Viral Video: ಮೆಟ್ರೋದಲ್ಲಿ ಸ್ಟಂಟ್ ಮಾಡಲು ಹೋದವನಿಗೆ ಏನಾಯ್ತು ನೋಡಿ!

Viral Video: ಮೆಟ್ರೋ ರೈಲಿನಲ್ಲಿ ಜಿಗಿಯಲು ಹೋದ ವ್ಯಕ್ತಿಗೆ ಮೇಲ್ಚಾವಣಿ ಬಡಿದಿದೆ. ಪರಿಣಾಮ ಆತನ ತಲೆ ಮತ್ತು ಬೆನ್ನಿಗೆ ಗಾಯಗಳಾಗಿವೆ. ಸ್ಟಂಟ್ ಮಾಡಲು ಹೋದ ವ್ಯಕ್ತಿ ಕೆಳಗಡೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ.  

Written by - Puttaraj K Alur | Last Updated : Jan 1, 2024, 07:58 PM IST
  • ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು
  • ಮೆಟ್ರೋ ಮೇಲ್ಚಾವಣಿ ಬಡಿದು ತಲೆಗೆ ಗಾಯ ಮಾಡಿಕೊಂಡ ವ್ಯಕ್ತಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಮೆಟ್ರೋದಲ್ಲಿ ಸ್ಟಂಟ್ ಮಾಡಲು ಹೋದವನಿಗೆ ಏನಾಯ್ತು ನೋಡಿ!  title=
ಸ್ಟಂಟ್ ಮಾಡಲು ಹೋಗಿ ಎಡವಟ್ಟು!

ನವದೆಹಲಿ: ಇಂಟರ್ನೆಟ್ ಲೋಕದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲ ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತವೆ. ಕೆಲವು ವಿಡಿಯೋಗಳಲ್ಲಿ ಜನರು ಮಾಡುವ ಮೂರ್ಖತನ ನೋಡುಗರಿಗೆ ನಗು ತರಿಸುತ್ತದೆ. ಕೆಲವು ವಿಡಿಯೋಗಳನ್ನು ನೋಡಿದ್ರೆ ಹೊಟ್ಟೆ ಹುಣ್ಣಾಗುವಷ್ಟು ನಗುವಂತಾಗುತ್ತದೆ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಜನವರಿ 1 ರಿಂದ ಜಾರಿಗೆ ಬಂದ 5 ಪ್ರಮುಖ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಿ

ವಿಡಿಯೋದಲ್ಲಿ ಸ್ಟಂಟ್ ಮೂಲಕ ಮೆಟ್ರೋದೊಳಗೆ ಜಿಗಿಯಲು ಹೋದ ವ್ಯಕ್ತಿಯ ಪ್ಲ್ಯಾನ್ ಉಲ್ಟಾ ಆಗಿದೆ. ಮೆಟ್ರೋ ರೈಲಿನಲ್ಲಿ ಜಿಗಿಯಲು ಹೋದ ವ್ಯಕ್ತಿಗೆ ಮೇಲ್ಚಾವಣಿ ಬಡಿದಿದೆ. ಪರಿಣಾಮ ಆತನ ತಲೆ ಮತ್ತು ಬೆನ್ನಿಗೆ ಗಾಯಗಳಾಗಿವೆ. ಸ್ಟಂಟ್ ಮಾಡಲು ಹೋದ ವ್ಯಕ್ತಿ ಕೆಳಗಡೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹದ ಯಶಸ್ವಿ ಉಡಾವಣೆ: ಇಸ್ರೋವನ್ನು ಶ್ಲಾಘಿಸಿದ ಖರ್ಗೆ! 

CCTV IDIOTS(@cctvidiots) ಟ್ವಿಟರ್‍ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ವ್ಯಕ್ತಿಯ ಮೂರ್ಖತನಕ್ಕೆ ಅನೇಕರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಸ್ಟಂಟ್ ಮಾಡಲು ಹೋದ ವ್ಯಕ್ತಿಗೆ ‘ಇದೆಲ್ಲಾ ಬೇಕಿತ್ತಾ’? ಅಂತಾ ಪ್ರಶ್ನಿಸಿದ್ದಾರೆ. ಎಲ್ಲಿ ಬೇಕೆಂದರಲ್ಲಿ ಸ್ಟಂಟ್ ಮಾಡಲು ಹೋದರೆ ಹೀಗೆ ಆಗೋದು ಅಂತಾ ಅನೇಕರು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News