Viral Video: ಏಕಾಏಕಿ ಹಾರಿದ ಕೋಲೆ ಬಸವ, ಟ್ರಕ್‌ನಡಿ ಬಿದ್ದ ಸ್ಕೂಟರ್‌ ಸವಾರ!

Bengaluru Viral Video: ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ರಸ್ತೆಯಲ್ಲಿ ಓಡಾಡಬೇಕಾದರೆ ತುಂಬಾ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಕಾಮೆಂಟ್‌ ಮಾಡಿದ್ದಾರೆ.

Written by - Puttaraj K Alur | Last Updated : Apr 12, 2024, 04:06 PM IST
  • ರಸ್ತೆಯಲ್ಲಿ ಬೈಕ್‌, ಸ್ಕೂಟರ್‌ ಓಡಿಸುವ ಸವಾರರ ಎಚ್ಚರ... ಎಚ್ಚರ...
  • ಏಕಾಏಕಿ ಸ್ಕೂಟರ್‌ ಸವಾರನ ಮೇಲೆ ಹಾರಿದ ಕೋಲೆ ಬಸವ
  • ಟ್ರಕ್‌ನಡಿ ಬಿದ್ದರೂ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದ ಯುವಕ
Viral Video: ಏಕಾಏಕಿ ಹಾರಿದ ಕೋಲೆ ಬಸವ, ಟ್ರಕ್‌ನಡಿ ಬಿದ್ದ ಸ್ಕೂಟರ್‌ ಸವಾರ! title=
ಪ್ರಾಣಾಪಾಯದಿಂದ ಪಾರಾದ ಯುವಕ!

ಬೆಂಗಳೂರು: ರಸ್ತೆಯಲ್ಲಿ ಬೈಕ್‌, ಸ್ಕೂಟರ್‌ ಓಡಿಸುವಾಗ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಎಷ್ಟೇ ಮುಂಜಾಗೃತವಾಗಿ ಬೈಕ್‌, ಸ್ಕೂಟರ್‌ ಓಡಿಸಿದರೂ ಕೆಲವೊಮ್ಮೆ ನಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿರುವ ಅಪಘಾತವೊಂದರ ದೃಶ್ಯವೇ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಹೌದು, ಮಹಾಲಕ್ಷ್ಮಿ ಲೇಔಟ್‌ನ ಸ್ವಿಮ್ಮಿಂಗ್‌ ಪೂಲ್‌ ಜಂಕ್ಷನ್‌ ಬಳಿ ಈ ಆಘಾತಕಾರಿ ಘಟನೆ ನಡೆದಿದೆ. 

ಈ ಘಟನೆಯಲ್ಲಿ ಅದೃಷ್ಟವಶಾತ್ ಸ್ಕೂಟರ್‌ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ಮಹಿಳೆಯೊಬ್ಬರು ಕೋಲೆ ಬಸವನನ್ನು ಕರೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಸ್ಕೂಟರ್‌ ಓಡಿಸಿಕೊಂಡು ಯುವಕನೊಬ್ಬ ಬಂದಿದ್ದಾನೆ. ಇದೇ ವೇಳೆ ಪಕ್ಕದಲ್ಲಿಯೇ ಲಾರಿಯೂ ಸಹ ಬರುತ್ತಿತ್ತು. 

ಇದನ್ನೂ ಓದಿ: Weather Update: ದೇಶದಲ್ಲಿ ಕೆಲ ಭಾಗಗಳಲ್ಲಿ ಮುಂದುವರೆದ ಹೀಟ್‌ವೇವ್, ಈ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ ನೀಡಿದ ಐಎಂಡಿ

ಈ ವೇಳೆ ಕೋಲೆ ಬಸವ ಯಾವುದೋ ಶಬ್ಧಕ್ಕೆ ಬೆಚ್ಚಿಬಿದ್ದಿದೆ. ಅದು ಏಕಾಏಕಿ ಸ್ಕೂಟರ್‌ ಸವಾರನ ಮೇಲೆ ಹಾರಿಬಿಟ್ಟಿದೆ. ಪರಿಣಾಮ ಸ್ಕೂಟರ್‌ ಸವಾರ ಕೆಳಕ್ಕೆ ಬಿದ್ದಿದ್ದು, ಟ್ರಕ್‌ನ ಚಕ್ರದಡಿ ಸಿಲುಕಿದ್ದಾನೆ. ಆದರೆ ಟ್ರಕ್‌ ಚಾಲಕ ಸಮಯ ಪ್ರಜ್ಞೆ ಮೆರೆದು ತಕ್ಷಣವೇ ಬ್ರೇಕ್‌ ಹಾಕಿದ್ದಾನೆ. ಹೀಗಾಗಿ ಸ್ಕೂಟರ್‌ ಸವಾರನ ಪ್ರಾಣ ಉಳಿದಿದೆ. ಒಂದು ವೇಳೆ ಟ್ರಕ್‌ ಚಾಲಕ ಬ್ರೇಕ್‌ ಹಾಕದಿದ್ದರೆ ಸ್ಕೂಟರ್‌ ಸವಾರ ಚಕ್ರದಡಿ ಸಿಲುಕಿ ಸಾವನ್ನಪ್ಪುತ್ತಿದ್ದ. 

ಸ್ಕೂಟರ್‌ ಸವಾರನ ಆಯುಷ್ಯ ಇನ್ನೂ ಗಟ್ಟಿ ಇತ್ತು. ಹೀಗಾಗಿ ಆತ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಸ್ತೆಗೆ ಬಿದ್ದ ಕೂಡಲೇ ಆತ ಎದ್ದುನಿಂತಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ರಸ್ತೆಯಲ್ಲಿ ಓಡಾಡಬೇಕಾದರೆ ತುಂಬಾ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Terrorist Trapped In Jammu Kashmir: ಪುಲ್ವಾಮಾದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರ ಹತ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News