ಮಂಟಪಕ್ಕೆ ಆಗಮಿಸುತ್ತಿರುವ ವಧುವ ಕಂಡು ಮನಸೋತ ವರ ಎಲ್ಲೆರೆದುರೇ ಮುತ್ತಿಟ್ಟಾಗ .....ಇಲ್ಲಿದೆ ವಿಡಿಯೋ !

Wedding Video : ಇಲ್ಲಿ ದೇವತೆಯಂತೆ ತಯಾರಾಗಿ ಬಂದ ತನ್ನ ವಧುವನ್ನು ಕಂಡು ವರನ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಕಣ್ಣಂಚಲ್ಲಿ ನೀರು ಕೂಡಾ ಜಿನುಗುತ್ತದೆ.    

Written by - Ranjitha R K | Last Updated : Sep 12, 2023, 04:11 PM IST
  • ಮದುವೆ ಅನ್ನುವುದು ಜೀವನದ ಅದ್ಭುತ ಕ್ಷಣ.
  • ಈ ಕ್ಷಣ ತಮ್ಮ ಬಾಳಲ್ಲಿ ಬರಲಿ ಎನ್ನುವ ಬಯಕೆ ಬಹುತೇಕರದ್ದು.
  • ವಧು - ವರನ ಮನಸ್ಸಿನ ಭಾವ ಹೇಗಿರುತ್ತದೆ
ಮಂಟಪಕ್ಕೆ ಆಗಮಿಸುತ್ತಿರುವ ವಧುವ ಕಂಡು ಮನಸೋತ ವರ ಎಲ್ಲೆರೆದುರೇ ಮುತ್ತಿಟ್ಟಾಗ .....ಇಲ್ಲಿದೆ ವಿಡಿಯೋ ! title=

Wedding Video : ಮದುವೆ ಅನ್ನುವುದು ಜೀವನದ ಅದ್ಭುತ ಕ್ಷಣ. ಈ ಕ್ಷಣ ತಮ್ಮ ಬಾಳಲ್ಲಿ ಬರಲಿ ಎನ್ನುವ ಬಯಕೆ ಬಹುತೇಕರದ್ದು. ಹೆಣ್ಣಾಗಲಿ ಗಂಡಾಗಲಿ ಮದುವೆಯ ದಿನ ನಿಗದಿಯಾದ ಮೇಲಂತೂ ಮದುವೆಯ ಬಗ್ಗೆ ಕಾಣುವ ಕನಸು ಕೂಡಾ ದುಪ್ಪಟ್ಟಾಗುತ್ತದೆ. ಮದುವೆಗೆ ಯಾವ ರೀತಿ ರೆಡಿಯಾಗಬೇಕು, ಎಂಟ್ರಿ ಹೇಗಿರಬೇಕು? ವೇದಿಕೆ ಅಲಂಕಾರ ಹೀಗೆಯೇ ಇದ್ದರೆ ಚೆನ್ನ ಹೀಗೆ ಹತ್ತು ಹಲವು ಯೋಜನೆಗಳು ಅಲ್ಲಿ ಮನೆ ಮಾಡಿ ಬಿಡುತ್ತವೆ. 

ವಧು - ವರನ ಮನಸ್ಸಿನ ಭಾವ : 
ಮದುವೆಗಿಂತ ಮುನ್ನ ಹುಡುಗಿಯನ್ನು ನೋಡಿದ್ದರೂ, ಪಾರ್ಕ್- ಸಿನಿಮಾ ಎಂದು ಸುತ್ತಿದ್ದರೂ, ಗಂಟೆ ಗಟ್ಟಲೆ ಹರಟಿದ್ದರೂ ಮದುವೆಯ ದಿನ ತನ್ನಾಕೆಯನ್ನು ನೋಡುವ ತವಕ ಇದೆಯಲ್ಲ ಅದನ್ನು ವರ್ಣಿಸುವುದು ಸಾಧ್ಯವೇ ಇಲ್ಲ. ಅದೇ  ರೀತಿ ಹುಡುಗಿ ಕೂಡಾ ಈ ಭೂಮಿ ಮೇಲಿನ ಸುಂದರ ವಧು ನಾನೇ ಆಗಿರಬೇಕು ಎನ್ನುವ ಭಾವನೆಯಿಂದಲೇ ಸಿಂಗಾರಗೊಳ್ಳುತ್ತಾಳೆ. 

