Baba Vanga Predictions: ಬಾಬಾ ವಂಗಾ ಭವಿಷ್ಯವಾಣಿ ನಿಜ ಸಾಬೀತಾಗುತ್ತಿದೆ, ವಿಶ್ವದ ಅಂತ್ಯ ಸಮೀಪಿಸಿದೆಯಾ?

Mystic Baba Vanga: ಭವಿಷ್ಯ ವಕ್ತಾರೆ ಹಾಗೂ ಕುರುಡು ಮಹಿಳೆ ಬಾಬಾ ವಂಗಾ ಸಾಯುವುದಕ್ಕೂ ಮುನ್ನ ಹಲವು ಭವಿಷ್ಯದ ಘಟನೆಗಳ ಕುರಿತು ಭವಿಷ್ಯ ನುಡಿದಿದ್ದಾಳೆ. ಇವುಗಳಲ್ಲಿ ವರ್ಷ 2022ರ ಒಟ್ಟು 6 ಭವಿಷ್ಯಗಳು ಶಾಮೀಲಾಗಿದ್ದು, ಅವುಗಳಲ್ಲಿನ ಎರಡು ಭವಿಷ್ಯಗಳು ಈಗಾಗಲೇ ನಿಜ ಸಾಬೀತಾಗಿವೆ ಎನ್ನಲಾಗಿದೆ.  

Written by - Nitin Tabib | Last Updated : Jul 15, 2022, 07:56 PM IST
  • ಮಹಾನ್ ನಿಗೂಢ ಮತ್ತು ಕುರುಡ ಮಹಿಳೆಯಾಗಿದ್ದ ಬಾಬಾ ವಂಗಾ ಕೆಲ ನಂಬಲು ಅಸಾಧ್ಯವಾದ ಭವಿಷ್ಯವಾಣಿಗಳನ್ನು ಮಾಡಿದ್ದಾಳೆ.
  • ಅವುಗಳಲ್ಲಿನ ಎರಡು ಭವಿಷ್ಯವಾಣಿಗಳು ಈಗಾಗಲೇ ನಿಜ ಸಾಬೀತಾಗಿವೆ ಎನ್ನಲಾಗುತ್ತಿದೆ.
  • ತನ್ನ ಭಯ ಹುಟ್ಟಿಸುವ ಭವಿಷ್ಯವಾಣಿಗಳಿಗಾಗ ಬಾಬಾ ವಂಗಾ, ನಾಸ್ಟ್ರಾಡೆಮಸ್ ರೀತಿಯಲ್ಲಿಯೇ ಖ್ಯಾತಿ ಪಡೆದಿದ್ದಾಳೆ.
Baba Vanga Predictions: ಬಾಬಾ ವಂಗಾ ಭವಿಷ್ಯವಾಣಿ ನಿಜ ಸಾಬೀತಾಗುತ್ತಿದೆ, ವಿಶ್ವದ ಅಂತ್ಯ ಸಮೀಪಿಸಿದೆಯಾ? title=
Baba Vanga Predictions

Blind Mystic Baba Vanga: ಮಹಾನ್ ನಿಗೂಢ ಮತ್ತು ಕುರುಡ ಮಹಿಳೆಯಾಗಿದ್ದ ಬಾಬಾ ವಂಗಾ ಕೆಲ ನಂಬಲು ಅಸಾಧ್ಯವಾದ ಭವಿಷ್ಯವಾಣಿಗಳನ್ನು ಮಾಡಿದ್ದಾಳೆ. ಅವುಗಳಲ್ಲಿನ ಎರಡು ಭವಿಷ್ಯವಾಣಿಗಳು ಈಗಾಗಲೇ ನಿಜ ಸಾಬೀತಾಗಿವೆ ಎನ್ನಲಾಗುತ್ತಿದೆ. ತನ್ನ ಭಯ ಹುಟ್ಟಿಸುವ ಭವಿಷ್ಯವಾಣಿಗಳಿಗಾಗ ಬಾಬಾ ವಂಗಾ, ನಾಸ್ಟ್ರಾಡೆಮಸ್ ರೀತಿಯಲ್ಲಿಯೇ ಖ್ಯಾತಿ ಪಡೆದಿದ್ದಾಳೆ. ಅವಳು ಮಾಡಿರುವ ಭವಿಷ್ಯವಾಣಿಗಳನ್ನು ಪ್ರಸ್ತುತ ವಿಶ್ವಾದ್ಯಂತ ನಡೆಯುತ್ತಿವೆ ಎಂಬಂತಿದೆ. ಹಲವು ವರ್ಷಗಳ ಹಿಂದೆಯೇ ಬಾಬಾ ವಂಗಾ ಈ ಭವಿಷ್ಯವಾಣಿ ನುಡಿದಿದ್ದಾಳೆ ಎನ್ನಲಾಗಿದೆ.

