ಉತ್ತರ ಜಪಾನಿನಲ್ಲಿ 7.3 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ಸಂಜೆ 7.3 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದರಿಂದಾಗಿ ಸುನಾಮಿ ಸಂಭವಿಸುವ ಸಾಧ್ಯತೆ ಇದೆ.ಸಮುದ್ರದಿಂದ 60 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

Written by - Zee Kannada News Desk | Last Updated : Mar 16, 2022, 09:41 PM IST
  • ಸಮುದ್ರದಿಂದ 60 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
 ಉತ್ತರ ಜಪಾನಿನಲ್ಲಿ 7.3 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ   title=

ನವದೆಹಲಿ: ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ಸಂಜೆ 7.3 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದರಿಂದಾಗಿ ಸುನಾಮಿ ಸಂಭವಿಸುವ ಸಾಧ್ಯತೆ ಇದೆ.ಸಮುದ್ರದಿಂದ 60 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ:ಮೊದಲೇ ಭಾರತೀಯರನ್ನು ವಾಪಸ್ ಯಾಕೆ ಕರೆ ತರಲಿಲ್ಲ?- ಪ್ರಧಾನಿ ಮೋದಿ ವಿರುದ್ಧ ದೀದಿ ವಾಗ್ದಾಳಿ

ಈ ಪ್ರದೇಶವು ಉತ್ತರ ಜಪಾನ್‌ನ ಭಾಗವಾಗಿದೆ, 11 ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ 9 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದಾಗಿ ಪರಮಾಣು ಸ್ಥಾವರದ ಕರಗುವಿಕೆಗೆ ಕಾರಣವಾಯಿತು.ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳ ಭಾಗಗಳಲ್ಲಿ ಒಂದು ಮೀಟರ್ ವರೆಗೆ ಸಮುದ್ರದ ಉಲ್ಬಣ ಉಂಟಾಗಿದ್ದರಿಂದಾಗಿ ಸುನಾಮಿ ಸಂಭವಿಸುವ ಸಾಧ್ಯತೆ ಎಂದು ಸ್ಥಳೀಯ ವಾಹಿನಿ ವರದಿ ಮಾಡಿದೆ.

ಇದನ್ನೂ ಓದಿ: ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಪಡಿಸಲು ಯತ್ನಿಸುತ್ತಿದೆ- ಮಮತಾ ಬ್ಯಾನರ್ಜೀ

2011 ರ ಭೂಕಂಪ ಮತ್ತು ಸುನಾಮಿ (Tsunami) ಯ ನಂತರ ಫುಕುಶಿಮಾ ಡೈಚಿ ಪರಮಾಣು ಸ್ಥಾವರವನ್ನು ನಿರ್ವಹಿಸುವ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ ಹೋಲ್ಡಿಂಗ್ಸ್,ತೀವ್ರ ರೀತಿಯಲ್ಲಿ ಹಾನಿಗೆ ಒಳಗಾಗಿತ್ತು. ಅಷ್ಟೇ ಅಲ್ಲದೆ ಟೋಕಿಯೊ ಸೇರಿದಂತೆ ಪೂರ್ವ ಜಪಾನ್‌ನ ದೊಡ್ಡ ಭಾಗಗಳಲ್ಲಿ ಭೂಕಂಪ ಸಂಭವಿಸಿದ್ದರಿಂದಾಗಿ ಬೃಹತ್ ಕಟ್ಟಡಗಳು ನೆಲಕ್ಕೆ ಉರುಳಿದ್ದವು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News