SMS Scrubbing Policy: ನೂತನ SMS ನಿಯಮಗಳನ್ನು 7 ದಿನಗಳ ಅವಧಿಗೆ ಹಿಂಪಡೆದ TRAI, ಕಾರಣ ಇಲ್ಲಿದೆ

SMS Scrubbing Policy: ಭಾರತೀಯ ದೂರ ಸಂಪರ್ಕ ನಿಯಂತ್ರಕ ಪ್ರಾಧಿಕಾರ (TRAI) ಮಂಗಳವಾರ ವಾಣಿಜ್ಯಾತ್ಮಕ ಟೆಕ್ಸ್ಟ್ ಮೆಸೇಜ್ ಗಳ ಮೇಲೆ ವಿಧಿಸಿಲಾಗಿದ್ದ ನೂತನ ನಿಯಮಗಳನ್ನು ಒಂದು ವಾರದ ಅವಧಿಗೆ ಸ್ಥಗಿತಗೊಳಿಸಿದೆ.

Written by - Nitin Tabib | Last Updated : Mar 9, 2021, 10:40 PM IST
  • SMS Scrubbling Policyಗೆ ತಾತ್ಕಾಲಿಕ ತಡೆ.
  • ಏಳು ದಿನಗಳ ತಾತ್ಕಾಲಿಕ ತಡೆ ನೀಡಿದ TRAI.
  • ನೂತನ ನಿಯಮಾವಳಿ ಅನುಸರಿಸಲು ಬ್ಯಾಂಕ್ ಹಾಗೂ ಇ-ಕಾಮರ್ಸ್ ಕಂಪನಿಗಳಿಗೆ ಸಿಕ್ತು ಸಮಯಾವಕಾಶ
SMS Scrubbing Policy: ನೂತನ SMS ನಿಯಮಗಳನ್ನು 7 ದಿನಗಳ ಅವಧಿಗೆ ಹಿಂಪಡೆದ TRAI, ಕಾರಣ ಇಲ್ಲಿದೆ title=
SMS Scrubbing Policy (File Photo)

ನವದೆಹಲಿ : SMS Scrubbing Policy - ಭಾರತೀಯ ದೂರ ಸಂಪರ್ಕ ನಿಯಂತ್ರಕ ಪ್ರಾಧಿಕಾರ (TRAI) ಮಂಗಳವಾರ ವಾಣಿಜ್ಯಾತ್ಮಕ ಟೆಕ್ಸ್ಟ್ ಮೆಸೇಜ್ ಗಳ ಮೇಲೆ ವಿಧಿಸಿಲಾಗಿದ್ದ ನೂತನ ನಿಯಮಗಳನ್ನು ಒಂದು ವಾರದ ಅವಧಿಗೆ ಸ್ಥಗಿತಗೊಳಿಸಿದೆ. ಬ್ಯಾಂಕಿಂಗ್, ಹಣ ಪಾವತಿ ಹಾಗೂ ಇತರೆ ವ್ಯವಹಾರಗಳಲ್ಲಿ SMS ಹಾಗೂ OTP ಡಿಲೆವರಿಯಲ್ಲಾಗುತ್ತಿರುವ ವ್ಯತ್ಯಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ನೂತನ ನಿಯಮಗಳು ಸೋಮವಾರ ಅಂದರೆ ನಿನ್ನೆಯೇ ಜಾರಿಗೆ ಬಂದಿದ್ದವು. ತಾತ್ಕಾಲಿಕವಾಗಿ ಈ ನಿಯಮಗಳನ್ನು ಸ್ಥಗಿತಗೊಳಿಸಿದ ಕಾರಣ ಗ್ರಾಹಕರಿಗೆ ಸಂದೇಶಗಳು ಮತ್ತು ಒಟಿಪಿಗಳನ್ನು ಕಳುಹಿಸುವಲ್ಲಿ ಹೊಸ ನಿಯಮಾವಳಿಗಳನ್ನು ಅನುಸರಿಸಲು ವಾಣಿಜ್ಯ ಘಟಕಗಳಿಗೆ ಹೆಚ್ಚಿನ ಸಮಯಾವಕಾಶ ಸಿಗಲಿದೆ.

