ಇಂಡೋನೇಷ್ಯಾದ ಬಾಲಿಯಲ್ಲಿ 6.0 ತೀವ್ರತೆಯ ಭೂಕಂಪ

"ಭೂಕಂಪವು ದೊಡ್ಡ ಅಲೆಗಳನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿರದ ಕಾರಣ ನಾವು ಸುನಾಮಿ ಎಚ್ಚರಿಕೆ ನೀಡಿಲ್ಲ" ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದರು.

Last Updated : Jul 16, 2019, 10:15 AM IST
ಇಂಡೋನೇಷ್ಯಾದ ಬಾಲಿಯಲ್ಲಿ 6.0 ತೀವ್ರತೆಯ ಭೂಕಂಪ title=
Representational Image

ಜಕಾರ್ತಾ: ಮಂಗಳವಾರ ಇಂಡೋನೇಷ್ಯಾದ ಬಾಲಿ ದ್ವೀಪವನ್ನು ತಲ್ಲಣಗೊಳಿಸಿರುವ ಭೂಕಂಪ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಿಸಿದೆ. ಆದರೆ, ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ ಎಂದು ಯುರೋಪಿಯನ್ ಭೂಕಂಪನ ಮೇಲ್ವಿಚಾರಣಾ ಸಂಸ್ಥೆ ಇಎಂಎಸ್ಸಿ ತಿಳಿಸಿದೆ.

ಬೆಳಿಗ್ಗೆ 7.18 ರ ಸುಮಾರಿಗೆ ಭೂಕಂಪನ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ತಿಳಿಸಿದ್ದಾರೆ. "ಭೂಕಂಪವು ದೊಡ್ಡ ಅಲೆಗಳನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿರದ ಕಾರಣ ನಾವು ಸುನಾಮಿ ಎಚ್ಚರಿಕೆ ನೀಡಿಲ್ಲ" ಎಂದು ಅಧಿಕಾರಿಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದರು.

ಭೂಕಂಪನವು ಇಲ್ಲಿಯವರೆಗೆ ನುಸಾ ದುವಾದಲ್ಲಿ ಸಣ್ಣ ಹಾನಿಗಳನ್ನು ಮಾತ್ರ ಉಂಟುಮಾಡಿದೆ. ಸಾವುನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭೂಕಂಪದ ಪರಿಣಾಮದ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ಪೆಸಿಫಿಕ್ ರಿಂಗ್ ಆಫ್ ಫೈರ್" ಎಂದು ಕರೆಯಲ್ಪಡುವ ಭೂಕಂಪ-ಪೀಡಿತ ವಲಯದಲ್ಲಿರುವುದರಿಂದ ಇಂಡೋನೇಷ್ಯಾ ಆಗಾಗ್ಗೆ ಭೂಕಂಪಗಳಿಗೆ ಗುರಿಯಾಗುತ್ತದೆ.

Trending News