TrueCaller ನಂತಹ ಸೇವೆ ಆರಂಭಕ್ಕೆ ಮುಂದಾದ ಸರ್ಕಾರ, ಸ್ಕ್ರೀನ್ ಮೇಲೆ ಕರೆ ಮಾಡುವವರ ಸರಿಯಾದ ಹೆಸರು ಕಾಣಿಸಿಕೊಳ್ಳಲಿದೆ!

TRAI Draft Recommendations: ಕಾಲ್ ರಿಸೀವ್ ಮಾಡುವ ಮೊದಲೇ ಕರೆ ಮಾಡುತ್ತಿರುವವರು ಯಾರು ಎಂಬುದು ನಿಮಗೆ ಮೊದಲೇ ಗೊತ್ತಾದರೆ ಹೇಗಿರುತ್ತದೆ: ಹೌದು, ಟ್ರಾಯ್  ಇದಕ್ಕೆ ಪರಿಹಾರ ಕಂಡುಕೊಂಡಿದೆ. ಸರ್ಕಾರದ ಟ್ರೂ ಕಾಲರ್‌ನಂತಹ ಸೇವೆ ಆರಂಭಕ್ಕೆ ಟ್ರಾಯ್  ಕರಡು ಶಿಫಾರಸು ಸಿದ್ಧಪಡಿಸಿದೆ. (Technology News In Kananda)  

Written by - Nitin Tabib | Last Updated : Feb 23, 2024, 10:15 PM IST
  • ಕರೆ ಬರುವ ಮೊದಲೇ ನಿಮಗೆ ಯಾರು ಕರೆ ಮಾಡುತ್ತಿದ್ದಾರೆಂಬುದು ನಿಮಗೆ ಮೊದಲೇ ತಿಳಿದರೆ ಎಷ್ಟು ಸುಲಭವಾಗುತ್ತದೆ ಅಲ್ಲವೇ?
  • ಹೌದು, ಸರ್ಕಾರಿ ನಿಯಂತ್ರಕ ಸಂಸ್ಥೆ ಟ್ರಾಯ್ ಇದಕ್ಕೆ ಪರಿಹಾರ ಕಂಡುಕೊಂಡಿದೆ.
  • ಸರ್ಕಾರದ ಟ್ರೂ ಕಾಲರ್‌ನಂತಹ ಸೇವೆ ಆರಂಭಕ್ಕೆ ಟ್ರಾಯ್ ಕರಡು ಶಿಫಾರಸು ಸಲ್ಲಿಸಿದೆ.
TrueCaller ನಂತಹ ಸೇವೆ ಆರಂಭಕ್ಕೆ ಮುಂದಾದ ಸರ್ಕಾರ, ಸ್ಕ್ರೀನ್ ಮೇಲೆ ಕರೆ ಮಾಡುವವರ ಸರಿಯಾದ ಹೆಸರು ಕಾಣಿಸಿಕೊಳ್ಳಲಿದೆ! title=

TRAI: ಪ್ರತಿ ನಿತ್ಯ ಜನರ ಮೊಬೈಲ್ ಗೆ ಹಲವಾರು ಸ್ಪಾಮ್ ಕರೆಗಳು ಬರುತ್ತವೆ  ಮತ್ತು ಅವುಗಳಿಂದ ಜನರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ. ಇನ್ನೊಂದೆಡೆ ಕೆಲವರು ಮೋಸದ ಭಯದ ಹಿನ್ನೆಲೆ ಕರೆಯನ್ನು ರಿಸೀವ್ ಮಾಡಲು ಹಿಂಜರಿಯುತ್ತಾರೆ. ವಾಸ್ತವದಲಿ, ಕೆಲವು ಜನರು ಅಪರಿಚಿತ ಕರೆಗಳ ಮೂಲಕ ವಂಚನೆಗೊಳಗಾಗಿದ್ದಾರೆ. ಇದು ಮುಂಚಿತವಾಗಿಯೇ ತಿಳಿದರೆ ಯಾರು ಸ್ಪಾಮ್ ಕಾಲ್ ಗಳನ್ನು ಸ್ವೀಕರಿಸುವುದೇ ಇಲ್ಲ. ಕರೆ ಬರುವ ಮೊದಲೇ ನಿಮಗೆ ಯಾರು ಕರೆ ಮಾಡುತ್ತಿದ್ದಾರೆಂಬುದು ನಿಮಗೆ ಮೊದಲೇ ತಿಳಿದರೆ ಎಷ್ಟು ಸುಲಭವಾಗುತ್ತದೆ ಅಲ್ಲವೇ? ಹೌದು, ಸರ್ಕಾರಿ ನಿಯಂತ್ರಕ ಸಂಸ್ಥೆ ಟ್ರಾಯ್ ಇದಕ್ಕೆ ಪರಿಹಾರ ಕಂಡುಕೊಂಡಿದೆ. ಸರ್ಕಾರದ ಟ್ರೂ ಕಾಲರ್‌ನಂತಹ ಸೇವೆ ಆರಂಭಕ್ಕೆ ಟ್ರಾಯ್ ಕರಡು ಶಿಫಾರಸು ಸಲ್ಲಿಸಿದೆ.(Technology News In Kananda)

