Viral Video: ಮದುವೆ ಮಂಟಪಕ್ಕೆ ನುಗ್ಗಿದ ಕೋತಿ ವರನ ತಲೆ ಮೇಲೆ ಕುಳಿತು ಏನು ಮಾಡಿದೆ ನೋಡಿ

Wedding Viral Video: ಮದುವೆ ಮಂಟಪದಲ್ಲಿ ಕುಳಿತು ವಧು-ವರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾ ಪರಸ್ಪರ ತಲೆಮೇಲೆ ಅಕ್ಕಿಕಾಳು ಹಾಕುತ್ತಿರುತ್ತಾರೆ. ಈ ವೇಳೆ ಬಂದ ಮಂಗ ಮಾಡಿದ್ದೇನು ಗೊತ್ತಾ?

Written by - Puttaraj K Alur | Last Updated : Mar 22, 2023, 09:18 AM IST
  • ಮದುವೆ ಮಂಟಪಕ್ಕೆ ಏಕಾಏಕಿ ನುಗ್ಗಿ ಅವಾಂತರ ಸೃಷ್ಟಿಸಿದ ಮಂಗ
  • ವರನ ತಲೆ ಮೇಲೆ ಕುಳಿತು ವಧುವಿನ ತಲೆಗೆ ಬಡಿದು ಕೋತಿ ಎಸ್ಕೇಪ್
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಮದುವೆ ಮಂಟಪಕ್ಕೆ ನುಗ್ಗಿದ ಕೋತಿ ವರನ ತಲೆ ಮೇಲೆ ಕುಳಿತು ಏನು ಮಾಡಿದೆ ನೋಡಿ title=
ಮದುವೆಯಲ್ಲಿ ಮಂಗನ ಗಲಾಟೆ!

ನವದೆಹಲಿ: ಮದುವೆಯ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ರೀತಿಯ ವಿಡಿಯೋಗಳನ್ನು ನೋಡಿ ನೀವು ನಗು ನಿಯಂತ್ರಿಸಲು ಸಾಧ್ಯವಿಲ್ಲ. ಅನೇಕ ಮದುವೆ ವಿಡಿಯೋಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ವಿಚಿತ್ರ ಮತ್ತು ತಮಾಷೆಯ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿ, ಜನರನ್ನು ನಗೆಗಡಲಲ್ಲಿ ತೇಲಿಸುತ್ತದೆ.

ಅನೇಕ ಮದುವೆಗಳಲ್ಲಿ ಪ್ರಾಣಿಗಳು ಎಂಟ್ರಿ ಕೊಟ್ಟು ಜನರನ್ನು ಹೌಹಾರುವಂತೆ ಮಾಡುತ್ತವೆ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ್ರೆ ನೀವು ದಂಗಾಗುತ್ತೀರಿ. ಮಂಗವೊಂದು ಮದುವೆಗೆ ಬಂದು ಅನಾಹುತ ಸೃಷ್ಟಿಸಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: 80 ಸಾವಿರ ಪೊಲೀಸರಿದ್ದರೂ ಅಮೃತಪಾಲ್ ಎಸ್ಕೇಪ್ ಆಗಿದ್ದು ಹೇಗೆ? ಪಂಜಾಬ್ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಮದುವೆಯಲ್ಲಿ ಮಂಗನ ಗಲಾಟೆ!

ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ  ವಧು-ವರರು ಮದುವೆ ಮಂಟಪದಲ್ಲಿ ಕುಳಿತು ವಿಧಿ-ವಿಧಾನಗಳನ್ನು ನೆರವೇರಿಸುತ್ತಿರುತ್ತಾರೆ. ಕುಟುಂಬದವರು ಮತ್ತು ಸಂಬಂಧಿಕರು ಸಹ ಸುತ್ತಲೂ ಕುಳಿತಿದ್ದಾರೆ. ವಧು-ವರರು ಪರಸ್ಪರ ತಲೆಯ ಮೇಲೆ ಅಕ್ಕಿಕಾಳು ಹಾಕುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆಯೇ ಎಲ್ಲಿಂದಲೂ ಬಂದ ಕೋತಿಯೊಂದು ವರನ ತಲೆಮೇಲೆ ಕುಳಿತಿದೆ. ವರನ ತಲೆಗೆ ಬಡಿದ ಕೋತಿ ವಧುವಿನ ತಲೆಮೇಲೆ ಹಾರಿ ಎಸ್ಕೇಪ್ ಆಗಿದೆ.

ಕೋತಿಯ ಈ ಮಂಗಾಟಕ್ಕೆ ವರ-ವಧು ಸೇರಿದಂತೆ ಅಲ್ಲಿ ಕುಳಿತಿದ್ದವರೆಲ್ಲರೂ ಒಂದುಕ್ಷಣ ಬೆಚ್ಚಿಬಿದ್ದಿದ್ದಾರೆ. ಕೋತಿ ಎಲ್ಲಿಂದ, ಹೇಗೆ ಮತ್ತು ಏಕೆ ಮದುವೆ ಮಂಟಪಕ್ಕೆ ನುಗ್ಗಿತು? ಅಂತಾ ಅಲ್ಲಿದ್ದವರೆಲ್ಲರೂ ತಲೆಕೆಡಿಸಿಕೊಂಡಿದ್ದಾರೆ. ಕೆಲವೇ ಸೆಕೆಂಡ್‍ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು telugu.beats_1_4_3 ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಲಕ್ಷಾಂತರ ಜನರು ಈ ವಿಡಿಯೋ ವೀಕ್ಷಿಸಿದ್ದು, 2.5 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಅನೇಕ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.  

ಇದನ್ನೂ ಓದಿ: ದೆಹಲಿಯಲ್ಲಿ ಕಂಪಿಸಿದ ಭೂಮಿ, ಆತಂಕದಿಂದ ಹೊರಗೆ ಬಂದ ಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News