Viral video : ಮಿಂಚಿನ ವೇಗದಲ್ಲಿ ಬಂದ ರೈಲಿಗೆ ಎದುರಾದ ಮಹಿಳೆ ..! ಮುಂದೆ ?

Viral video : ಒಮ್ಮೊಮ್ಮೆ ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸುವವರು ಟಿಟಿಇ ಯಿಂದ ಬಚಾವಾಗಲು ಎಲ್ಲೆಂದರಲ್ಲಿ ಇಳಿದು ಬಿಡುತ್ತಾರೆ. ಹೀಗೆ ರೈಲು ನಿಲ್ದಾಣ ತಲುಪುವುದನ್ನು ಕೂಡಾ ಕಾಯದೆ ಹಳಿಯ ಮೇಲೆ ಇಳಿಯುವ ಮೂಲಕ ಪ್ರಯಾಣಿಕರು ತಮ್ಮ ಪ್ರಾಣದ ಜೊತೆಗೆ ಚೆಲ್ಲಾಟ ಆಡುವುದಂತೂ ಖಂಡಿತಾ. 

Written by - Ranjitha R K | Last Updated : Jul 20, 2022, 03:42 PM IST
  • ದೂರದ ಊರಿಗೆ ಪ್ರಯಾಣಿಸುವಾಗ ಬಹುತೇಕರ ಆಯ್ಕೆ ರೈಲು ಆಗಿರುತ್ತದೆ.
  • ರೈಲು ಪ್ರಯಾಣ ಬಹಳ ಆರಾಮದಾಯಕವಾಗಿರುತ್ತದೆ.
  • ನಿರ್ದಿಷ್ಟ ನಿಲ್ದಾಣಗಳಲ್ಲಿ ಮಾತ್ರ ರೈಲು ನಿಲ್ಲುತ್ತದೆ.
Viral video : ಮಿಂಚಿನ ವೇಗದಲ್ಲಿ ಬಂದ ರೈಲಿಗೆ ಎದುರಾದ ಮಹಿಳೆ ..! ಮುಂದೆ ?  title=
Viral news (photo twitter)

Viral video : ದೂರದ ಊರಿಗೆ ಪ್ರಯಾಣಿಸುವಾಗ ಬಹುತೇಕರ ಆಯ್ಕೆ ರೈಲು ಆಗಿರುತ್ತದೆ. ರೈಲು ಪ್ರಯಾಣ ಬಹಳ ಆರಾಮದಾಯಕವಾಗಿರುತ್ತದೆ. ಹಸಿವಾದಾಗ ತಿನ್ನಬಹುದು, ನಿದ್ದೆ ಬಂದಾಗ ಮಲಗಬಹುದು. ಇನ್ನು ಕೈಯಲ್ಲಿ ಪುಟ್ಟ ಮಕ್ಕಳಿದ್ದರಂತೂ ರೈಲು ಪ್ರಯಾಣದಷ್ಟು ಸುಖ ಮತ್ತೊಂದಿಲ್ಲ. ಆದರೆ ರೈಲಿನಲ್ಲಿ ಪ್ರಯಾಣಿಸುವಾಗ ನಮಗೆ ಬೇಕು ಬೇಕಾದಾಗಲೆಲ್ಲಾ ರೈಲು ನಿಲ್ಲುವುದಿಲ್ಲ. ನಿರ್ದಿಷ್ಟ ನಿಲ್ದಾಣಗಳಲ್ಲಿ ಮಾತ್ರ ರೈಲು ನಿಲ್ಲುತ್ತದೆ. ಹೀಗಿದ್ದರೂ ಕೆಲವರು ಸಿಗ್ನಲ್ ಕಾರಣಕ್ಕೆ ರೈಲು ನಿಂತಾಗ ರೈಲಿನಿಂದ ಇಳಿಯುವ ಕೆಟ್ಟ ಸಾಹಸಕ್ಕೆ ಕೈ ಹಾಕುತ್ತಾರೆ. ಇದು ಅವರ ಪ್ರಾಣಕ್ಕೆ ಎರವಾಗಬಹುದು. 

