ಜನ ಮುಗಿ ಬಿದ್ದು ಖರೀದಿಸುತ್ತಿರುವ ಸ್ಕೂಟರ್ ಇದೇ! ಮಾರಾಟವಾಗಿದೆ 56ಲಕ್ಷ ಸ್ಕೂಟರ್! ಬಿಕರಿಯಲ್ಲಿ ಇದೇ ನಂಬರ್ ಒನ್

Hero MotoCorp Sales: ಮಾರ್ಚ್ 2023 ರಲ್ಲಿ ಕಂಪನಿಯು 490,415 ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಹೀರೊ ಮೋಟೊಕಾರ್ಪ್‌ನ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ.

Written by - Ranjitha R K | Last Updated : Apr 4, 2024, 01:47 PM IST
  • Hero MotoCorp ವಿಶ್ವದ ಅತಿ ದೊಡ್ಡ ಸ್ಕೂಟರ್ ಮತ್ತು ಮೋಟಾರ್‌ಸೈಕಲ್ ತಯಾರಿಕಾ ಕಂಪನಿ
  • 2023-24ನೇ ಹಣಕಾಸು ವರ್ಷದಲ್ಲಿ 56,21,455 ದ್ವಿಚಕ್ರ ವಾಹನಗಳನ್ನು ಮಾರಾಟ
  • ಇಲ್ಲಿಯವರೆಗಿನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಅತ್ಯಧಿಕ ಮಾಸಿಕ ಮಾರಾಟ
ಜನ ಮುಗಿ ಬಿದ್ದು ಖರೀದಿಸುತ್ತಿರುವ ಸ್ಕೂಟರ್ ಇದೇ! ಮಾರಾಟವಾಗಿದೆ 56ಲಕ್ಷ ಸ್ಕೂಟರ್! ಬಿಕರಿಯಲ್ಲಿ ಇದೇ ನಂಬರ್ ಒನ್ title=

Hero MotoCorp Sales : Hero MotoCorp ಭಾರತದಲ್ಲಿ ಅತಿ ದೊಡ್ಡ ದ್ವಿಚಕ್ರ ವಾಹನ ಕಂಪನಿ ಮಾತ್ರವಲ್ಲ,ವಿಶ್ವದ ಅತಿ ದೊಡ್ಡ ಸ್ಕೂಟರ್ ಮತ್ತು ಮೋಟಾರ್‌ಸೈಕಲ್ ತಯಾರಿಕಾ ಕಂಪನಿಯಾಗಿದೆ.2023-24ನೇ ಹಣಕಾಸು ವರ್ಷದಲ್ಲಿ ಒಟ್ಟು 56,21,455 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಈ ಕಂಪನಿಯದ್ದು. ಇದು ದೇಶೀಯ ಮಾರಾಟ ಮತ್ತು ರಫ್ತು ಎರಡನ್ನೂ ಒಳಗೊಂಡಿದೆ. FY24ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಮಾರಾಟವು 10% ದಷ್ಟು ಹೆಚ್ಚಳವನ್ನು ದಾಖಲಿಸಿದೆ.ಅಲ್ಲದೆ, ಹೀರೋ ಮೋಟೋಕಾರ್ಪ್‌ನ ಜಾಗತಿಕ ವ್ಯವಹಾರವು ಇಡೀ ಹಣಕಾಸು ವರ್ಷದಲ್ಲಿ 16%ರಷ್ಟು ಬೆಳವಣಿಗೆಯನ್ನು ಕಂಡಿದೆ. 

ಮಾರ್ಚ್ 2023 ರಲ್ಲಿ ಕಂಪನಿಯು 490,415 ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಹೀರೊ ಮೋಟೊಕಾರ್ಪ್‌ನ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ. ಕಂಪನಿಯು ಮಾರ್ಚ್ ತಿಂಗಳಲ್ಲಿ 4,000ಕ್ಕೂ ಹೆಚ್ಚು VIDA V1 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.  ಇದು ಇಲ್ಲಿಯವರೆಗಿನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಅತ್ಯಧಿಕ ಮಾಸಿಕ ಮಾರಾಟವಾಗಿದೆ. 

ಇದನ್ನೂ ಓದಿ :ಆಕರ್ಷಕ ಬೆಲೆಯಲ್ಲಿ ಟೊಯೊಟಾದ ಅರ್ಬನ್ ಕ್ರೂಸರ್ ಟೈಸರ್ ಬಿಡುಗಡೆ

ಕಳೆದ ಹಣಕಾಸು ವರ್ಷದಲ್ಲಿ, Hero MotoCorp ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ಹಲವಾರು ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ Xtreme 125R, Xtreme 200S, Xtreme 160R 4V, Harley-Davidson X440, Karizma XMR ಮತ್ತು Mavrick 440 ಸೇರಿವೆ. ಇದಲ್ಲದೆ,75 ಪ್ರೀಮಿಯಾ ಔಟ್‌ಲೆಟ್‌ಗಳನ್ನು ತೆರೆಯಲಾಗಿದ್ದು, 400 ಕ್ಕೂ ಹೆಚ್ಚು ಹೀರೋ 2.0 ಸ್ಟೋರ್‌ಗಳನ್ನು ಲಾಂಚ್ ಮಾಡಿದೆ.  

ಹೀರೋ ಮಿಲನ್‌ನಲ್ಲಿ ನಡೆದ EICMA ಮೋಟಾರ್ ಶೋ ಮತ್ತು ತನ್ನದೇ ಆದ ಹೀರೋ ವರ್ಲ್ಡ್‌ನಲ್ಲಿ ಅನೇಕ ವಾಹನಗಳನ್ನು ಪ್ರದರ್ಶಿಸಿತು.ಕಂಪನಿಯು ಕನ್ವರ್ಟಿಬಲ್ ವೆಹಿಕಲ್ - ಸರ್ಜ್ ಎಸ್ 32, ಪಾತ್ ಬ್ರೇಕಿಂಗ್ ಇವಿ ಕಾನ್ಸೆಪ್ಟ್, ಲಿಂಕ್ಸ್ ಮತ್ತು ಆಕ್ರೊ, ಜನಪ್ರಿಯ ಮೋಟಾರ್‌ಸೈಕಲ್‌ಗಳು ಫ್ಲೆಕ್ಸ್- ಫ್ಯುಯೆಲ್ ಆಯ್ಕೆಗಳು  ಸ್ಕೂಟರ್ ಗಳ ಮುಂಬರುವ ರೇಂಜ್  Xoom (125 & 160), ಹೊಸ VIDA V1 ಮತ್ತು  V1 ಕೂಪೆಯನ್ನು ಪ್ರದರ್ಶಿಸಿದೆ. 

ಇದನ್ನೂ ಓದಿ :Google Update: ಹಿಂದಿ ಭಾಷೆಯಲ್ಲಿ ಎರಡು ಫ್ಯಾಕ್ಟ್ ಚೆಕ್ ಟೂಲ್ ಗಳನ್ನು ಬಿಡುಗಡೆ ಮಾಡಿದ ಗೂಗಲ್, ಲಾಭ ಏನು? ಇಲ್ಲಿ ತಿಳಿದುಕೊಳ್ಳಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News