ಈ ವರ್ಷದ ಭವಿಷ್ಯವಾಣಿಗಳು
'ಡೆಲಿ ಸ್ಟಾರ್'ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಬಾಬಾ ವಂಗಾ ತನ್ನ 2022 ರ ಭವಿಷ್ಯವಾಣಿಯಲ್ಲಿ ವಿಶ್ವದ ಹಲವು ಏಷ್ಯಾ ದೇಶ ಹಾಗೂ ಆಸ್ಟ್ರೇಲಿಯಾಗಳಲ್ಲಿ ಭಾರಿ ನೆರೆ ಪರಿಸ್ಥಿತಿ ಉದ್ಭವಿಸಲಿದೆ ಎಂದು ಹೇಳಿದ್ದಾಳೆ ಮತ್ತು ಅದು ಇಂದಿಗೆ ನಿಜ ಸಾಬೀತಾಗುತ್ತಿದೆಯಾ ಎಂಬಂತಿದೆ. ಏಕೆಂದರೆ ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲಿ ಈ ವರ್ಷದ ಆರಂಭದಲ್ಲಿ ಅಪಾರ ಮಳೆಯಾಗಿದ್ದು, ಸಾಕಷ್ಟು ನೆರೆ ಹಾವಳಿಗೆ ಕಾರಣವಾಗಿತ್ತು.

ಯುರೋಪ್ ಗೆ ಸಂಬಂಧಿಸಿದಂತೆ ಈ ಭವಿಷ್ಯ ಹೇಳಿದ್ದಳು
ಬರಗಾಲದ ಪರಿಣಾಮವಾಗಿ ಅನೇಕ ನಗರಗಳು ನೀರಿನ ಕೊರತೆಯಿಂದ ಬಳಲುತ್ತವೆ ಎಂದು ಬಾಬಾ ವಂಗಾ  ಹೇಳಿದ್ದಳು. ಇದು ಪ್ರಸ್ತುತ ಯುರೋಪಿನಲ್ಲಿ ನಡೆಯುತ್ತಿದೆ. ನ್ಯೂಸ್ ಕಾರ್ಪ್ ವರದಿ ಪ್ರಕಾರ, ಪೋರ್ಚುಗಲ್ ತನ್ನ ನಾಗರಿಕರಿಗೆ ನೀರಿನ ಬಳಕೆಯನ್ನು ನಿರ್ಬಂಧಿಸುವಂತೆ ಕೇಳಿಕೊಂಡಿದೆ ಮತ್ತು ಇಟಲಿಯು ಪ್ರಸ್ತುತ 1950 ರ ದಶಕದ ನಂತರ ಕೆಟ್ಟ ಬರಗಾಲನ್ನು ಎದುರಿಸುತ್ತಿದೆ. 

1996 ರಲ್ಲಿ ಬಾಬಾ ವಂಗಾ ನಿಧನ ಹೊಂದಿದ್ದಾಳೆ
1911ರಲ್ಲಿ ಜನಿಸಿದ್ದ ಬಾಬಾ ವ್ಯಂಗಾ 1996ರಲ್ಲಿ ನಿಧನ ಹೊಂದಿದ್ದಳು. ಆಕೆ ಮಾಡಿರುವ ಭವಿಷ್ಯವಾಣಿಗಳು ಪ್ರತಿವರ್ಷ ಹೆಡ್ಲೈನ್ ಗಿಟ್ಟಿಸುತ್ತವೆ. ಬಿರುಗಾಳಿಯೊಂದರ ಸಂದರ್ಭದಲ್ಲಿ ಬಾಬಾ ವಂಗಾ ದೊರತಿದ್ದಳು ಮತ್ತು ಅವು ದೊರೆತ ವೇಳೆ ಅವಳ ಎರಡೂ ಕಣ್ಣುಗಳು ಮರಳು ಮತ್ತು ಧೂಳಿನಿಂದ ತುಂಬಿಹೋಗಿದ್ದವು ಎನ್ನಲಾಗುತ್ತದೆ. 

