೋಷಿಸಿದರು. ನಾನು ಯಾವುದೇ ಅಪರಾಧ ಮಾಡಿಲ್ಲವೆಂದು ಹೇಳಿದ್ದಾರೆ. ವಿಚಾರಣೆ ಬಳಿಕ ನ್ಯಾಯಾಲಯ ಅವರಿಗೆ 1 ಲಕ್ಷದ 22 ಸಾವಿರ ಡಾಲರ್ ದಂಡ ವಿಧಿಸಿದೆ. ಇದಾದ ಬಳಿಕ ಟ್ರಂಪ್ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ನ್ಯಾಯಾಲಯದಿಂದ ನಿರ್ಗಮಿಸಿದರು.

ಇದನ್ನೂ ಓದಿ: ಟ್ರೈ-ಜಂಕ್ಷನ್‌ ಗಡಿ ನಿರ್ಣಯದ ಬಗ್ಗೆ ಭಾರತದ ನಿಲುವನ್ನು ಪುನರುಚ್ಚರಿಸಿದ ವಿನಯ್ ಮೋಹನ್ ಕ್ವಾತ್ರ

ಏನಿದು ಪ್ರಕರಣ?

2016ರಲ್ಲಿ ಟ್ರಂಪ್ ತಂಡವು ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ 1.30 ಲಕ್ಷ ಡಾಲರ್ ಪಾವತಿಸಿ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸಂಬಂಧದ ವಿಷಯದ ಬಗ್ಗೆ ಮೌನವಾಗಿರುವಂತೆ ಹೇಳಿದ್ದರೆಂದು ಆರೋಪಿಸಲಾಗಿದೆ. ಈ ಹಣವನ್ನು ಟ್ರಂಪ್ ಅವರ ವಕೀಲ ಮೈಕೆಲ್ ಕೊಹೆನ್ ಪಾವತಿ ಮಾಡಿದ್ದರು. ಆದರೆ ಟ್ರಂಪ್ ಈ ಮೊತ್ತವನ್ನು ಕೊಹೆನ್‌ಗೆ ನೀಡಿದಾಗ ಅವರು ಅದನ್ನು ಕಾನೂನು ಶುಲ್ಕವೆಂದು ಹೇಳಿದ್ದರು.

ಇದನ್ನೂ ಓದಿ: Trump faces arrest: ಬ್ಲೂ ಫಿಲಂಗೆ ಹಣ ಪಾವತಿ: ಡೊನಾಲ್ಡ್ ಟ್ರಂಪ್ ಗೆ  ಬಂಧನದ ಭೀತಿ 

ಬಾಂಬ್ ಸಿಡಿಸಿದ ಪೋರ್ನ್ ಸ್ಟಾರ್!   

‘ನಾನು 2006ರಲ್ಲಿ ಗಾಲ್ಫ್ ಪಂದ್ಯಾವಳಿಯ ವೇಳೆ ಡೊನಾಲ್ಡ್ ಟ್ರಂಪ್ ಭೇಟಿ ಮಾಡಿದ್ದೆ. ಈ ಮೊದಲ ಭೇಟಿಯಲ್ಲೇ ಟ್ರಂಪ್ ತಮ್ಮನ್ನು ಊಟಕ್ಕೆ ಆಹ್ವಾನಿಸಿದ್ದರು. ಈ ವೇಳೆ ತನ್ನ ಜೊತೆಗೆ ಟ್ರಂಪ್ ಒತ್ತಾಯದ ದೈಹಿಕ ಸಂಬಂಧ ಹೊಂದಿದ್ದರು’ ಎಂದು ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಆರೋಪಿಸಿದ್ದಾರೆ.

2016ರಲ್ಲಿ ಅಧ್ಯಕ್ಷೀಯ ಚುನಾವಣೆಗೂ ಮೊದಲು ತಮ್ಮ ನಡುವಿನ ಸಂಬಂಧ ಬಹಿರಂಗಪಡಿಸದಿರಲು ಡೇನಿಯಲ್ಸ್‌ಗೆ ಟ್ರಂಪ್ ದೊಡ್ಡ ಮೊತ್ತದ ಹಣ ನೀಡಿದ್ದರೆಂದು ಆರೋಪಿಸಲಾಗಿದೆ. ಆದರೆ ಡೇನಿಯಲ್ಸ್ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದರು ಮತ್ತು ಪೋರ್ನ್ ಸ್ಟಾರ್ ವಿರುದ್ಧ ಸುಲಿಗೆ ಆರೋಪ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News