ನಾನು ಮನೆಗೆ ಬರಬೇಕು ಅಂದ್ರೆ ಗುಂಡು-ತುಂಡು ಬೇಕೇ ಬೇಕು ಅಂದ ಪತ್ನಿ; ಪತಿ ಮಾಡಿದ್ದೇನು..?

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನೇಹಾಳ ನಡವಳಿಕೆಯಲ್ಲಿ ಬದಲಾವಣೆಯಾಗಿದೆ. ಪ್ರತಿದಿನ ಗಂಟೆಗಟ್ಟಲೇ ಫೋನ್‌ನಲ್ಲಿ ಮಾತನಾಡುತ್ತಿದ್ದ ನೇಹಾ, ಮನೆಯಲ್ಲೇ ಮದ್ಯಪಾನ ಮಾಡಲು ಪ್ರಾರಂಭಿಸಿದ್ದಳಂತೆ. ರಕ್ಷಾಬಂಧನಕ್ಕೆಂದು ತವರು ಮನೆಗೆ ಹೋದ ಆಕೆ ಮತ್ತೆ ಗಂಡನ ಮನೆಗೆ ಮರಳಲೇ ಇಲ್ಲವಂತೆ.

Written by - Puttaraj K Alur | Last Updated : Mar 24, 2024, 09:48 AM IST
  • ಮನೆಗೆ ವಾಪಸ್‌ ಬರಲು ಆಲ್ಕೋಹಾಲ್‌ ಮತ್ತು ನಾನ್‌ವೇಜ್‌ ಡಿಮ್ಯಾಂಡ್‌ ಮಾಡಿದ ಪತ್ನಿ
  • ಪತ್ನಿಯ ವಿಚಿತ್ರ ಬೇಡಿಕೆಯನ್ನು ಈಡೇರಿಸಲಾಗದೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತಿ
  • ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಕುಶಾಲ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆ
ನಾನು ಮನೆಗೆ ಬರಬೇಕು ಅಂದ್ರೆ ಗುಂಡು-ತುಂಡು ಬೇಕೇ ಬೇಕು ಅಂದ ಪತ್ನಿ; ಪತಿ ಮಾಡಿದ್ದೇನು..?  title=
ಪತ್ನಿ ವಿರುದ್ಧವೇ ಪತಿ ದೂರು!

Viral News: ಪತ್ನಿಯ ವಿಚಿತ್ರ ಬೇಡಿಕೆಯನ್ನು ಈಡೇರಿಸಲಾಗದೇ ಪತಿಯೊಬ್ಬ ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ನಡೆದಿದೆ. ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಕುಶಾಲ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯ ವಿಚಿತ್ರ ಬೇಡಿಕೆಯಿಂದ ರೋಸಿಹೋದ ಪತಿ ಆಕೆಯ ವಿರುದ್ಧವೂ ದೂರು ದಾಖಲಿಸಿದ್ದಾನೆ.

2023ರ ಜೂನ್‌ನಲ್ಲಿ ಗುರು-ಹಿರಿಯರ ನಿಶ್ಚಯದ ಮೇರೆಗೆ ಚಿರಾಗ್ ಮತ್ತು ನೇಹಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಮದುವೆ ಮಾತುಕತೆಯ ವೇಳೆ 2 ಲಕ್ಷ ರೂ. ನೀಡಬೇಕೆಂದು ಹೆಣ್ಣಿನ ಕಡೆಯವರು ಬೇಡಿಕೆಯಿಟ್ಟಿದ್ದರಂತೆ. ಅದರಂತೆ ಚಿರಾಗ್ ಮನೆಯವರು 2 ಲಕ್ಷ ರೂ.ವಧುದಕ್ಷಿಣೆ ನೀಡಿದ್ದರಂತೆ.

ಇದನ್ನೂ ಓದಿ: Lok Sabha Election 2024: ರಾಜ್ಯದ ಈ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಒಂದೇ ಪಕ್ಷ ಪ್ರಾಬಲ್ಯ ಇದೆ, ಆದರೆ ಈ ಬಾರಿ!

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನೇಹಾಳ ನಡವಳಿಕೆಯಲ್ಲಿ ಬದಲಾವಣೆಯಾಗಿದೆ. ಪ್ರತಿದಿನ ಗಂಟೆಗಟ್ಟಲೇ ಫೋನ್‌ನಲ್ಲಿ ಮಾತನಾಡುತ್ತಿದ್ದ ನೇಹಾ, ಮನೆಯಲ್ಲೇ ಮದ್ಯಪಾನ ಮಾಡಲು ಪ್ರಾರಂಭಿಸಿದ್ದಳಂತೆ. ರಕ್ಷಾಬಂಧನಕ್ಕೆಂದು ತವರು ಮನೆಗೆ ಹೋದ ಆಕೆ ಮತ್ತೆ ಗಂಡನ ಮನೆಗೆ ಮರಳಲೇ ಇಲ್ಲವಂತೆ. ತಾನು ಮನೆಗೆ ವಾಪಸ್ಸು ಬರಬೇಕಾದರೆ ಪ್ರತಿದಿನ ಆಲ್ಕೋಹಾಲ್ ಹಾಗೂ ನಾನ್‌ವೆಜ್ ತಂದುಕೊಡಬೇಕೆಂದು ಪತಿಗೆ ಷರತ್ತು ವಿಧಿಸಿದ್ದಳಂತೆ. ನೇಹಾಳಿಗೆ ಹೀಗೆ ಮಾಡದಂತೆ ಚಿರಾಗ್ ಹಾಗೂ ಆತನ ಕುಟುಂಬಸ್ಥರು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲವಂತೆ.   

ತನ್ನ ಆಲ್ಕೋಹಾಲ್ ಮತ್ತು ನಾನ್‌ವೆಜ್ ಬೇಡಿಕೆ ಈಡೇರಿಸದ ಕಾರಣ ನೇಹಾಳು ಗಂಡನ ಮನೆಗೆ ಹೋಗುವುದಿಲ್ಲವೆಂದು ಹಠ ಮಾಡಿದ್ದಾಳೆ. ಇದರಿಂದ ಬೇಸತ್ತ ಚಿರಾಗ್ ಪತ್ನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಪತ್ನಿಯ ವಿರುದ್ಧ ಪತಿ ಎಫ್‌ಐಆರ್ ದಾಖಲಿಸಿದ್ದು, ಕುಶಾಲಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ನೇಹಾ ಮತ್ತು ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಾರಂತೆ.

ಇದನ್ನೂ ಓದಿ: ಮಾರ್ಚ್ 28ರವರೆಗೆ ನ್ಯಾಯಾಂಗ ಬಂಧನ: ಜೈಲಿನಲ್ಲೇ ಹೋಳಿ ಆಚರಿಸಲಿರುವ ಅರವಿಂದ್‌ ಕೇಜ್ರಿವಾಲ್!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News