ಇದನ್ನೂ ಓದಿ-1985ರ ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ರಿಪುದಮನ್ ಸಿಂಗ್ ಹತ್ಯೆ!

ಬಿರುಗಾಳಿಯಲ್ಲಿ ಕಣ್ಣು ಕಳೆದುಕೊಂಡಿದ್ದಳು ಬಾಬಾ ವಂಗಾ
ಬಾಬಾ ವಂಗಾ ಕುಟುಂಬ ತೀರಾ ಬಡ ಕುಟುಂಬವಾದ್ದರಿಂದ ಅವಳ ಚಿಕಿತ್ಸೆ ಸಾಧ್ಯವಾಗಿರಲಿಲ್ಲ ಎನ್ನಲಾಗುತ್ತದೆ. ಹೀಗಾಗಿ ವಂಗಾ  ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಳು. ಕುರುಡಳಾಗಿದ್ದ ವಂಗಾ ಬಳಿ ಭವಿಷ್ಯ ಹೇಳುವ ಗಾಡ್ ಗಿಫ್ಟ್ ಇತ್ತು ಎನ್ನಲಾಗುತ್ತದೆ. ಸಾವಿಗೂ ಮುನ್ನ ಬಾಬಾ ವಂಗಾ 5070ರಲ್ಲಿ ಇಡೀ ವಿಶ್ವವೇ ಸರ್ವನಾಶವಾಗಲಿದೆ ಎಂಬ ಭವಿಷ್ಯ ನುಡಿದಿದ್ದಾಳೆ.

ಇದನ್ನೂ ಓದಿ-ವಿಶ್ವದ ಅತ್ಯಂತ ಭಯಾನಕ ಜೈಲು: ದಯಾಮರಣಕ್ಕೆ ಬೇಡಿಕೆ ಇಡ್ತಾನೆ ಇಲ್ಲಿನ ಸೆರೆವಾಸಿ!

ಈ ಮೊದಲು ಕೂಡ ಆಕೆಯ ಭವಿಷ್ಯವಾಣಿಗಳು ನಿಜ ಸಾಬೀತಾಗಿವೆ
ಇದಕ್ಕೂ ಮೊದಲು ಕೂಡ ಬಾಬಾ ವಂಗಾ ನುಡಿದ ಭವಿಷ್ಯಗಳು ನಿಜ ಸಾಬೀತಾಗಿವೆ. 1989ರಲ್ಲಿ ಭವಿಷ್ಯ ನುಡಿದಿದ್ದ ವ್ಯಂಗಾ, 2001 ರಲ್ಲಿ ಅಮೆರಿಕಾದ ಎರಡು 'ಸ್ಟೀಲ್ ಬರ್ಡ್ಸ್'ಗಳು ಸರ್ವನಾಶವಾಗಲಿವೆ ಎಂದು ಹೇಳಿದ್ದಳು. ಹಲವರು ಇದನ್ನು 09/11 ರೂಪದಲ್ಲಿ ಗಮನಿಸಿದ್ದೇವೆ ಎಂದು ಹೇಳುತ್ತಾರೆ. ಆಕೆಯ ಇತರ ಭವಿಷ್ಯವಾಣಿಗಳಲ್ಲಿ 2004 ಥೈಲ್ಯಾಂಡ್ ಸುನಾಮಿ, ಬರಾಕ್ ಒಬಾಮ ಅಮೆರಿಕಾದ ಅಧ್ಯಕ್ಷರಾಗುವುದು. ಸೋವಿಯತ್ ಒಕ್ಕೂಟದ ವಿಭಜನೆ ಹಾಗೂ ಪೂರ್ವ ಮತ್ತು ಪಶ್ಚಿಮ ಜರ್ಮನಿಯ ಏಕೀಕರಣಗಳು ಶಾಮೀಲಾಗಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News