7 ಕೋಟಿ ರೂಪಾಯಿಗೆ ಮಾರಾಟವಾಯಿತು ಸಿಮ್ ಕಾರ್ಡ್ !ಈ ಸಿಮ್ ಗಾಗಿ ಕೋಟಿಗಟ್ಟಲೆ ಹಣ ಹರಿಸುವ ಹಿಂದಿನ ಕಾರಣ ?

Dubai Unique Sim Card Number:ಯುಎಇಯಲ್ಲಿ, ನಿರ್ದಿಷ್ಟ ನಂಬರ್ ಪ್ಲೇಟ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಹೊಂದಿರುವುದು ಪ್ರತಿಷ್ಠೆಯ ಸಂಕೇತ. ಹಾಗೆಯೇ ವಿಶೇಷ ಮೊಬೈಲ್ ಸಂಖ್ಯೆ 058-7777777 ರ ಮೇಲೆ ಬಿಡ್ ನಡೆದಿದೆ. 

Written by - Ranjitha R K | Last Updated : Apr 5, 2024, 11:22 AM IST
  • ದುಬೈನಲ್ಲಿರುವ ಜನರು ಹಣವನ್ನು ಖರ್ಚು ಮಾದುವುದರಲ್ಲಿ ಎತ್ತಿದ ಕೈ
  • ವಿಶೇಷ ಮೊಬೈಲ್ ಸಂಖ್ಯೆ 058-7777777 ರ ಮೇಲೆ ಬಿಡ್
  • ಸಿಮ್ ಕಾರ್ಡ್ ಗಾಗಿಯೂ ಕೋಟಿಗಟ್ಟಲೆ ದುಡ್ಡು
7 ಕೋಟಿ ರೂಪಾಯಿಗೆ ಮಾರಾಟವಾಯಿತು ಸಿಮ್ ಕಾರ್ಡ್ !ಈ ಸಿಮ್ ಗಾಗಿ ಕೋಟಿಗಟ್ಟಲೆ ಹಣ ಹರಿಸುವ ಹಿಂದಿನ ಕಾರಣ ?  title=

Dubai Unique Sim Card Number : ದುಬೈನಲ್ಲಿರುವ ಜನರು ಹಣವನ್ನು ಖರ್ಚು ಮಾಡಲು ಮುಂದೆ ಹಿಂದೆ ಯೋಚಿಸುವುದಿಲ್ಲ ಎನ್ನುವ ಮಾತಿದೆ. ಇದು ನಿಜ ಎಂದು ಸಾಬೀತುಪಡಿಸುವ ಮತ್ತೊಂದು ಘಟನೆ ಇದೀಗ ಇಲ್ಲಿ ನಡೆದಿದೆ.ಇತ್ತೀಚೆಗೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಅನೇಕ ಶ್ರೀಮಂತರು 'ದಿ ಮೋಸ್ಟ್ ನೋಬಲ್ ನಂಬರ್' ಎಂಬ ವಿಶೇಷ ಹರಾಜಿನಲ್ಲಿ ಭಾಗವಹಿಸಿದ್ದರು. ಯುಎಇಯಲ್ಲಿ, ನಿರ್ದಿಷ್ಟ ನಂಬರ್ ಪ್ಲೇಟ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಹೊಂದಿರುವುದು ಪ್ರತಿಷ್ಠೆಯ ಸಂಕೇತ. ಹಾಗೆಯೇ ವಿಶೇಷ ಮೊಬೈಲ್ ಸಂಖ್ಯೆ 058-7777777 ರ ಮೇಲೆ ಬಿಡ್ ನಡೆದಿದೆ. 