ಕರೆಗೆ ಉತ್ತರಿಸುವುದು ಅಥವಾ ಬಿಡುವುದು ಒಬ್ಬರ ವೈಯಕ್ತೀಕ ಆಯ್ಕೆ
ಶೀಘ್ರದಲ್ಲೇ ಮೊಬೈಲ್ ಬಳಕೆದಾರರಿಗೆ  ಅವರಿಗೆ ಯಾರು ಕರೆ ಮಾಡುತ್ತಿದ್ದಾರೆ ಎಂಬುದು ತಿಳಿಯಲು ಸಾಧ್ಯವಾಗಲಿದೆ.  ಕರೆಗೆ ಉತ್ತರಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು ಇದರಿಂದ ಸುಲಭವಾಗಲಿದೆ. ಇದಕ್ಕೆ ಸರ್ಕಾರ ಪರಿಹಾರ ಕಂಡುಕೊಂಡಿದೆ. ಸರ್ಕಾರದ ಟ್ರೂ ಕಾಲರ್‌ನಂತಹ ಸೌಲಭ್ಯಕ್ಕಾಗಿ ಟ್ರಾಯ್ ಕರಡು ಶಿಫಾರಸ್ಸನ್ನು ಸಲ್ಲಿಸಿದೆ.

ಮುಖ್ಯ ವಿಶೇಷತೆಗಳು ಈ ಕೆಳಗಿನಂತಿವೆ
- ಕಾಲಿಂಗ್ ನೇಮ್ ಪ್ರೇಸೆಂಟೇಶನ್ (CNAP) ಪೂರಕ ಸೇವೆಯನ್ನು ಭಾರತೀಯ ಟೆಲಿಕಾಂ ನೆಟ್‌ವರ್ಕ್‌ನಲ್ಲಿ ಪರಿಚಯಿಸಬೇಕು.

- ಕಾಲಿಂಗ್ ಲೈನ್ ಐಡೆಂಟಿಫಿಕೇಶನ್ (CLI) ಅನ್ನು E.164 ರ ಪ್ರಕಾರ ನಿಯೋಜಿಸಲಾದ ದೂರವಾಣಿ ಸಂಖ್ಯೆಯ ಪ್ರಕಾರ ಕರೆ ಮಾಡುವ/ಮೂಲಭೂತ ಚಂದಾದಾರರ ಗುರುತಿಸುವಿಕೆ ಎಂದು ಮರು ವ್ಯಾಖ್ಯಾನಿಸಬೇಕು. 1TU ಶಿಫಾರಸು/IP ವಿಳಾಸ ಮತ್ತು ಕರೆ ಮಾಡುವ ಹೆಸರು (CNAM) ಅಥವಾ ಕಾಲಕಾಲಕ್ಕೆ ಪರವಾನಗಿದಾರರು ನಿರ್ಧರಿಸಬಹುದಾದ ಯಾವುದೇ ಇತರ ಗುರುತಿಸುವಿಕೆ ಇದು ಒಳಗೊಂಡಿರಬೇಕು.

