Viral Video: ಸಂಪೂರ್ಣ ಬೆತ್ತಲೆಯಾಗಿ ಸ್ಕೂಟರ್‌ ಮೇಲೆ ಊರು ಸುತ್ತಿದ ಭೂಪ..!

Nagpur Naked Man Viral Video: ಜೈತಾಲಾ ಮಾರುಕಟ್ಟೆ ಪ್ರದೇಶದಲ್ಲಿ ಪ್ರೀತಮ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ ಮಾನಸಿಕ ಅಸ್ವಸ್ಥನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Written by - Puttaraj K Alur | Last Updated : Apr 21, 2024, 07:33 PM IST
  • ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ಸ್ಕೂಟರ್‌ ಮೇಲೆ ಊರು ಸುತ್ತಿದ್ದಾನೆ
  • ನಾಗಪುರದಲ್ಲಿ ಮಧ್ಯರಾತ್ರಿ ಸ್ಕೂಟರ್‌ ರೈಡ್‌ ಮಾಡಿರುವ ವ್ಯಕ್ತಿಯ ವಿಡಿಯೋ ವೈರಲ್‌
  • PK2 ಸಿನಿಮಾದ ಹೀರೋ ಫನ್ನಿಯಾಗಿ ಕಾಮೆಂಟ್‌ ಮಾಡಿದ ನೆಟಿಜನ್ಸ್
Viral Video: ಸಂಪೂರ್ಣ ಬೆತ್ತಲೆಯಾಗಿ ಸ್ಕೂಟರ್‌ ಮೇಲೆ ಊರು ಸುತ್ತಿದ ಭೂಪ..!  title=
ಬೆತ್ತಲೆಯಾಗಿ ಸ್ಕೂಟರ್‌ ರೈಡ್!

ನವದೆಹಲಿ: ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ಸ್ಕೂಟರ್‌ ಮೇಲೆ ಊರು ಸುತ್ತಿರುವ ವಿಚಿತ್ರ ಘಟನೆ ನಾಗಪುರದಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಮಧ್ಯರಾತ್ರಿ 2 ಗಂಟೆ ವೇಳೆಗೆ 35 ವರ್ಷದ ಪ್ರೀತಮ್ ಎಂಬಾ ತನ್ನ ಸ್ಕೂಟರ್‌ನಲ್ಲಿ ನಾಗ್ಪುರದ ನರೇಂದ್ರ ನಗರ ಸೇತುವೆ ಮೇಲೆ ಮತ್ತು ಮನೆವಾಡಾ ಭಾಗದಲ್ಲಿ ಯಾವುದೇ ಬಟ್ಟೆಯಿಲ್ಲದೆ ಸಂಪೂರ್ಣ ಬೆತ್ತಲೆಯಾಗಿ ಸ್ಕೂಟರ್‌ನಲ್ಲಿ ಸುತ್ತಾಡಿದ್ದಾನೆ. 

ಇದನ್ನೂ ಓದಿ: Loksabha Election : ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್! ಯಾವ ಪಕ್ಷದ ಪರ ಇವರ ನಡೆ ?

ಈತನ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಜೈತಾಲಾ ಮಾರುಕಟ್ಟೆ ಪ್ರದೇಶದಲ್ಲಿ ಪ್ರೀತಮ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ ಮಾನಸಿಕ ಅಸ್ವಸ್ಥನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ನಮ್ಮ ಮಗನಿಗೆ ಮಾನಸಿಕ ಸಮಸ್ಯೆಯಿದೆ ಎಂದು ಪ್ರೀತಮ್ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. 

ಇದನ್ನೂ ಓದಿ: Loksabha Election : ನಾಗ್ಪುರದಲ್ಲಿ ವಿಶ್ವದ ಅತಿ ಚಿಕ್ಕ ಮಹಿಳೆಯಿಂದ ಮತ ಚಲಾವಣೆ

ಬೆತ್ತಲೆಯಾಗಿ ಸ್ಕೂಟರ್‌ ಓಡಿಸಿರುವ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಪ್ರೀತಮ್‌ PK2 ಸಿನಿಮಾದ ಹೀರೋ ಎಂದು ಅಂತಾ ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News