Viral Video: ವಿವಾಹ ವೇದಿಕೆಯಲ್ಲಿಯೇ ರೊಮ್ಯಾಂಟಿಕ್ ಮೂಡ್ ಗೆ ಜಾರಿದ ಜೋಡಿ, 'ಅಷ್ಟೊಂದು ಆತುರ ಯಾಕೆ ಭಾಯ್' ಅಂದ ನೆಟ್ಟಿಗರು

Viral Video: ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ವರಮಾಲಾ ಕಾರ್ಯಕ್ರಮದ ಸಮಯದಲ್ಲಿ ವಧು-ವರರು ಮದುವೆಯ ವೇದಿಕೆಯಲ್ಲಿ ನಿಂತಿರುವುದನ್ನು ನೀವು ನೋಡಬಹುದು. ಇಬ್ಬರೂ ಕೈಯಲ್ಲಿ ಹೂಮಾಲೆ ಹಿಡಿದು ನಿಂತಿರುವುದು ಕಂಡುಬರುತ್ತದೆ. ಏತನ್ಮಧ್ಯೆ ವರ ಮಾಡಿರುವ ಕೆಲಸ ನೋಡಿ 'ಅಷ್ಟೊಂದು ಗಡಿಬಿಡಿ ಏನು ಭಾಯ್' ಅಂತ ಜನ ಪ್ರಶ್ನಿಸುತ್ತಿದ್ದಾರೆ. (Viral News In Kannada)  

Written by - Nitin Tabib | Last Updated : Feb 7, 2024, 05:07 PM IST
  • ವೈರಲ್ ಆಗುತ್ತಿರುವ ಈ ವೀಡಿಯೊವನ್ನು Instagram ನಲ್ಲಿ @blacklisted_x3 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ.
  • ಇದನ್ನು ಅನೇಕ ಜನರು ವೀಕ್ಷಿಸಿದ್ದಾರೆ. ಅಲ್ಲದೇ ಇದಕ್ಕೆ ಸುಮಾರು 10 ಸಾವಿರ ಲೈಕ್ಸ್ ಕೂಡ ಬಂದಿವೆ.
  • ಈ ವಿಡಿಯೋಗೆ ಜನರಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
Viral Video: ವಿವಾಹ ವೇದಿಕೆಯಲ್ಲಿಯೇ ರೊಮ್ಯಾಂಟಿಕ್ ಮೂಡ್ ಗೆ ಜಾರಿದ ಜೋಡಿ, 'ಅಷ್ಟೊಂದು ಆತುರ ಯಾಕೆ ಭಾಯ್' ಅಂದ ನೆಟ್ಟಿಗರು title=

Viral Wedding Video: ಯಾರ ಮದುವೆ ಇರಲಿ, ಅದು ಅವರ ಜೀವನದಲ್ಲಿ ಒಂದು ಅವಿಸ್ಮರಣೀಯ ಕ್ಷಣ. ಮದುವೆಯ ದಿನವು ವ್ಯಕ್ತಿಯ ಜೀವನದ ಅತ್ಯಂತ ಸ್ಮರಣೀಯ ದಿನಗಳಲ್ಲಿ ಒಂದಾಗಿದೆ. ಆ ದಿನ ವಧು-ವರರು ರಾಜ ರಾಣಿಯಂತೆ ಇರುತ್ತಾರೆ. ಇನ್ನೊಂದೆಡೆ ಮದುವೆಗೆ ಆಗಮಿಸಿದ ಎಲ್ಲಾ ಅತಿಥಿಗಳ ದೃಷ್ಟಿ ಅವರ ಮೇಲಿರುತ್ತದೆ.  ಆದರೆ ಕೆಲವೊಮ್ಮೆ ವಧು ಮತ್ತು ವರರು ಈ ವಿಷಯವನ್ನು ಮರೆತುಬಿಡುತ್ತಾರೆ. ಅಂತಹುದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವರನೊಬ್ಬ ತನ್ನನ್ನು ಎಲ್ಲರೂ ಗಮನಿಸುತ್ತಿದ್ದಾರೆ ಎನ್ನುವುದನ್ನು ಮರೆತಿದ್ದಾನೆ. ಮತ್ತು ಅವನು ತನ್ನ ಭಾವಿ ಪತ್ನಿಯ ಜೊತೆಗೆ ವೇದಿಕೆಯಲ್ಲಿಯೇ ಪ್ರಣಯ ಮಾಡಲು ಪ್ರಯತ್ನಿಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. (Viral News In Kannada)

