ರಿಲಯನ್ಸ್ ಇಂಡಸ್ಟ್ರೀಸ್‌ಗೆ ನೀತಾ ಅಂಬಾನಿ ರಾಜೀನಾಮೆ : ನೀತಾ ಸ್ಥಾನಕ್ಕೆ ಇಶಾ ಅಂಬಾನಿ

RIL AGM 2023 :ನೀತಾ ಅಂಬಾನಿ   ಬೋರ್ಡ್ ನಿಂದ ಕೆಳಗಿಳಿಯಲಿದ್ದಾರೆ.  ಆದರೆ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷರಾಗಿ ಅವರು ಮುಂದುವರಿಯಲಿದ್ದಾರೆ. 

Written by - Ranjitha R K | Last Updated : Aug 28, 2023, 04:05 PM IST
  • ರಿಲಯನ್ಸ್ ಇಂಡಸ್ಟ್ರೀಸ್‌ಗೆ ನೀತಾ ಅಂಬಾನಿ ರಾಜೀನಾಮೆ
  • ನೀತಾ ಜಾಗಕ್ಕೆ ಇಶಾ ಅಂಬಾನಿ
  • ರಿಲಯನ್ಸ್ ಫೌಂಡೇಶನ್‌ ಚೇರ್ ಮ್ಯಾನ್ ಆಗಿ ಮುಂದುವರಿಕೆ
ರಿಲಯನ್ಸ್ ಇಂಡಸ್ಟ್ರೀಸ್‌ಗೆ ನೀತಾ ಅಂಬಾನಿ  ರಾಜೀನಾಮೆ :  ನೀತಾ ಸ್ಥಾನಕ್ಕೆ ಇಶಾ ಅಂಬಾನಿ  title=

RIL AGM 2023 : ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ರಾಜೀನಾಮೆ ನೀಡಿದ್ದಾರೆ. ಅವರ ಜಾಗಕ್ಕೆ ಇಶಾ ಅಂಬಾನಿ ನೇಮಕವಾಗಿದ್ದಾರೆ. ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ನಿರ್ದೇಶಕರ ಮಂಡಳಿಗೆ ನೇಮಕ ಮಾಡಲು RIL ಮಂಡಳಿ ಶಿಫಾರಸು ಮಾಡಿದೆ. ನೀತಾ ಅಂಬಾನಿ ಬೋರ್ಡ್ ನಿಂದ ಕೆಳಗಿಳಿಯಲಿದ್ದಾರೆ.  ಆದರೆ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷರಾಗಿ ಅವರು ಮುಂದುವರಿಯಲಿದ್ದಾರೆ. 

ಕಳೆದ 10 ವರ್ಷಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ 150 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ ಎಂದು ಮುಖೇಶ್ ಅಂಬಾನಿ ಎಜಿಎಂನಲ್ಲಿ ತಿಳಿಸಿದ್ದಾರೆ.  ಕಾರ್ಪೊರೇಟ್ ಗ್ರೂಪ್ ಮಾಡಿರುವ ದೊಡ್ಡ ಹೂಡಿಕೆ ಇದಾಗಿದೆ. 2023ರ ಆರ್ಥಿಕ ವರ್ಷದಲ್ಲಿ ರಿಲಯನ್ಸ್ 2.6 ಲಕ್ಷ ಹೊಸಬರಿಗೆ ಉದ್ಯೋಗಾವಕಾಶ ನೀಡಿದೆ ಎಂದು ಮುಖೇಶ್ ಅಂಬಾನಿ ಎಜಿಎಂನಲ್ಲಿ ತಿಳಿಸಿದ್ದಾರೆ. ಪ್ರಸ್ತುತ ರಿಲಯನ್ಸ್‌ನಲ್ಲಿ ಆನ್‌ರೋಲ್ ಉದ್ಯೋಗಿಗಳ ಸಂಖ್ಯೆ 3.9 ಲಕ್ಷಕ್ಕೆ ತಲುಪಿದೆ ಎಂದು ಅವರು ಹೇಳಿದ್ದಾರೆ.  

ಇದನ್ನೂ ಓದಿ : Reliance AGM 2023: ಇಂದು ಮುಖೇಶ್ ಅಂಬಾನಿಯಿಂದ ಈ 5 ಮಹತ್ವದ ಘೋಷಣೆ ಸಾಧ್ಯತೆ

ರಿಲಯನ್ಸ್ ಆದಾಯದಲ್ಲಿ ಭಾರೀ ಹೆಚ್ಚಳ : 
ರಿಲಯನ್ಸ್ ಇಂಡಸ್ಟ್ರೀಸ್‌ನ ಲಾಭ ನಷ್ಟಗಳ ಕುರಿತು ಮಾಹಿತಿ ನೀಡಿದ ಮುಖೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಏಕೀಕೃತ ಆದಾಯ 9,74,864 ಕೋಟಿ ರೂ. ಎಂದು ಹೇಳಿದ್ದಾರೆ. 2023 ರ ಹಣಕಾಸು ವರ್ಷದಲ್ಲಿ, ರಿಲಯನ್ಸ್‌ನ EBITDA 1,53,920 ಕೋಟಿ ರೂ.ಗಳಾಗಿದ್ದರೆ, ನಿವ್ವಳ ಲಾಭ 73,670 ಕೋಟಿ. ರಿಲಯನ್ಸ್ ರಿಟೇಲ್ ನ ಲಾಭ ಕೂಡಾ ದ್ವಿಗುಣಗೊಂಡಿದೆ ಎನ್ನುವುದನ್ನು ಅವರು ಹೇಳಿದ್ದಾರೆ. 

