Viral Video:​ ಸೀಲಿಂಗ್ ಫ್ಯಾನ್‌ನಲ್ಲಿ ಹೆಡೆ ಎತ್ತಿ ರೌಂಡ್‌ ಹಾಕಿದ ನಾಗರ ಹಾವು!

King Cobra Hanging in Ceiling Fan: 5 ದಿನಗಳ ಹಿಂದಷ್ಟೇ chandrasekaran6102 ಎಂಬ Instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್‌ ಮಾಡಿದ್ದು, ಅನೇಕರು ಶೇರ್‌ ಕೂಡ ಮಾಡಿದ್ದಾರೆ.

Written by - Puttaraj K Alur | Last Updated : Feb 2, 2024, 07:07 PM IST
  • ಸೀಲಿಂಗ್‌ ಫ್ಯಾನ್‌ನಲ್ಲಿ ಹೋಗಿ ಕುಳಿತ ಕಿಂಗ್‌ ಕೋಬ್ರಾ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ‌ ಸಖತ್ ವೈರಲ್‌
  • ಹೆಡೆ ಎತ್ತಿದ ನಾಗರ ಹಾವು ಕಂಡು ಹೌಹಾರಿದ ಜನರು
Viral Video:​ ಸೀಲಿಂಗ್ ಫ್ಯಾನ್‌ನಲ್ಲಿ ಹೆಡೆ ಎತ್ತಿ ರೌಂಡ್‌ ಹಾಕಿದ ನಾಗರ ಹಾವು! title=
ಹೆಡೆ ಎತ್ತಿದ ನಾಗರ ಹಾವು!

ನವದೆಹಲಿ: ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್‌ ಆಗುತ್ತವೆ. ಈ ಪೈಕಿ ಕೆಲವು ವಿಡಿಯೋಗಳು ಹಾಸ್ಯದ ಕಚಗುಳಿ ನೀಡಿದ್ರೆ, ಇನ್ನೂ ಕೆಲವು ವಿಡಿಯೋಗಳು ಭಯಾನಕವಾಗಿರುತ್ತವೆ. ಅಪಾಯಕಾರಿ ಪ್ರಾಣಿಗಳು ಮತ್ತು ವಿಷಕಾರಿ ಸರಿಸೃಪಗಳ ವಿಡಿಯೋಗಳು ಸಹ ಜನರ ಗಮನ ಸೆಳೆಯುತ್ತವೆ. ಇದಕ್ಕೆ ನಿದರ್ಶನವೆಂಬಂತೆ ಇಂಟರ್ನೆಟ್‌ನಲ್ಲಿ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. 

ಸದ್ಯ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಮನೆಯ ಸೀಲಿಂಗ್‌ ಫ್ಯಾನ್‌ನಲ್ಲಿ ನಾಗರ ಹಾವೊಂದು ಸುರಳಿ ಸುತ್ತಿ ಕುಳಿತುಕೊಂಡಿದೆ. ವರ್ಕ್‌ ಆಗದ ಹಳೆಯ ಸೀಲಿಂಗ್‌ ಫ್ಯಾನ್‌ ಮೇಲೆ ಹಾವು ಹೋಗಿದೆ. ಆ ಕಡೆ ಈ ಕಡೆ ಸರಿದಾಡಿದ ಪರಿಣಾಮ ಸೀಲಿಂಗ್‌ ಫ್ಯಾನ್‌ ತಿರುಗಲು ಪ್ರಾರಂಭಿಸಿದೆ. ಈ ವೇಳೆ ಹಾವು ತನ್ನ ಹೆಡೆ ಎತ್ತಿ ಸುಮ್ಮನೆ ಕುಳಿತುಕೊಂಡಿದೆ. 

ಇದನ್ನೂ ಓದಿ: ಮಧ್ಯಂತರ ಬಜೆಟ್ 2024: ರಕ್ಷಣಾ ಸಾಮರ್ಥ್ಯ ಮತ್ತು ಮೂಲಭೂತ ಸೌಕರ್ಯಗಳ ವರ್ಧನೆ

ನಾಗರ ಹಾವು ಚಲಿಸಿದ ಪರಿಣಾಮ ಫ್ಯಾನಿಗೆ ಅದರ ತೂಕ ಹೆಚ್ಚಾಗಿ ತಿರುಗಲು ಪ್ರಾರಂಭಿಸಿದೆ. ಒಂದು ಹಂತದಲ್ಲಿ ಕಿಂಗ್ ಕೋಬ್ರಾದ ತೂಕಕ್ಕೆ ಫ್ಯಾನ್ ಬೀಳುವಂತಿತ್ತು. 5 ದಿನಗಳ ಹಿಂದಷ್ಟೇ chandrasekaran6102 ಎಂಬ Instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್‌ ಮಾಡಿದ್ದು, ಅನೇಕರು ಶೇರ್‌ ಕೂಡ ಮಾಡಿದ್ದಾರೆ.

ವಿಡಿಯೋ ನೋಡಿದ ಬಹುತೇಕರು ನಾಗರ ಹಾವು ಕಂಡು ಹೌಹಾರಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್‌ ಸಹ ಮಾಡಿದ್ದಾರೆ. ಇನ್ನೂ ಕೆಲವರು ನಾಗಪ್ಪನಿಗೆ ಭಕ್ತಿಯಿಂದ ನಮಸ್ಕರಿಸಿದ್ದಾರೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. 

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಮುನ್ನವೇ ಮತ್ತೊಬ್ಬ ಸೂಪರ್ ಸ್ಟಾರ್ ರಾಜಕೀಯಕ್ಕೆ ಎಂಟ್ರಿ...!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News