ಇದನ್ನೂ ಓದಿ- SMS Scrubbing Policy ಜಾರಿ, OTP ಸಿಗದ ಕಾರಣ ಬ್ಯಾಂಕಿಂಗ್, ಇ-ಕಾಮರ್ಸ್ ಗ್ರಾಹಕರ ಪರದಾಟ

ಮಾರ್ಚ್ 9 ರಂದು SMS ಸೇವೆಗಳಲ್ಲಿ ಉಂಟಾದ ತಾಂತ್ರಿಕ ಅಡಚಣೆಯ ಕಾರಣ  ಹಲವು ಬಳಕೆದಾರರು ತೊಂದರೆ ಅನುಭವಿಸಿದ್ದರು. ಈ ಕಾರಣದಿಂದ ಬ್ಯಾಂಕ್ ಅಥವಾ ಇ-ಕಾಮರ್ಸ್ ವೇದಿಕೆಗಳಿಗೆ OTPಯಂತಹ ಮಹತ್ವಪೂರ್ಣ ಸಂದೇಶಗಳು ತಲುಪುವಲ್ಲಿ ವಿಳಂಬವಾಗುತ್ತಿತ್ತು. ಈ ತಾಂತ್ರಿಕ ಅಡಚಣೆಯ ಹಿನ್ನೆಲೆ ಡೆಬಿಟ್ ಕಾರ್ಡ್ ವ್ಯವಹಾರಗಳ ಜೊತೆಗೆ Co-Win Appನ ಹೆಸರು ನೊಂದಣಿಯಲ್ಲಿಯೂ ಕೂಡ ಜನರಿಗೆ ಅಡಚಣೆ ಎದುರಾಗಿತ್ತು.  SMS ನಿಯಮಾವಳಿಗಳ ಹಿನ್ನೆಲೆ ಜನರಿಗೆ ಈ ತೊಂದರೆಯಾಗುತ್ತಿದೆ ಎಂದು ಕ್ಷೇತ್ರದ ತಜ್ಞರು ಹೇಳಿದ್ದರು. ಹೊಸ ನಿಯಮಾವಳಿಗಳು ಜಾರಿಯಾದ ಬಳಿಕ ಜನರ ಬಳಿ SMS ತಲುಪುವ ಮುನ್ನ ಅವುಗಳನ್ನು ಪರಿಷ್ಕರಣೆಗೆ ಒಳಪಡಿಸಲಾಗುತ್ತಿತ್ತು. ಈ ಕಾರಣದಿಂದ SMS ತಲುಪುವಲ್ಲಿ ವಿಳಂಬವಾಗುತ್ತಿತ್ತು.

ಇದನ್ನೂ ಓದಿ- New Facebook Update: ಭಾರತದ ಬಳಕೆದಾರರಿಗೆ ಅದ್ಭುತ ವೈಶಿಷ್ಟ್ಯ ಬಿಡುಗಡೆಗೊಳಿಸಿದ Facebook

ಈ ಕುರಿತು ಇತರೆ ಕಂಪನಿಗಳಿಗೆ ಟೆಲಿಕಾಂ ಕಂಪನಿಗಳು ಈ ಮೊದಲೇ ಸೂಚನೆ ನೀಡಿದ್ದವು
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಟೆಲಿಕಾಂ ಕಂಪನಿಗಳು, ಈ ಮೊದಲೇ ತಾವು ವಿಭಿನ್ನ ಇ-ಕಾಮರ್ಸ್ ಕಂಪನಿಗಳಿಗೆ ಹಾಗೂ ಬ್ಯಾಂಕ್ ಗಳಿಗೆ ಮಾರ್ಚ್ 7 ರೊಳಗೆ ಕಂಟೆಂಟ್ ಕಂಟಪ್ಲೇಟ್ ನೋಂದಣಿ ಮಾಡಲು ಸೂಚಿಸಿರುವುದಾಗಿ ಹೇಳಿವೆ. ಆದರೆ, ಕಂಪನಿಗಳು ಇದನ್ನು ಪೂರ್ಣಗೊಳಿಸಿಲ್ಲ. ಈ ಕಾರಣದಿಂದ ಅವುಗಳ ಗ್ರಾಹಕರಿಗೆ OTP ಕಳುಹಿಸಲಾಗಲಿಲ್ಲ ಎಂಬ ಸ್ಪಷ್ಟೀಕರಣ ನೀಡಿವೆ. ಅದೇನೇ ಇದ್ದರೂ ಕೂಡ ಪ್ರಸ್ತುತ ಗ್ರಾಹಕರಿಗೆ ಎದುರಾಗಿದ್ದ ಈ ಸಮಸ್ಯೆಗೆ ಇದೀಗ ತಾತ್ಕಾಲಿಕ ನೆಮ್ಮದಿ ಸಿಕ್ಕಿರುವುದಂತು ನಿಜ.

ಇದನ್ನೂ ಓದಿ-WhatsApp Scam - ಎಚ್ಚರ! WhatsApp ನಲ್ಲಿ ನಿಮಗೂ ಈ ಸಂದೇಶ ಬಂದಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News