ವಿಶಿಷ್ಟ ನಂಬರ್ ಗಾಗಿ 7 ಕೋಟಿ ರೂ : 
ವಿಶೇಷ ಸಿಮ್ ಕಾರ್ಡ್ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಅಂತಿಮವಾಗಿ 32 ಲಕ್ಷ ದಿರ್ಹಮ್ ಅಂದರೆ ಸುಮಾರು 7 ಕೋಟಿ ರೂ.ಗೆ ಇದು ಹರಾಜಾಗಿದೆ. ಈ ನಂಬರ್ ನ ಹರಾಜು ಪ್ರಕ್ರಿಯೆ 1 ಲಕ್ಷ ದಿರ್ಹಮ್‌ಗಳಿಂದ (ಸುಮಾರು 22 ಲಕ್ಷ ರೂ.) ಪ್ರಾರಂಭವಾಯಿತು. ಈ ಹರಾಜಿನಲ್ಲಿ ಒಟ್ಟು 38 ಕೋಟಿ ದಿರ್ಹಮ್ (ಸುಮಾರು 86 ಕೋಟಿ ರೂ.) ಸಂಗ್ರಹವಾಗಿದ್ದು, ಅದರಲ್ಲಿ ನಿರ್ದಿಷ್ಟ ಸಂಖ್ಯೆಗಳಿರುವ ವಾಹನಗಳ ನಂಬರ್ ಪ್ಲೇಟ್ ಗಳನ್ನು ಮಾರಾಟ ಮಾಡಿ 29 ಕೋಟಿ ದಿರ್ಹಮ್ (ಸುಮಾರು 65 ಕೋಟಿ ರೂ.) ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಜನ ಮುಗಿ ಬಿದ್ದು ಖರೀದಿಸುತ್ತಿರುವ ಸ್ಕೂಟರ್ ಇದೇ! ಮಾರಾಟವಾಗಿದೆ 56ಲಕ್ಷ ಸ್ಕೂಟರ್! ಬಿಕರಿಯಲ್ಲಿ ಇದೇ ನಂಬರ್ ಒನ್

ಕಾರ್ ನಂಬರ್ ಗಳಿಗೂ ಹಣ ಖರ್ಚು ಮಾಡುವ ಜನ : 
ಇದಲ್ಲದೇ, Etisalat ಕಂಪನಿಯ ವಿಶೇಷ ನಂಬರ್ ಗಳ ಹರಾಜಿನಿಂದ 4.135 ಕೋಟಿ ದಿರ್ಹಮ್‌ಗಳು (ಸುಮಾರು ರೂ 9 ಕೋಟಿ) ಮತ್ತು ಡು ಕಂಪನಿಯ ವಿಶೇಷ ನಂಬರ್ ಗಳ  4.935 ಕೋಟಿ ದಿರ್ಹಮ್‌ಗಳು (ಸುಮಾರು 11 ಕೋಟಿ ರೂ.)  ಸಂಗ್ರಹವಾಗಿದೆ. 10 ವಿಶೇಷ ವಾಹನಗಳ ನಂಬರ್ ಪ್ಲೇಟ್‌ಗಳು ಮತ್ತು ಪ್ರಮುಖ ಟೆಲಿಕಾಂ ಕಂಪನಿಗಳಾದ ಡು ಮತ್ತು ಎಟಿಸಲಾಟ್‌ನ 21 ಮೊಬೈಲ್ ನಂಬರ್ ಗಳನ್ನು ಈ ಹರಾಜಿನಲ್ಲಿ ಸೇರಿಸಲಾಗಿತ್ತು.ಈ ಹರಾಜಿನಿಂದ ಸಂಗ್ರಹವಾದ ಹಣವನ್ನು "Dh1 Billion Mothers Endowment Campaign" ಗೆ ನೀಡಲು ನಿರ್ಧರಿಸಲಾಯಿತು. ಈ ಅಭಿಯಾನವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಪ್ರಾರಂಭಿಸಿದರು.

ಹರಾಜಿನ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. "ಇಷ್ಟು ಹಣ ಕೊಟ್ಟು ಖರೀದಿಸುವುದರಿಂದ ಏನು ಪ್ರಯೋಜನ ಎಂದು ಒಬ್ಬರು ಕೇಳಿದರೆ, ಈ ನಂಬರ್ ಪ್ರಪಂಚದಾದ್ಯಂತ ಎಲ್ಲರಿಗೂ ತಿಳಿದಿರುತ್ತದೆಯೇ ಎಂದು ಮತ್ತೊಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ. "ಈ ನಂಬರ್ ಗಳ ಹುಚ್ಚು ಯಾಕೆ ಎನ್ನುವುದೇ ಅರ್ಥವಾಗುವುದಿಲ್ಲ, "ಜನರ ಬಳಿ ತುಂಬಾ ಹಣವಿದ್ದು, ಅದನ್ನು ಸಿಮ್ ಕಾರ್ಡ್ ಗಾಗಿ ಖರ್ಚು ಮಾಡುತ್ತಿದ್ದಾರೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ಆಕರ್ಷಕ ಬೆಲೆಯಲ್ಲಿ ಟೊಯೊಟಾದ ಅರ್ಬನ್ ಕ್ರೂಸರ್ ಟೈಸರ್ ಬಿಡುಗಡೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News