ಇದನ್ನೂ ಓದಿ-Viral Elephant Dance: ಹಲಗೆ ತಾಳಕ್ಕೆ ಗಜರಾಜನ ಬಂಬಾಟ್ ಡಾನ್ಸ್, ವಿಡಿಯೋ ಭಾರಿ ವೈರಲ್ ಆಗುತ್ತಿದೆ... ನೀವು ಫಟ್ ಅಂತ ನೋಡಿ

ವಧುವಿಗೆ ಮುತ್ತಿಕ್ಕಿದ ವರ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವರಮಾಲೆಯ ಕಾರ್ಯಕ್ರಮದ ವೇಳೆ ವಧು-ವರರು ಮದುವೆ ವೇದಿಕೆಯ ಮೇಲೆ ನಿಂತಿದ್ದಾರೆ. ಇಬ್ಬರೂ ಕೈಯಲ್ಲಿ ಹೂಮಾಲೆ ಹಿಡಿದು ನಿಂತಿರುವುದನ್ನು ನೀವು ನೋಡಬಹುದು. ಅವನ ಸುತ್ತಲೂ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ನೆರೆದಿದ್ದಾರೆ. ಆಗ ವರನು ವಧುವಿನ ಕಿವಿಯಲ್ಲಿ ಏನನ್ನಾದರೂ ಪಿಸುಗುಟ್ಟಲು ಪ್ರಯತ್ನಿಸುತ್ತಾನೆ. ಇದಾದ ನಂತರ ವರನು ವಧುವನ್ನು ಚುಂಬಿಸಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಆತ ಒಂದೆರಡು ಬಾರಿ ಪ್ರಯತ್ನಿಸುತ್ತಾನೆ. ಮತ್ತು ಕೊನೆಯಲ್ಲಿ ಆತ  ವಧುವಿನ ಕೆನ್ನೆಗೆ ಮುತ್ತಿಡುತ್ತಾನೆ. ಇದನ್ನು ನೋಡಿದ ಜನರು ಸಾಕಷ್ಟು ಆಶ್ಚರ್ಯಗೊಳ್ಳುತ್ತಾರೆ. ಈ ಜೋಡಿಯ ಮುದ್ದಾದ ಪ್ರಣಯದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ-Viral Video: ಪಾರ್ಕ್ನಲ್ಲಿ ಕಾಣಿಸಿಕೊಂಡ ಭೂತ! ನೋಡಿ ದಂಗಾದ ಪೊಲೀಸರು, ವಿಡಿಯೋ ವೈರಲ್!

ಜನರು ಕಾಮೆಂಟ್ ಮಾಡುವ ಮೂಲಕ ತಮಾಷೆ ಮಾಡುತ್ತಿರುವ ಜನ
ವೈರಲ್ ಆಗುತ್ತಿರುವ ಈ ವೀಡಿಯೊವನ್ನು Instagram ನಲ್ಲಿ @blacklisted_x3 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದನ್ನೂ ಅನೇಕ ಜನರು ವೀಕ್ಷಿಸಿದ್ದಾರೆ. ಅಲ್ಲದೇ ಇದಕ್ಕೆ ಸುಮಾರು 10 ಸಾವಿರ ಲೈಕ್ಸ್ ಕೂಡ ಬಂದಿವೆ. ಈ ವಿಡಿಯೋಗೆ ಜನರಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ವಿಡಿಯೋಗೆ ಪ್ರತಿಕ್ರಿಯಿಸಿದ ಓರ್ವ ಬಳಕೆದಾರರು, 'ಹುಡುಗಿ ಒಂದು ಮೀಟರ್ ಹಿಂದೆ ಸರೆದಿದ್ದಾಳೆ, ಆಕೆ ಕಂಫರ್ಟ್ ಆಗಿಲ್ಲ ಅರ್ಥ ಮಾಡಿಕೊಳ್ಳು ಭಾಯ್' ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರರು, 'ಆಕೆ  ಸ್ಟೇಜ್ ನಿಂದ ಕೆಳಗಿಳಿಯಬೇಕಿತ್ತು, ಸ್ಟೇಜ್ ಮೇಲೂ ಗೌರವ ತೋರುತ್ತಿಲ್ಲ, ನಿರಾಕರಿಸಿದರೂ ಮತ್ತೆ!' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, 'ಆತನ ಸಂಸ್ಕಾರ ಅವನ ವಯಸ್ಸಿಗಿಂತ ಚಿಕ್ಕದಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News