Parasite In Eye: ಎರಡು ವರ್ಷಗಳಿಂದ ಮಹಿಳೆ ಕಣ್ಣಿನಲ್ಲಿ ರಕ್ತ ಹೀರುತ್ತಿದ್ದ ಪರಾವಲಂಬಿ, ಬೆಚ್ಚಿಬಿದ್ದ ವೈದ್ಯರು!

Parasite In Eye: ಮಹಿಳೆಯೊಬ್ಬರ ಎಡಗಣ್ಣಿನಲ್ಲಿ ಪರಾವಲಂಬಿಯೊಂದು ಪತ್ತೆಯಾಗಿದ್ದು ಎರಡು ವರ್ಷಗಳಿಂದ ಈ ಜೀವಿ ಮಹಿಳೆಯ ಕಣ್ಣಿನಲ್ಲಿ ರಕ್ತ ಹೀರುತ್ತಿತ್ತು ಎಂದು ತಿಳಿದುಬಂದಿದೆ. 

Written by - Yashaswini V | Last Updated : Apr 12, 2024, 01:31 PM IST
  • ಈ ಪರಾವಲಂಬಿ ಸೋಂಕಿತ ಆಹಾರ ಅಥವಾ ನೀರಿನ ಮೂಲಕ ಮನುಷ್ಯರನ್ನು ತಲುಪಬಹುದು.
  • ಹಾವುಗಳ ಸಾಮೀಪ್ಯವೂ ಪರಾವಲಂಬಿ ಸೋಂಕಿಗೆ ಕಾರಣವಾಗಬಹುದು.
  • ಕೆಲವೊಮ್ಮೆ ಹಸಿ ಹಾವಿನ ಮಾಂಸವನ್ನು ತಿನ್ನುವುದರಿಂದ ಸೋಂಕು ಉಂಟಾಗುತ್ತದೆ.
Parasite In Eye: ಎರಡು ವರ್ಷಗಳಿಂದ ಮಹಿಳೆ ಕಣ್ಣಿನಲ್ಲಿ ರಕ್ತ ಹೀರುತ್ತಿದ್ದ ಪರಾವಲಂಬಿ, ಬೆಚ್ಚಿಬಿದ್ದ ವೈದ್ಯರು!  title=

Parasite In Eye: ಮಹಿಳೆಯ ಕಣ್ಣಿನಲ್ಲಿ ಲಾರ್ವಾ ಎಂದರೆ ಪರಾವಲಂಬಿ ಜೀವಿಯೊಂದು ಕಂಡು ಬಂದಿರುವ ಘಟನೆ ಆಫ್ರಿಕಾದ ಕಾಂಗೋದಲ್ಲಿ ಬೆಳಕಿಗೆ ಬಂದಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪರಾವಲಂಬಿ ಜೀವಿಯು ಕಳೆದೆರಡು ವರ್ಷಗಳಿಂದ ಮಹಿಳೆಯ ಕಣ್ಣಿನಲ್ಲಿ ರಕ್ತ ಹೀರುತ್ತಿತ್ತು ಎಂದು ತಿಳಿದುಬಂದಿದೆ. ಮಹಿಳೆಯ ಕಣ್ಣಿನಲ್ಲಿ ಲಾರ್ವಾ ಪತ್ತೆಯಾಗಿರುವುದನ್ನು ಕಂಡು ವೈದ್ಯರೂ ಕೂಡ ಬೆಚ್ಚಿಬಿದ್ದಿದ್ದಾರೆ. 

ಏನಿದು ಘಟನೆ? 
ವಾಸ್ತವವಾಗಿ ಮಹಿಳೆಗೆ ಎಡಗಣ್ಣಿನ ಮೂಲೆಯಲ್ಲಿ ಸಣ್ಣ ಬಿಳಿ ಮುದ್ದೆಯಂತೆ ಕಾಣಿಸುತ್ತಿತ್ತು. ಆದಾಗ್ಯೂ, ಯಾವುದೇ ನೋವು ಅಥವಾ ಇನ್ನಾವುದೇ ರೀತಿಯ ಸಮಸ್ಯೆ ಇರಲಿಲ್ಲ. ಆದರೂ, ಬಿಳಿ ಮುದ್ದೆಯಂತಹ ಭಾಗವು ಸ್ವಲ್ಪ ದೊಡ್ಡದಾಗುತ್ತಿದೆ ಎಂದು ಭಾವಿಸಿದ ಮಹಿಳೆ ವೈದ್ಯರನ್ನು ಸಂಪರ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಹಲವು ಪರೀಕ್ಷೆಗಳನ್ನು ನಡೆಸಿದ ವೈದ್ಯರು (Doctors) ಆಪರೇಷನ್ ಮೂಲಕ ಗಡ್ಡೆಯನ್ನು ತೆಗೆಯಬಹುದು ಎಂಡ್ ಸೂಚಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯ ಕಣ್ಣಿನಲ್ಲಿ ದೊರೆತ ಆ ಬಿಳಿ ಬಣ್ಣದ ಮುದ್ದೆಯ ಮಾದರಿಯನ್ನು ವೈದ್ಯರು ವಿಶ್ಲೇಷಣೆಗೆ ಕಳುಹಿಸಿದಾಗ ಇದೊಂದು ಲಾರ್ವಾ (Larva) ಎಂದು ಪತ್ತೆಯಾಗಿದೆ. 