- ಎಲ್ಲಾ ಪ್ರವೇಶ ಸೇವಾ ಪೂರೈಕೆದಾರರು ತಮ್ಮ ದೂರವಾಣಿ ಗ್ರಾಹಕರ ಕೋರಿಕೆಯ ಮೇರೆಗೆ ಕಾಲಿಂಗ್ ನೇಮ್ ಪ್ರೇಸೆಂಟೇಶನ್ (CNAP) ಪೂರಕ ಸೇವೆಯನ್ನು ಒದಗಿಸಬೇಕು.

- ಕಸ್ಟಮರ್ ಅಪ್ಲಿಕೇಶ ಫಾರ್ಮ್ಯಾಟ್ ನಲ್ಲಿ (CAF) ದೂರವಾಣಿ ಗ್ರಾಹಕರು ಒದಗಿಸಿದ ಹೆಸರು ಗುರುತಿನ ಮಾಹಿತಿಯನ್ನು CNAP ಉದ್ದೇಶಕ್ಕಾಗಿ ಬಳಸಬೇಕು.

- ಭಾರತೀಯ ದೂರಸಂಪರ್ಕ ಜಾಲದಲ್ಲಿ CNAP ಅನುಷ್ಠಾನಕ್ಕೆ ತಾಂತ್ರಿಕ ಮಾದರಿಯನ್ನು ವಿವರಿಸಲಾಗಿದೆ.

- ಶಿಫಾರಸುಗಳನ್ನು ಸ್ವೀಕರಿಸಿದ ನಂತರ, ಸೂಕ್ತ ಕಟ್-ಆಫ್ ದಿನಾಂಕದ ನಂತರ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಸಾಧನಗಳಲ್ಲಿ CNAP ವೈಶಿಷ್ಟ್ಯವನ್ನು ಲಭ್ಯವಾಗುವಂತೆ ಮಾಡಲು ಸರ್ಕಾರವು ಸೂಕ್ತ ನಿರ್ದೇಶನಗಳನ್ನು ನೀಡಬೇಕು.

ಇದನ್ನೂ ಓದಿ-Good News! ಇನ್ಮುಂದೆ ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಗೂಗಲ್ ಪಿಕ್ಸಲ್ ಫೋನ್ ಗಳು!

- ಸಗಟು ಸಂಪರ್ಕಗಳು ಮತ್ತು ವ್ಯಾಪಾರಿ ಸಂಪರ್ಕಗಳನ್ನು ಹೊಂದಿರುವ ಗ್ರಾಹಕ ಘಟಕಗಳು ಗ್ರಾಹಕರ ಅರ್ಜಿ ನಮೂನೆಯಲ್ಲಿ (CAF) ಕಂಡುಬರುವ ಹೆಸರಿನ ಬದಲಿಗೆ ತಮ್ಮ 'ಆದ್ಯತೆಯ ಹೆಸರನ್ನು' ಸಲ್ಲಿಸುವ ಸೌಲಭ್ಯವನ್ನು ನೀಡಬೇಕು.

ಇದನ್ನೂ ಓದಿ-WhatsApp Helpline: ಇನ್ಮುಂದೆ ನೀವು ಡೀಪ್ ಫೇಕ್ ಕುರಿತು ವರದಿ ಮಾಡಬಹುದು, ಸಹಾಯವಾಣಿ ಸಂಖ್ಯೆ ಜಾರಿಗೊಳಿಸಲಿದೆ ವಾಟ್ಸ್ ಆಪ್!

- 'ಆದ್ಯತೆಯ ಹೆಸರು' ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿಸಲಾದ 'ಟ್ರೇಡ್‌ಮಾರ್ಕ್ ಹೆಸರು' ಅಥವಾ GST ಕೌನ್ಸಿಲ್‌ನಲ್ಲಿ ನೋಂದಾಯಿಸಲಾದ 'ವ್ಯಾಪಾರ ಹೆಸರು' ಅಥವಾ ಕ್ಲೈಂಟ್ ಘಟಕವನ್ನು ಒದಗಿಸಿದರೆ ಸರ್ಕಾರದಲ್ಲಿ ಸರಿಯಾಗಿ ನೋಂದಾಯಿಸಲಾದ ಅಂತಹ ಯಾವುದೇ ವಿಶಿಷ್ಟ ಹೆಸರು ಆಗಿರಬಹುದು. ಅಂತಹ ಹೆಸರಿನ ಮಾಲೀಕರು ಅದನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳನ್ನು ನೀಡಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News