ಹರೆಯದ ಯುವತಿಯನ್ನು ವರಿಸಿದ ಈ ತಾತನ ಖುಷಿಗೆ ಪಾರವೇ ಇಲ್ಲ ! ವೈರಲ್ ವಿಡಿಯೋ

Wedding Viral Video : ಹರೆಯದ ಯುವತಿಯ ಮದುವೆ ಬೊಜ್ಜು ಬಾಯಿ ತಾತನ ಜೊತೆ. ವೈರಲ್ ಆಗಿದೆ ವಿಡಿಯೋ.

Written by - Ranjitha R K | Last Updated : Aug 9, 2023, 03:38 PM IST
  • ವೀಡಿಯೊವನ್ನು Instagram ನಲ್ಲಿ ಶೇರ್ ಮಾಡಲಾಗಿದೆ
  • ಇದು ಸಾಕಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದೆ.
  • ಈ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಹರೆಯದ ಯುವತಿಯನ್ನು ವರಿಸಿದ ಈ ತಾತನ ಖುಷಿಗೆ ಪಾರವೇ ಇಲ್ಲ ! ವೈರಲ್ ವಿಡಿಯೋ  title=

Wedding Viral Video : ನಮ್ಮ ದೇಶದಲ್ಲಿ ಮದುವೆಗಳನ್ನು ಹಬ್ಬಗಳಂತೆ ಆಚರಿಸುತ್ತಾರೆ. ಮದುವೆ ಎಂದರೆ ಅದು ಸಂತೋಷ ಮತ್ತು ಸಂಭ್ರಮ. ಇದು ವಧು-ವರರ ಜೀವನದಲ್ಲಿ ಬಹಳ ಮುಖ್ಯವಾದ ಕ್ಷಣ. ಇಲ್ಲಿ ಗಂಡು ಹೆಣ್ಣು ಮಾತ್ರ ಬಂಧದಲ್ಲಿ ಒಂದಾಗುವುದಲ್ಲದೆ ಎರಡು ಕುಟುಂಬಗಳ ಮಿಲನವಾಗುತ್ತದೆ.  

ಮದುವೆ ಸ್ವರ್ಗದಲ್ಲಿಯೇ ನಿಶಯವಾಗುತ್ತದೆ ಎನ್ನುವ ಮಾತು ಕೂಡಾ ಇದೆ. ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ಕೂಡಾ ಮೊದಲೇ ನಿರ್ಧಾರವಾಗಿರುತ್ತದೆ. ಯಾರು ಏನೇ ಮಾಡಿದರೂ ಬ್ರಹ್ಮ ಬರೆದ ಹಣೆ ಬರಹ ಬದಲಿಸುವುದು ಸಾಧ್ಯವಿಲ್ಲ ಎನ್ನುವುದನ್ನು ನಮ್ಮ ಹಿರಿಯರು ಆಗಾಗ ಹೇಳುತ್ತಿರುತ್ತಾರೆ. ಕೆಲವೊಂದು ಜೋಡಿಗಳನ್ನು ನೋಡುವಾಗ ಈ ಮಾತು ನಿಜ ಅನ್ನಿಸುತ್ತದೆ. ಇಲ್ಲಿ ನಾವು ಹೇಳುತ್ತಿರುವುದು ಅಂಥದ್ದೇ ಜೋಡಿಯ ಬಗ್ಗೆ. 

ಇದನ್ನೂ ಓದಿ : ವಿಡಿಯೋ : ಆನೆಯ ಜೊತೆ ಚೆಲ್ಲಾಟಕ್ಕೆ ಹೋದ ಯುವತಿಗೆ ಸರಿಯಾದ ಪಾಠ

ಈ ಜೋಡಿಯನ್ನು ನೋಡುವಾಗ ನಗುವುದೋ ಅಳುವುದೋ ಒಂದೂ ಗೊತ್ತಾಗುವುದಿಲ್ಲ.  ಯಾಕೆಂದರೆ ಇಲ್ಲಿ ವಧು ಇನ್ನೂ ಸಣ್ಣ ವಯಸ್ಸಿನ ಯುವತಿಯಾಗಿದ್ದರೆ, ವರ ಹಣ್ಣು ಹಣ್ಣು ಮುದುಕ. ಮುದುಕನೊಬ್ಬ ತನಗಿಂತ  ಇಷ್ಟು ವರ್ಷ ಕಿರಿಯ ಹುಡುಗಿಯನ್ನು ಹೇಗೆ ಮದುವೆಯಾಗಿದ್ದಾರೆ ಎನ್ನುವುದೇ ಆಶ್ಚರ್ಯ. ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಈ ಮದುವೆಯ ವಿಡಿಯೋ ಶೇರ್ ಆಗಿದೆ.

ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಯುವತಿಯೊಬ್ಬಳು ವಧುವಿನ  ಧಿರಸಿನಲ್ಲಿ ಕಾಣಿಸಿಕೊಂಡರೆ, ಪಕ್ಕದಲ್ಲಿಯೇ ಶೇರ್ವಾನಿ ತೊಟ್ಟು ವರನ ಗೆಟಪ್‌ನಲ್ಲಿರುವ ಮುದುಕನನ್ನು ಕಾಣಬಹುದು. ತಾತ ವರನ ಸಂತಸವನ್ನು ವರ್ಣಿಸುವುದೇ ಸಾಧ್ಯವಿಲ್ಲ.  ಹಾಗಂತ ವಧುವೇನು ಬೇಸರದಿಂದ ಇಲ್ಲ. ವಧು ಕೂಡಾ ಸಂಭ್ರಮಿಸುತ್ತಿರುವುದನ್ನು ಗಮನಿಸಬಹುದು. ಇಬ್ಬರ ಕುಟುಂಬಸ್ಥರು ವಿಡಿಯೋ, ಫೋಟೋ ತೆಗೆಯುತ್ತಿರುವುದನ್ನು ಕೂಡಾ ವಿಡಿಯೋದಲ್ಲಿ ಕಾಣಬಹುದು. 

 

ಇದನ್ನೂ ಓದಿ : ಸಫಾರಿಗಳ ಕಿರುಚಾಟಕ್ಕೆ ಹೆದರಿದ ಘೇಂಡಾ ಮೃಗ ಮಾಡಿದ್ದೇನು ? ವಿಡಿಯೋ ನೋಡಿ

ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ Instagram ನಲ್ಲಿ arfat_sikdar ಅವರು ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿವೆ. ಈ ಬಗ್ಗೆ ನೆಟ್ಟಿಗರು ಕೂಡಾ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News