Congo Landslide: ಬುಕಾವು ನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತ 14 ಮಂದಿ ಮೃತ

Congo Landslide: ಕಾಂಗೋದ ಬುಕಾವು ನಗರದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ಹಾನಿಯುಂಟಾಗಿದೆ. ಸುದ್ದಿ ಸಂಸ್ಥೆ ಎಎನ್ಐ ವರದಿಯ ಪ್ರಕಾರ, ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ ಎಂದು ತಿಳಿದು ಬಂದಿದೆ. 

Written by - Yashaswini V | Last Updated : Dec 12, 2023, 07:52 AM IST
  • ದಕ್ಷಿಣ ಕಿವು ಪ್ರಾಂತ್ಯದ ರಾಜಧಾನಿಯಲ್ಲಿ ಭಾರೀ ಮಳೆ
  • ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಬುಕಾವು ನಗರದಲ್ಲಿ ಭೂಕುಸಿತ
  • ಭೂಕುಸಿತದಿಂದಾಗಿ ಕನಿಷ್ಠ 14 ಮಂದಿ ಸಾವು
Congo Landslide: ಬುಕಾವು ನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತ 14 ಮಂದಿ ಮೃತ  title=

Congo Landslide: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಬುಕಾವು ನಗರದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆ ಅಪಾರ ಹಾನಿಯುಂಟುಮಾಡಿದೆ. 

ಸುದ್ದಿ ಸಂಸ್ಥೆ ಎಎನ್ಐ ವರದಿಯ ಪ್ರಕಾರ, ದಕ್ಷಿಣ ಕಿವು ಪ್ರಾಂತ್ಯದ ರಾಜಧಾನಿಯಾಗಿರುವ ಬುಕಾವು ನಗರದಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು ಇದರಿಂದಾಗಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಲಭ್ಯವಿರುವ ಮಾಹಿತಿಗಳ ಪ್ರಕಾರ, ಇಬಾಂಡಾದ ಬುಕಾವು ಕಮ್ಯೂನ್‌ನಲ್ಲಿ ತಾತ್ಕಾಲಿಕ ಶೆಡ್ ಗಳಲ್ಲಿ ವಾಸಿಸುತ್ತಿದ್ದರು ಎಂದು ಕಮ್ಯೂನ್‌ನ ಮೇಯರ್ ಜೀನ್ ಬಾಲೆಕ್ ಮುಗಾಬೊ ದೂರವಾಣಿ ಮೂಲಕ ರಾಯಿಟರ್ಸ್‌ಗೆ ತಿಳಿಸಿದರು.

ವಾಸ್ತವವಾಗಿ ಡಿಸೆಂಬರ್ 20ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಕಾಂಗೋ ರಾಜಕೀಯ ಪ್ರಚಾರಗಳ ಮಧ್ಯೆ ಆಫ್ರಿಕಾದ ಎರಡನೇ ಅತಿದೊಡ್ಡ ರಾಷ್ಟ್ರ ದಕ್ಷಿಣ ಕಿವು ಪ್ರಾಂತ್ಯದ ಬುಕಾವು ಪ್ರದೇಶದಾದ್ಯಂತ ದುರ್ಬಲ ಮೂಲಸೌಕರ್ಯವನ್ನು ಇದು ಹೈಲೈಟ್ ಮಾಡುತ್ತದೆ. 

ಇದನ್ನೂ ಓದಿ- ಬಾಯ್‌ಫ್ರೆಂಡ್‌ನಿಂದ ವಯಸ್ಸನ್ನು ಮರೆಮಾಡಲು ನಕಲಿ ಪಾಸ್‌ಪೋರ್ಟ್ ಬಳಸಿದ ಚೀನಾ ಮಹಿಳೆ!

ಎನ್ಡೆಡೆರೆ ಜಿಲ್ಲೆಯಲ್ಲಿ "ಭೂಕುಸಿತದಲ್ಲಿ ಮನೆಯೊಂದು ಸಂಪೂರ್ಣ ನಾಶವಾಗಿದ್ದು ಈ ಘಟನೆಯಲ್ಲಿ ಒಬ್ಬ ತಂದೆ, ಅವರ ಐದು ಮಕ್ಕಳು ಮತ್ತು ಇಬ್ಬರು ಮೊಮ್ಮಕ್ಕಳು ಅವಶೇಷಗಳಡಿ ಸಮಾಧಿಯಾಗಿದ್ದಾರೆ" ಎಂದು ಅಲ್ಲಿನ ಸ್ಥಳೀಯ ಮುಖ್ಯಸ್ಥ  ಆಲ್ಬರ್ಟ್ ಮಿಗಾಬೊ ನ್ಯಾಗಜಾ ಎಎಫ್‌ಪಿಗೆ ಮಾಹಿತಿ ನೀಡಿದ್ದಾರೆ. 

ಕಿವು ಸರೋವರದ ದಕ್ಷಿಣ ತೀರದಲ್ಲಿರುವ ಕಿಕ್ಕಿರಿದ ನಗರವನ್ನು ಮೂಲತಃ ಬೆಲ್ಜಿಯನ್ ವಸಾಹತುಗಾರರಿಂದ ಸುಮಾರು 100,000 ನಿವಾಸಿಗಳಿಗೆ ವಿನ್ಯಾಸಗೊಳಿಸಲಾಗಿದೆ. ಬಡತನ ಮತ್ತು ಕಳಪೆ ಮೂಲಸೌಕರ್ಯವು ಇಬಾಂಡಾದಲ್ಲಿರುವಂತಹ ಸಮುದಾಯಗಳನ್ನು ಭಾರೀ ಮಳೆಯಂತಹ ವಿಪರೀತ ಹವಾಮಾನಕ್ಕೆ ಹೆಚ್ಚು ದುರ್ಬಲಗೊಳಿಸುತ್ತದೆ.

ಇದೇ ವರ್ಷ ಮೇ ತಿಂಗಳಲ್ಲಿ ಸಂಭವಿಸಿದ ಫ್ಲಾಷ್ ಪ್ರವಾಹದಿಂದಾಗಿ ದಕ್ಷಿಣ ಕಿವುವಿನ ದೂರದ ಪರ್ವತ ಪ್ರದೇಶದಲ್ಲಿ 400 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವುದು ಇಲ್ಲಿನ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. 

ಇದನ್ನೂ ಓದಿ- Viral Video: ಹಾಡಹಗಲೇ ಗುಂಡಿಕ್ಕಿ ಯುವಕನ ಹತ್ಯೆ! ಭಯಾನಕ ವಿಡಿಯೋ ವೈರಲ್!

ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯು ಸಂಘರ್ಷ, ಅಭದ್ರತೆ ಮತ್ತು ಪ್ರವಾಹ ಮತ್ತು ಭೂಕುಸಿತದಂತಹ ವಿಪತ್ತುಗಳ ಸಂಯೋಜನೆಯಿಂದಾಗಿ ಡಿಆರ್‌ಸಿಯಲ್ಲಿ ದಾಖಲೆಯ 6.9 ಮಿಲಿಯನ್ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News