ಜಿಯೋ ನೆಟ್‌ವರ್ಕ್‌ನ 85 ಪ್ರತಿಶತ ಮಾರಾಟ :
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 5G ಸೆಲ್‌ಗಳಲ್ಲಿ ಸುಮಾರು 85 ಪ್ರತಿಶತದಷ್ಟು ಜಿಯೋ ನೆಟ್‌ವರ್ಕ್‌ನಲ್ಲಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಕಂಪನಿಯು ಪ್ರತಿ 10 ಸೆಕೆಂಡಿಗೆ ಒಂದು 5G ಸೆಲ್ ಅನ್ನು ತನ್ನ ನೆಟ್‌ವರ್ಕ್‌ಗೆ ಸೇರಿಸುತ್ತಿದೆ ಮತ್ತು ಡಿಸೆಂಬರ್ ವೇಳೆಗೆ ಸುಮಾರು 1 ಮಿಲಿಯನ್ 5G ಸೆಲ್‌ಗಳನ್ನು ಕಾರ್ಯಗತಗೊಳಿಸುವುದಾಗಿ ಹೇಳಿದ್ದಾರೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 5G ಸೆಲ್‌ಗಳಲ್ಲಿ ಸುಮಾರು 85% ಜಿಯೋ ನೆಟ್‌ವರ್ಕ್‌ನಲ್ಲಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಪ್ರತಿ 10 ಸೆಕೆಂಡಿಗೆ ಒಂದು 5G ಸೆಲ್ ಅನ್ನು ನಮ್ಮ ನೆಟ್‌ವರ್ಕ್‌ಗೆ ಸೇರಿಸುತ್ತಿದ್ದು, ಡಿಸೆಂಬರ್ ವೇಳೆಗೆ ಸುಮಾರು 1 ಮಿಲಿಯನ್ 5G ಸೆಲ್‌ಗಳನ್ನು ಕಾರ್ಯಗತಗೊಳಿಸುವುದಾಗಿ ತಿಳಿಸಿದ್ದಾರೆ. 

ಇದನ್ನೂ ಓದಿ : ಜಿಯೋ-ಏರ್ಟೆಲ್ ಬೆವರಿಳಿಸಿದ ಬಿಎಸ್ಎನ್ಎಲ್! 150 ದಿನಗಳ ಮಾನ್ಯತೆಯೊಂದಿಗೆ ನಿತ್ಯ 2ಜಿಬಿ ಡೇಟಾ, ಬೆಲೆಯೂ ಕಮ್ಮಿ!

ರಿಲಯನ್ಸ್ ರಿಟೇಲ್ ಮೌಲ್ಯ 8.28 ಲಕ್ಷ ಕೋಟಿ : 
ರಿಲಯನ್ಸ್ ರಿಟೇಲ್ ಕುರಿತು ಮಾತನಾಡಿದ ಮುಖೇಶ್ ಅಂಬಾನಿ, ರಿಲಯನ್ಸ್ ರಿಟೇಲ್ ಮೌಲ್ಯವು 2020ರಲ್ಲಿ 4.28 ಲಕ್ಷ ಕೋಟಿಯಷ್ಟಿತ್ತು. ಇಂದು  8.28 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು. FY2023 ರಲ್ಲಿ ರಿಲಯನ್ಸ್ ರಿಟೇಲ್ 2,60,364 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಅವರು ಹೇಳಿದರು. 

ಗಣೇಶ ಚತುರ್ಥಿಯಂದು ಜಿಯೋ ಫೈಬರ್ ಪ್ರಾರಂಭ : 
ಸೆಪ್ಟೆಂಬರ್ 19 ರಂದು ಅಂದರೆ ಗಣೇಶ ಚತುರ್ಥಿಯಂದು ರಿಲಯನ್ಸ್ ಜಿಯೋ ಫೈಬರ್ ಅನ್ನು ದೇಶಕ್ಕೆ ಉಡುಗೊರೆಯಾಗಿ ನೀಡುವ ನಿರೀಕ್ಷೆ ಇದೆ ಎಂದು ಮುಕೇಶ್ ಅಂಬಾನಿ ಎಜಿಎಂನಲ್ಲಿ ಘೋಷಿಸಿದ್ದಾರೆ. ರಿಲಯನ್ಸ್‌ನ ಜಿಯೋ ಏರ್ ಫೈಬರ್ 5G ನೆಟ್‌ವರ್ಕ್ ಮತ್ತು ಅತ್ಯುತ್ತಮ ವೈರ್‌ಲೆಸ್ ತಂತ್ರಜ್ಞಾನವನ್ನು ಬಳಸಲು ಜನರಿಗೆ ಸಹಾಯ ಮಾಡುತ್ತದೆ. ಈ ಸೇವೆಯು ಮನೆ ಮತ್ತು ಕಚೇರಿಯಲ್ಲಿ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್

Trending News