Bumper Lottery: ದುಬೈನಲ್ಲಿ 40 ಕೋಟಿ ರೂ. ಲಾಟರಿ ಗೆದ್ದ ಭಾರತೀಯ..!

ಕಳೆದ 3 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ರಂಜಿತ್ ಸೋಮರಾಜನ್ ಬಂಪರ್ ಬಹುಮಾನ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ.  

Written by - Puttaraj K Alur | Last Updated : Jul 11, 2021, 02:09 PM IST
  • ದುಬೈನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಭಾರತೀಯನಿಗೆ ಬಂಪರ್ ಲಾಟರಿ
  • ಕಳೆದ 3 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ರಂಜಿತ್ ಸೋಮರಾಜನ್
  • ರಾತ್ರಿ ಬೆಳಗಾಗುವುದರೊಳಗೆ ಖುಲಾಯಿಸಿದ ಅದೃಷ್ಟ, ಕೋಟ್ಯಾಧಿಪತಿಯಾದ ಕೇರಳ ಮೂಲದ ವ್ಯಕ್ತಿ
Bumper Lottery: ದುಬೈನಲ್ಲಿ 40 ಕೋಟಿ ರೂ. ಲಾಟರಿ ಗೆದ್ದ ಭಾರತೀಯ..! title=
ಕೇರಳ ಮೂಲದ ವ್ಯಕ್ತಿಗೆ 40 ಕೋಟಿ ರೂ. ಬಂಪರ್ ಲಾಟರಿ

ದುಬೈ: ಯಾರಿಗಾದರೂ ಸರಿ ರಾತ್ರೋರಾತ್ರಿ ಯಶಸ್ಸು ಸಿಗುವುದಿಲ್ಲ. ಕಠಿಣ ಪರಿಶ್ರಮ, ಶ್ರದ್ಧೆ ಇದ್ದರೆ ಮಾತ್ರ ಸಕ್ಸಸ್ ಸಿಗುತ್ತದೆ ಅಂತಾ ಎಲ್ಲರೂ ಹೇಳುತ್ತಾರೆ. ಆದರೆ ಕೆಲವು ಬಾರಿ ಲಕ್ ಎನ್ನುವುದು ಮನುಷ್ಯನ ಜೀವನವನ್ನೇ ಬದಲಾಯಿಸಿಬಿಡುತ್ತದೆ. ಅಂತಹ ವ್ಯಕ್ತಿಗಳು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧಿಪತಿಗಳಾಗಿಬಿಡುತ್ತಾರೆ. ಅದೇ ರೀತಿ 37 ವರ್ಷದ ರಂಜಿತ್ ಸೋಮರಾಜನ್ ಅವರಿಗೂ ಅದೃಷ್ಟ(Luck) ಖುಲಾಯಿಸಿದೆ.

ಹೌದು, ದುಬೈ(Dubai)ನಲ್ಲಿ ಸಾಮಾನ್ಯ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ರಂಜಿತ್ ಸೋಮರಾಜನ್ ಮತ್ತು ಅವರ 9 ಸ್ನೇಹಿತರು ಬರೋಬ್ಬರಿ 40 ಕೋಟಿ(20 ಮಿಲಿಯನ್ ದಿರ್ಹಾಮ್) ರೂ. ಮೊತ್ತದ ಬಂಪರ್ ಲಾಟರಿ(Bumper Lottery) ಗೆದ್ದಿದ್ದಾರೆ. ದುಬೈ ಸರ್ಕಾರದ ಲಾಟರಿ ಸ್ಪರ್ಧೆಯಲ್ಲಿ ರಂಜಿತ್‌ ಮತ್ತು ವಿವಿಧ ದೇಶಗಳಿಗೆ ಸೇರಿದ ಅವರ 9 ಸ್ನೇಹಿತರು ತಲಾ 2 ಸಾವಿರ ರೂ. ನೀಡಿ ಲಾಟರಿ ಟಿಕೆಟ್ ಗಳನ್ನು ಖರೀದಿಸಿದ್ದರು. ಅವರಿಗೆ ಜಾಕ್ ಪಾಟ್ ಲಾಟರಿ ಹೊಡೆದಿದೆ.