ಇದನ್ನೂ ಓದಿ : ಮಂಟಪದಲ್ಲೇ ಗುಟ್ಕಾ ಜಗಿತಿದ್ದ ವರ… ರಪ್ ರಪ್ ಅಂತ ಬಾರಿಸಿಯೇ ಬಿಟ್ಳು ವಧು! ಪೇಚಿಗೆ ಸಿಲುಕಿದ ವರ ಕಡೆಗೆ ಮಾಡಿದ್ದು.. ವಿಡಿಯೋ ನೋಡಿ

ಮದುವೆ ಧಿರಿಸಿನಲ್ಲಿ ಎದರು ಬಂದಾಗ : 
ಹೀಗೆ ಸರ್ವ ರೀತಿಯಲ್ಲಿ ಅಲಂಕಾರಗೊಂಡು ವಧು ವಿವಾಹ ಮಂಟಪದತ್ತ  ನಡೆಯುವಾಗ ತನ್ನ ಇನಿಯನಿಗೆ ತಾನು ಬಿಟ್ಟರೆ ಈ ಭೂಮಿಯಲ್ಲಿ ಮತ್ಯಾರೂ ಸುಂದರಿ ಎನಿಸಲೇ ಬಾರದು ಎಂದುಕೊಂಡೇ ಹೆಜ್ಜೆ ಹಾಕುತ್ತಾಳೆ. ಮದುವೆ ಧಿರಿಸಿನಲ್ಲಿ ತನ್ನರಸಿಯನ್ನು ಕಂಡು ತಾನೇ ಭಾಗ್ಯವಂತ ಎಂದು ವರ ಕೂಡಾ ಬಿಗಿಯುಸಿರೆಳೆಯುತ್ತಾಳೆ. ಈ ವಿಡಿಯೋ ನೋಡಿದರೆ ಈ ಎಲ್ಲಾ ಮಾತುಗಳು ಅಕ್ಷರಶಃ ಸತ್ಯ ಎನಿಸುತ್ತದೆ. 

ಮನಸೂರೆಗೊಳ್ಳುತ್ತಿದೆ ವಿಡಿಯೋ :  
ಇಲ್ಲಿ ದೇವತೆಯಂತೆ ತಯಾರಾಗಿ ಬಂದ ತನ್ನ ವಧುವನ್ನು ಕಂಡು ವರನ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಕಣ್ಣಂಚಲ್ಲಿ ನೀರು ಕೂಡಾ ಜಿನುಗುತ್ತದೆ.  ತನ್ನ ಎದುರು ಅಪ್ಸರೆಯೇ ಬಂದು ನಿಂತ ಅನುಭವ ಈ ವರನದ್ದು. ವಧುವಿನ ಕೈಯ್ಯನ್ನು ತನ್ನ ಕೈಯೊಳಗೆ ತೆಗೆದುಕೊಂಡ ವರ ಮುತ್ತಿಡಬಹುದೇ ಎಂದು ಬಹಳ ಸಭ್ಯವಾಗಿ ಅನುಮತಿ ಕೂಡಾ ಕೇಳುತ್ತಾನೆ. ಆ ಜೋಡಿಯ ಅದ್ಭುತ ಕ್ಷಣಗಳ ವಿಡಿಯೋ ಇಲ್ಲಿದೆ.

 

ಇದನ್ನೂ ಓದಿ : Google ನಲ್ಲಿ 'ಜವಾನ್' ಅಂತಾ ಟೈಪ್ ಮಾಡಿ ಹುಡುಕಾಟ ನಡೆಸಿದರೆ ಏನ್ ಬರುತ್ತಿದೆ ನೀವೇ ನೋಡಿ!

ಈ ವಿಡಿಯೋವನ್ನು ಇಲ್ಲಿಯವರೆಗೆ ಮಿಲಿಯನ್ ಗಟ್ಟಲೆ ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ವೀಕ್ಷಿಸಿದ ಬಹುತೇಕ ಮಂದಿ ತಮ್ಮ ಬಾಳಿನಲ್ಲಿಯೂ ಅಂಥಹ ವರ ಬರಲಿ ಎನ್ನುವುದೇ ಬಯಕೆ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಈ ವಿಡಿಯೋವನ್ನು sucheetah and thebasics.woman ಎನ್ನುವ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಲಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News