ಇದನ್ನೂ ಓದಿ- ರಕ್ತನಾಳಗಳಲ್ಲಿ ಜಿಡ್ಡುಗಟ್ಟಿ ಕುಳಿತಿರುವ ಕೊಲೆಸ್ಟ್ರಾಲ್ ಅನ್ನು ಕರಗಿ ನೀರಾಗಿಸುತ್ತದೆ ಈ ಸೊಪ್ಪು! ದಿನಕ್ಕೊಮೆ ಸೇವಿಸಿದರೆ ಸಾಕು

ಲಾರ್ವಾ ಎಂದರೇನು? 
ಲಾರ್ವಾ ವಾಸ್ತವವಾಗಿ ಪರಾವಲಂಬಿ ಜೀವಿ (Parasite).  ಆರ್ಮಿಲಿಫರ್ ಗ್ರಾಂಡಿಸ್ ಜಾತಿಯ ಈ ಪರಾವಲಂಬಿಯು ಹಾವುಗಳು ಮತ್ತು ಮೊಸಳೆಗಳಂತಹ ಸರೀಸೃಪಗಳಿಂದ ಮನುಷ್ಯರಿಗೆ ಹರಡುತ್ತದೆ. ಅಧ್ಯಯನದ ಪ್ರಕಾರ, ಈ ಪರಾವಲಂಬಿ ಸೋಂಕಿತ ಆಹಾರ (Parasite Infected Food) ಅಥವಾ ನೀರಿನ ಮೂಲಕ ಮನುಷ್ಯರನ್ನು ತಲುಪಬಹುದು. ಹಾವುಗಳ ಸಾಮೀಪ್ಯವೂ ಪರಾವಲಂಬಿ ಸೋಂಕಿಗೆ ಕಾರಣವಾಗಬಹುದು. ಕೆಲವೊಮ್ಮೆ ಹಸಿ ಹಾವಿನ ಮಾಂಸವನ್ನು ತಿನ್ನುವುದರಿಂದ ಸೋಂಕು ಉಂಟಾಗುತ್ತದೆ. 

ಮಹಿಳೆಯ ಕಣ್ಣಲ್ಲಿ ಲಾರ್ವಾ ಕಂಡು ಬರಲು ಕಾರಣವೇನು? 
ಮಹಿಳೆ ಹೆಚ್ಚಾಗಿ ಮೊಸಳೆ ಮಾಂಸವನ್ನು (Crocodile Meat) ತಿನ್ನುತ್ತಿದ್ದಳು ಎಂದು ತಿಳಿದುಬಂದಿದ್ದು ಈ ಮೊಸಳೆ ಮಾಂಸದಿಂದಲೇ ಮಹಿಳೆ ಕಣ್ಣಿಗೆ ಲಾರ್ವಾ ಸೋಂಕು ತಗುಲಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದಾರೆ. 

ಇದನ್ನೂ ಓದಿ- ಮೊಳಕೆಯೊಡೆದ ಆಲೂಗಡ್ಡೆಯನ್ನು ನೀವೂ ಬಳಸುತ್ತೀರಾ ? ದೇಹ ರೋಗಗಳ ಗೂಡಾಗಬಹುದು ಎಚ್ಚರ !

JAMA ನೇತ್ರವಿಜ್ಞಾನ ಎಂಬ ವೈದ್ಯಕೀಯ ಜರ್ನಲ್‌ನಲ್ಲಿ ಈ ಕುರಿತಂತೆ ವರದಿಯಾಗಿದೆ.  ಲೈವ್ ಸೈನ್ಸ್ ವರದಿಯ ಪ್ರಕಾರ, ಇದು ಬಹುಶಃ ಮೊಸಳೆ ಮಾಂಸದಿಂದ ಪರಾವಲಂಬಿ ಸೋಂಕಿನ ಮೊದಲ ಪ್ರಕರಣವಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ,  ಈ ಮಹಿಳೆಯ ಪ್ರಕರಣದಲ್ಲಿ, ಪರಾವಲಂಬಿಯು ಎಡಗಣ್ಣಿನ ಕಾಂಜಂಕ್ಟಿವಾ ಅಡಿಯಲ್ಲಿ ನೆಲೆಸಿತ್ತು. ಸುಮಾರು ಎರಡು ವರ್ಷಗಳಿಂದ ಮಹಿಳೆಯ ಕಣ್ಣಿನಲ್ಲಿ ರಕ್ತ ಹೀರುತ್ತಿದ್ದ ಈ ಜೀವಿ  ಸುಮಾರು 10 ಮಿಮೀ ಬೆಳೆದಿತ್ತು ಎಂದು ತಿಳಿದುಬಂದಿದೆ. 

28 ವರ್ಷದ ಮಹಿಳೆಗೆ ಆಕ್ಯುಲರ್ ಪೆಂಟಾಸ್ಟೊಮಿಯಾಸಿಸ್ ಎಂಬ ಸೋಂಕು ಇತ್ತು ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ. ಇದು 'ಪೆಂಟಾಸ್ಟೊಮಿಡ್ಸ್' ಎಂಬ ಪರಾವಲಂಬಿಗಳಿಂದ ಉಂಟಾಗುವ ಅಪರೂಪದ ಕಣ್ಣಿನ ಸೋಂಕು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News