ಒಮ್ಮೊಮ್ಮೆ ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸುವವರು ಟಿಟಿಇ ಯಿಂದ ಬಚಾವಾಗಲು ಎಲ್ಲೆಂದರಲ್ಲಿ ಇಳಿದು ಬಿಡುತ್ತಾರೆ. ಹೀಗೆ ರೈಲು ನಿಲ್ದಾಣ ತಲುಪುವುದನ್ನು ಕೂಡಾ ಕಾಯದೆ ಹಳಿಯ ಮೇಲೆ ಇಳಿಯುವ ಮೂಲಕ ಪ್ರಯಾಣಿಕರು ತಮ್ಮ ಪ್ರಾಣದ ಜೊತೆಗೆ ಚೆಲ್ಲಾಟ ಆಡುವುದಂತೂ ಖಂಡಿತಾ.  ಇಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ. 

ಇದನ್ನೂ ಓದಿ : Viral Video: ಮದುವೆಯಲ್ಲಿ ಸ್ನೇಹಿತರು ನೀಡಿದ ಉಡುಗೊರೆಗೆ ನಾಚಿನೀರಾದ ಮದುಮಗ, ವಧು ಮಾಡಿದ್ದೇನು..?

ಈ ವಿಡಿಯೋದಲ್ಲಿ ಹಲವಾರು ಪ್ರಯಾಣಿಕರು ರೈಲಿನಿಂದ ಇಳಿದು ತಮ್ಮ ಲಗೇಜ್‌ಗಳನ್ನು ಇನ್ನೊಂದು ಬದಿಯಲ್ಲಿ ಇಡುತ್ತಿರುವುದನ್ನು ಕಾಣಬಹುದು. ಇಲ್ಲಿ ಇದ್ದವರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರು ಎಂಬಂತೆ ಕಾಣುತ್ತದೆ. ಎಲ್ಲರೂ ತಮ್ಮ ಲಗೇಜನ್ನು ಸಾಗಿಸುವುದರಲ್ಲಿ ನಿರತರಾಗಿದ್ದಾರೆ. ಅಷ್ಟರಲ್ಲಿ ಇನ್ನೊಂದು ಬದಿಯಿಂದ ಬಹಳ ವೇಗವಾಗಿ ರೈಲು ಬರುವುದನ್ನು ಕಾಣಬಹುದು. ಆದರೆ ಅಷ್ಟರಲ್ಲಿ ಸಾಮಾನು ಸಾಗಿಸುತ್ತಿದ್ದ ಮಹಿಳೆಯೊಬ್ಬರು ಹಳಿ ದಾಟುವುದು ಕಾಣಿಸುತ್ತದೆ. ಅದ್ಯಾವ ಮಾಯೆಯೋ ಕೂದಲೆಳೆಯ ಅಂತರದಲ್ಲಿ ಮಹಿಳೆ ಬಚಾವಾಗುತ್ತಾರೆ.

ಐಎಎಸ್ ಅಧಿಕಾರಿ ಅವಿನಾಶ್ ಶರಣ್ ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಐಎಎಸ್ ಅಧಿಕಾರಿ ಅವಿನಾಶ್ ಶರಣ್, 'ಜೀವನ ನಿಮ್ಮದು. ನಿರ್ಧಾರ ನಿಮ್ಮದು ಎಂದು ಬರೆದುಕೊಂಡಿದ್ದಾರೆ.  

ಇದನ್ನೂ ಓದಿ : Viral Video: ಕಟುಕನಿಗೆ ಮಾರುತ್ತಿದ್ದಂತೆ ಅಳುತ್ತಾ ಮಾಲೀಕನನ್ನು ತಬ್ಬಿಕೊಂಡ ಮೇಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News