ಯಾದಗಿರಿಯಲ್ಲಿ ಅಮಿತ್ ಷಾ ರೋಡ್ ಶೋ

  • Zee Media Bureau
  • Apr 25, 2023, 02:58 PM IST

ರಾಜ್ಯ ವಿಧಾನಸಭಾ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿಗೌಡ ಮುದ್ನಾಳ ಪರ ಪ್ರಚಾರ ನಡೆಸಲು ಬಿಜೆಪಿ ಚುನಾವಣಾ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ  ಸಂಜೆ 4-20 ನಿಮಿಷಕ್ಕೆ ವಿಜಯಪುರದಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿಗೆ ಬಂದಿಳಿಯಲಿದ್ದಾರೆ. ಸಂಜೆ 4.20 ರಿಂದ ಯಾದಗಿರಿ ನಗರದ ಪದವಿ ಮಹಾವಿದ್ಯಾಲಯದಿಂದ (ಡಿಗ್ರಿ ಕಾಲೇಜಿನಿಂದ)ನಿಂದ ಸುಭಾಷ ಸರ್ಕಲ್ ಮಾರ್ಗವಾಗಿ ಶಾಸ್ತ್ರೀ ವೃತ್ತದವರೆಗೆ ಸುಮಾರು ಒಂದು ಕಿಲೋ ಮೀಟರ್ ವರೆಗೂ ನಡೆಯಲಿರುವ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾಗಿ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿಗೌಡ ಮುದ್ನಾಳ ಪರ ಮತಯಾಚನೆ ಮಾಡಲಿದ್ದಾರೆ. ಷಾ ಆಗಮನದ ಹಿನ್ನೆಲೆ ಈಗಾಗಲೇ ಎನ್ ಎಸ್ ಜಿ ಭದ್ರತಾ ಪಡೆಯ ಮುಖ್ಯಸ್ಥರು ಕಲಬುರಗಿ ಈಶಾನ್ಯ ವಲಯ ಡಿಐಜಿ ಅನುಪಮ ಅಗರವಾಲ್, ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ನೇತೃತ್ವದ ತಂಡ ನಗರದ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಷಾ ಆಗಮನದ ವೇಳೆ ಯಾವುದೇ ಲೋಪದೋಷಗಳಾಗದಂತೆ ಮುನ್ನೆಚ್ಚರಿಕೆ ಕ್ರಮಾವಾಗಿ ಪರಿಶೀಲನೆ ಮಾಡಲಾಯಿತು. ಅಮಿತ್ ಷಾ ಸಂಚರಿಸುವ ರಸ್ತೆಯನ್ನು ಈಗಾಗಲೇ ಎನ್ ಎಸ್ ಜಿ ಪಡೆಯ ಅಧಿಕಾರಿಗಳು ತಮ್ನ ಸುಪರ್ದಿಗೆ ತೆಗೆದುಕೊಂಡು ನಗರದಾಧ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.

Trending News