SBI Account Block: ಎಸ್‌ಬಿ‌ಐ ಹೆಸರಿನಲ್ಲಿ ಬರುವ ಈ ಸಂದೇಶದ ಬಗ್ಗೆ ಇರಲಿ ಎಚ್ಚರ

Online Scam: ಎಸ್‌ಬಿ‌ಐ ಖಾತೆದಾರರಿಗೆ ಇತ್ತೀಚೆಗಷ್ಟೇ ಬ್ಯಾಂಕ್ ನಕಲಿ ಎಸ್ಎಂಎಸ್ ಹಗರಣದ ಬಗ್ಗೆ ಎಚ್ಚರಿಕೆ ನೀಡಿತ್ತು. ಯಾವುದೀ ಎಸ್ಎಂಎಸ್ ಇದರಿಂದಾಗಬಹುದಾದ ತೊಂದರೆ ಬಗ್ಗೆ ತಿಳಿದಿದೆಯೇ? 

Written by - Yashaswini V | Last Updated : Apr 22, 2024, 12:38 PM IST
  • ದೇಶದಲ್ಲಿ ನಕಲಿ ಅಪ್ಲಿಕೇಶನ್‌ಗಳ ಹೆಸರಿನಲ್ಲಿ ಅಮಾಯಕರನ್ನು ಬಲೆಗೆ ಬೀಳಿಸುತ್ತಿರುವ ವಂಚಕರು
  • ನಕಲಿ ಸಂದೇಶದ ಮೂಲಕವೂ ಖಾತೆದಾರರ ಖಾತೆಗೆ ಖನ್ನಾ ಹಾಕುತ್ತಿರುವ ವಂಚಕರು
  • ಈ ಕುರಿತಂತೆ ಭಾರತ ಸರ್ಕಾರ ನೀಡಿರುವ ಎಚ್ಚರಿಕೆ ಏನು?
SBI Account Block: ಎಸ್‌ಬಿ‌ಐ ಹೆಸರಿನಲ್ಲಿ ಬರುವ ಈ ಸಂದೇಶದ ಬಗ್ಗೆ ಇರಲಿ ಎಚ್ಚರ title=

SBI Account Block: ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಕೆಲ ದಿನಗಳ ಹಿಂದಷ್ಟೇ ನಕಲಿ ಎಸ್ಎಂಎಸ್ ಹಗರಣದ ಬಗ್ಗೆ ಎಚ್ಚರಿಕೆ ನೀಡಿತ್ತು. ಈ ಸಂದೇಶದ ಬಗ್ಗೆ ತಪಾಸಣೆ ನಡೆಸಿದ್ದ ಪಿ‌ಐ‌ಬಿ ಫ್ಯಾಕ್ಟ್ ಚೆಕ್ (PIB Fact Check)  ಇದೊಂದು ಫೇಕ್/ನಕಲಿ ಸಂದೇಶ ಎಂದು ವರದಿ ಮಾಡಿತ್ತು. ಇದೀಗ ಭಾರತ ಸರ್ಕಾರದ ಸೈಬರ್ ಭದ್ರತಾ ಜಾಗೃತಿ ವೇದಿಕೆ 'ಸೈಬರ್ ದೋಸ್ತ್' ನಲ್ಲಿ ಈ ಕುರಿತಂತೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. 

ವಾಸ್ತವವಾಗಿ, ಎಸ್‌ಬಿ‌ಐ ಹೆಸರಿನಲ್ಲಿ ಬರುವ ಎಸ್ಎಂಎಸ್‌ನಲ್ಲಿ, ಇಲ್ಲಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನವೀಕರಿಸದಿದ್ದರೆ, ನಿಮ್ಮ ಎಸ್‌ಬಿಐ ಯೋನೋ ಖಾತೆಯನ್ನು (SBI Yono Account) ನಿರ್ಬಂಧಿಸಲಾಗುತ್ತದೆ ಎಂಬ ಸಂದೇಶವನ್ನು ರವಾನಿಸಲಾಗುತ್ತಿದೆ. ಆದರಿದು ಸಂಪೂರ್ಣವಾಗಿ ನಕಲಿ ಸಂದೇಶವಾಗಿದ್ದು ಯಾಮಾರಿ ಇಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಖಾತೆ ಹ್ಯಾಕ್ ಆಗುವ ಅಪಾಯ ಇರುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. 

ಇದನ್ನೂ ಓದಿ- ಬಿರು ಬೇಸಿಗೆಯಲ್ಲಿ ತಂಪಾದ ಗಾಳಿ ಪಡೆಯಲು ಇಂದೇ ತನ್ನಿ ಕೂಲರ್ ಫ್ಯಾನ್

ಈ ಕುರಿತಂತೆ ಭಾರತ ಸರ್ಕಾರ (Govt of India) ಮತ್ತೊಮ್ಮೆ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಅಪಾಯಕಾರಿ ಆಪ್‌ಗಳ ಬಗ್ಗೆ ಎಚ್ಚರಿಕೆ ನೀಡಿದೆ.  ಭಾರತ ಸರ್ಕಾರದ ಗೃಹ ಸಚಿವಾಲಯವು ನಡೆಸುವ ಸೈಬರ್ ಭದ್ರತಾ ಜಾಗೃತಿ ವೇದಿಕೆ (Cyber Security Awareness Forum) 'ಸೈಬರ್ ದೋಸ್ತ್' ನಲ್ಲಿ ಈ ಕುರಿತಂತೆ ಮಾಹಿತಿ ನೀಡಿ  ಜನರ ಬ್ಯಾಂಕ್ ಖಾತೆಗಳಿಂದ ಹಣವನ್ನು ಕದಿಯುವ ಅಪ್ಲಿಕೇಶನ್‌ಗಳು ಇವಾಗಿವೆ. ಇಂತಹ ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ. 