ಇದನ್ನೂ ಓದಿ: ಚೀನಾದಲ್ಲಿ ತೀವ್ರವಾಗಿ ವ್ಯಾಪಿಸಿದ ಹಂದಿ ಜ್ವರ

‘ನಾನು ಅಬುಧಾಬಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಕಳೆದ 3 ವರ್ಷಗಳಿಂದ ನಾನು ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದೆ. ನನಗೆ 2 ಅಥವಾ 3ನೇ ಬಹುಮಾನ ಬರಬಹುದು ಎಂದುಕೊಂಡಿದ್ದೆ. ಒಂದಲ್ಲಾ ಒಂದು ದಿನ ನನಗೆ ಅದೃಷ್ಟ ಖುಲಾಯಿಸುತ್ತದೆ ಅಂತಾ ಲಾಟರಿ ಟಿಕೆಟ್(Lottery Ticket) ಖರೀದಿಸುತ್ತಿದ್ದೆ. ಆದರೆ ನನಗೆ ಬಂಪರ್ ಬಹುಮಾನ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಮಸೀದಿ ಬಳಿ ಇರುವಾಗಲೇ ನನಗೆ ಬಂಪರ್ ಲಾಟರಿ ಹೊಡೆದಿರುವ ವಿಷಯ ತಿಳಿಯಿತು. ದೊಡ್ಡ ಮೊತ್ತದ ಜಾಕ್ ಪಾಟ್ ಹೊಡೆದಿರುವುದು ಅತ್ಯಂತ ಖುಷಿ ನೀಡಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

2008ರಿಂದಲೂ ಸೋಮರಾಜನ್ ದುಬೈ(Dubai)ನಲ್ಲಿ ಟ್ಯಾಕ್ಸಿ ಸೇರಿ ವಿವಿಧ ವಾಹನಗಳ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಕೋವಿಡ್‌ ಹಿನ್ನೆಲೆ ಅವರ ವೇತನಕ್ಕೆ ಕತ್ತರಿ ಬಿದ್ದಿತ್ತು. ಸರಿಯಾದ ಕೆಲಸ ಮತ್ತು ಸರಿಯಾದ ವೇತನ ಸಿಗದೆ ಸೋಮರಾಜನ್ ಸಂಕಷ್ಟಕ್ಕೆ ಸಿಲುಕಿದ್ದರು. ‘ಒಂದು ಉತ್ತಮ ಕೆಲಸಕ್ಕಾಗಿ ನಾನು ಪ್ರಯತ್ನಿಸುತ್ತಲೇ ಇದ್ದೆ. ಆದರೆ ನನಗೆ ಉತ್ತಮ ಕಂಪನಿಯಲ್ಲಿ ಕೆಲಸವೇ ಸಿಗಲಿಲ್ಲ. ಹೇಗಾದರೂ ಮಾಡಿ ಕಷ್ಟಪಟ್ಟು ಜೀವನ ನಡೆಸಲೇಬೇಕೆಂದು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದೆ. ಆದರೆ ಕೊರೊನಾ(CoronaVirus)ದಿಂದ ನನ್ನ ಸಂಬಳ ಕಡಿತವಾಗಿತ್ತು. ಹೀಗಾಗಿ ಜೀವನ ನಡೆಸುವುದು ತುಂಬಾ ಕಷ್ಟವಾಗಿತ್ತು’ ಎಂದು ಅವರು ತಿಳಿಸಿದ್ದಾರೆ. ಸದ್ಯ ಬಂಪರ್ ಲಾಟರಿ ಹೊಡೆದಿರುವುದರಿಂದ ಸೋಮರಾಜನ್ ಅವರ ಫೋನ್ ಬ್ಯುಸಿಯಾಗಿದೆ. ಅವರ ಸ್ನೇಹಿತರು, ಸಂಬಂಧಿಗಳು ಫೋನ್ ಮೇಲೆ ಫೋನ್ ಮಾಡಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದ ಜ್ಯೂಸ್ ಕಾರ್ಖಾನೆಗೆ ಬೆಂಕಿ, 52 ಸಾವು

ಬಂದಿರುವ 40 ಕೋಟಿ ರೂ. ಬಹುಮಾನವನ್ನು ಸೋಮರಾಜನ್ ತನ್ನ ಇತರ 9 ಸ್ನೇಹಿತರ ಜೊತೆ ಹಂಚಿಕೊಳ್ಳಲಿದ್ದಾರೆ. ‘ಭಾರತ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಮೂಲದ ನನ್ನ ಸ್ನೇಹಿತರ ಜೊತೆ ನಾನು ಬಹುಮಾನದ ಮೊತ್ತವನ್ನು ಸಮಾನವಾಗಿ ಹಂಚಿಕೊಳ್ಳುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News