ವೆರೈಟಿ ವೆರೈಟಿ ಮೈಸೂರ್ ಪಾಕ್​ ಸವಿಯುತ್ತಿದ್ದ ಬಾಲಿವುಡ್‌ ನಟಿ: ಶಿಲ್ವಾ ಶೆಟ್ಟಿ ವಿಡಿಯೋ ವೈರಲ್‌ !

Bollywood Actress Shilpa Shetty: ಬಿ-ಟೌನ ಬಿಡಗಿ ನಟಿ ಶಿಲ್ಪಾ ಶೆಟ್ಟಿ, ಸದ್ಯ ಕೆಡಿ ಸಿನಿಮಾದ ಶೂಟಿಂಗ್‌ಗಾಗಿ ಮೈಸೂರಿಗೆ ಬಂದಿದ್ದು, ಅಲ್ಲಿ ಹಲವಾರು ಬಗೆಬಗೆಯ ಮೂಸೋರ್‌ ಪಾಕ್‌ಗಳನ್ನು ಸವಿದಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.

Written by - Zee Kannada News Desk | Last Updated : Nov 7, 2023, 01:14 PM IST
  • ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಕೆಡಿ ಚಿತ್ರದ ಶೂಟಿಂಗ್‌ಗಾಗಿ ಮೈಸೂರಿಗೆ ಬಂದಿದ್ದಾರೆ.
  • ಮೈಸೂರಿನಲ್ಲಿ ಈ ನಟಿ ಹಲವಾರು ಬಗೆಯ ಸ್ವೀಟ್‌ಗಳನ್ನು ಟೇಸ್ಟ್‌ ಮಾಡಿದ್ದಾರೆ.
  • ಸೋಷಿಯಲ್‌ ಮಿಡಿಯಾದಲ್ಲಿ ಶಿಲ್ಪಾ ವಿಡಿಯೋ ವೈರಲ್
ವೆರೈಟಿ ವೆರೈಟಿ ಮೈಸೂರ್ ಪಾಕ್​ ಸವಿಯುತ್ತಿದ್ದ ಬಾಲಿವುಡ್‌ ನಟಿ: ಶಿಲ್ವಾ ಶೆಟ್ಟಿ ವಿಡಿಯೋ ವೈರಲ್‌ ! title=

Shilpa Shetty Viral Video: ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಯಾವಾಗಲೂ ಸಿನಿಮಾ ಕೆಲಸಗಳಲ್ಲಿಯೂ, ಬ್ಯುಸಿಯಾಗಿರುವ ನಟಿ ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತಿರುತ್ತಾರೆ. ಇತ್ತೀಚೆಗೆ ಈ ನಟಿ ತನ್ನ ಪತಿ ರಾಜಕುಂದ್ರಾ ರೀತಿಯೇ ಮಾಸ್ಕ್‌ ಧರಿಸಿ ಹಾಗೂ ಈಕೆ ಪತಿ ತಮ್ಮ ಸಂಬಂಧದ ಬಗ್ಗೆ ಮಾಡಿರುವ ಟ್ವೀಟ್‌ನಿಂದ ಸುದ್ದಿಯಾಗಿದ್ದರು.

ಹಲವಾರು ವರ್ಷಗಳ ಹಿಂದೆ ಶಿಲ್ಪಾ ಕ್ರೇಜಿಸ್ಟಾರ್‌ ರವಿಚಂದ್ರನ್‌ ಜೊತೆಗೆ ಪ್ರೀತ್ಸೋದ್‌ ತಪ್ಪಾ, ಒಂದಾಗೋಣ ಬಾ ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದು, ಬಳಿಕ ರಿಯಲ್‌ ಸ್ಟಾರ್‌ ಉಪೇಂದ್ರ ಜೊತೆ ಆಟೋ ಶಂಕರ್‌ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸದ್ಯ ಶೀಘ್ರದಲ್ಲಿ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದಲ್ಲಿ ಇವರು ಅಭಿನಯಿಸುತ್ತಿರುವ ವಿಷಯ ತಿಳಿದಿಯೇ ಇದೆ.

ಇದನ್ನು ಓದಿ:‌ Anushka Shetty Birthday: ಕಾರು, ಬಂಗಲೆ, ಫಾರ್ಮ್ ಹೌಸ್... ಸ್ವೀಟಿ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?

ಇದೀಗ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಕೆಡಿ ಚಿತ್ರದ ಶೂಟಿಂಗ್‌ಗಾಗಿ ಮೈಸೂರಿಗೆ ಬಂದಿದ್ದು, ಮೈಸೂರು ಪಾಕ್​ ಸವಿದಿದ್ದಾರೆ. ಜೊತೆಗೆ ಜಹಾಂಗೀರ್​ ಸೇರಿದಂತೆ ವಿವಿಧ ಸಿಹಿ ಪದಾರ್ಥಗಳನ್ನು ಸವಿದಿದ್ದು ಅದರ ವಿಡಿಯೋವನು ಈಕೆ ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌  ಮಾಡಿದ್ದು, ಸದ್ಯ ವೈರಲ್​ ಆಗಿದೆ. ಇದಿಷ್ಟು ಈ ತಿನಿಸಿನ ಹಿನ್ನೆಲೆಯಾದರೆ,  ಇನ್ನು ಶಿಲ್ಪಾ ಶೆಟ್ಟಿ ವಿಚಾರಕ್ಕೆ ಬರುವುದಾದರೆ, ಫಿಟ್​ನೆಸ್​ ಬೆಡಗಿ ಶಿಲ್ಪಾ ಸಿಹಿ ಪದಾರ್ಥಗಳಿಂದ ದೂರವೇ ಉಳಿದವರು. 

 

ಆದರೂ ಅವರು ಆಗಾಗ್ಗೆ ಇಂಥ ಸಿಹಿಗಳನ್ನು ತಿನ್ನುವುದು ಉಂಟು. ಅಷ್ಟಕ್ಕೂ ಅವರಿಗೆ ಕರ್ನಾಟಕವೇನೂ ಹೊಸದಲ್ಲವಲ್ಲ. ಮಂಗಳೂರಿನ ಬೆಡಗಿ ಕನ್ನಡತಿ ಇವರು. ಇಲ್ಲಿಯ ಪರಿಚಯವೂ ಚೆನ್ನಾಗಿಯೇ ಇದೆ. ಇದೀಗ ಮೈಸೂರಿನ ಮೈಸೂರು ಪಾಕ್​ ಮತ್ತು ಇತರ ಖಾದ್ಯಗಳನ್ನು ತಮ್ಮ ತಂಡದ ಜೊತೆ ಸವಿದಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅವರು ತಿನ್ನುವುದನ್ನು ನೋಡುತ್ತಿದ್ದರೆ, ನೋಡುಗರಿಗೆ ಬಾಯಲ್ಲಿ ನೀರು ಬರುವುದಂತೂ ದಿಟ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News