ಯೂನಿಯನ್ ಬ್ಯಾಂಕ್‌ನ ನಕಲಿ ಅಪ್ಲಿಕೇಶನ್‌:
ಆನ್ಲೈನ್ ವಂಚಕರು ಎಸ್‌ಬಿ‌ಐ ಬಳಕೆದಾರರಿಗೆ ನಕಲಿ ಸಂದೇಶವನ್ನು ಕಳುಹಿಸುತ್ತಿರುವುದು ಮಾತ್ರವಲ್ಲದೆ, ಯೂನಿಯನ್ ಬ್ಯಾಂಕ್‌ನ ನಕಲಿ ಅಪ್ಲಿಕೇಶನ್‌ಗಳ ಮೂಲಕವೂ ಖಾತೆದಾರರ ಖಾತೆಗೆ ಖನ್ನಾ ಹಾಕುತ್ತಿವೆ.  ಈ ನಕಲಿ ಅಪ್ಲಿಕೇಶನ್‌ನ ಹೆಸರು Union-Rewards.apk. ಎಂದು ತಿಳಿದುಬಂದಿದೆ. ಈ ಕುರಿತಂತೆ ಎಚ್ಚರಿಕೆ ನೀಡಿರುವ ಭಾರತ ಸರ್ಕಾರ, Union-Rewards.apk. ನೋಡಲು ನಿಜವಾದ ಯೂನಿಯನ್ ಬ್ಯಾಂಕ್ ಅಪ್ಲಿಕೇಶನ್‌ನಂತೆಯೇ ಕಾಣುತ್ತದೆ. ಆದರೆ, ಇದು ನಕಲಿ ಅಪ್ಲಿಕೇಶನ್‌. ಇದರ ಮೂಲಕ ಗಿಫ್ಟ್ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ಭಾರತ ಸರ್ಕಾರದ ಸೈಬರ್ ಸೆಕ್ಯುರಿಟಿ ಅಕೌಂಟ್ ಆಗಿರುವ ಸೈಬರ್‌ ದೋಸ್ತ್ ಟ್ವೀಟ್ ಮಾಡಿದೆ. ಇದರಲ್ಲಿ #CyberSafeIndia #CyberAware #StayCyberWise #I4C #MHA #fraud #newsfeed ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಸಹ ಬಳಸಿ ಟ್ವೀಟ್ ಮಾಡಲಾಗಿದ್ದು ನಕಲಿ ಆಪ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ಜನರಿಗೆ ಎಚ್ಚರಿಕೆ ನೀಡಿದೆ.

 
ಇದನ್ನೂ ಓದಿ- ರೈಲ್ವೇ ನಿಲ್ದಾಣದ ಫ್ರೀ ವೈ-ಫೈ ಬಳಕೆ ಎಷ್ಟು ಸುರಕ್ಷಿತ?

 

ನಕಲಿ ಸ್ಟಾಕ್ ಟ್ರೇಡಿಂಗ್ ಅಪ್ಲಿಕೇಶನ್‌ಗಳು: 
ನಕಲಿ ಸ್ಟಾಕ್ ಟ್ರೇಡಿಂಗ್ ಆ್ಯಪ್‌ಗಳಿಂದಾಗಿ ಜನರು ವಂಚನೆಗೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.  ಈ ಆ್ಯಪ್‌ಗಳಿಂದಾಗಿ ದೇಶಾದ್ಯಂತ ಹಲವು ಅಮಾಯಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಭಾರತ ಸರ್ಕಾರದ ಸೈಬರ್ ಸೆಲ್ ಅಂತಹ ಒಂದು ನಕಲಿ ಸ್ಟಾಕ್ ಟ್ರೇಡಿಂಗ್ ಅಪ್ಲಿಕೇಶನ್ ಬಗ್ಗೆಯೂ  ಐಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.  "ಗ್ರೂಪ್-ಎಸ್" ಹೆಸರಿನ ನಕಲಿ ಸ್ಟಾಕ್ ಟ್ರೇಡಿಂಗ್ ಅಪ್ಲಿಕೇಶನ್ ಒಂದು ಮೋಸದ ಆ್ಯಪ್‌ ಆಗಿದ್ದು, ಇದನ್ನು ಫೋನ್ ನಲ್ಲಿ ಡೌನ್ಲೋಡ್ ಮಾಡುವುದರಿಂದ ನಿಮ್ಮ ಖಾತೆ ಹ್ಯಾಕ್ ಆಗುವ ಅಪಾಯವೂ ಹೆಚ್ಚು ಎಂದು ಹೇಳಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News