ರೈಲು ಟಿಕೆಟ್ ಕನ್ಫರ್ಮ್ ಆಗದಿದ್ದಲ್ಲಿ ಫ್ರೀ ಫ್ಲೈಟ್ ಟಿಕೆಟ್! ಈ ಆಪ್ ನಲ್ಲಿ ಟಿಕೆಟ್ ಬುಕ್ ಮಾಡಿ.!

 ಇನ್ನು ವೈಟಿಂಗ್ ಲಿಸ್ಟ್ ನಲ್ಲಿದ್ದರಂತೂ ಇನ್ನೂ ಹೆಚ್ಚಿನ ಆತಂಕ.  ಪ್ರಯಾಣದ ದಿನದವರೆಗೂ ಆ ಟೆನ್ಶನ್ ಜೊತೆಗೇ ಇರಬೇಕು. ಆದರೆ ಇದಕ್ಕೊಂದು ಪರಿಹಾರ ಸಿಕ್ಕಿದೆ.

Written by - Ranjitha R K | Last Updated : Nov 25, 2022, 04:36 PM IST
  • ರೈಲು ಟಿಕೆಟ್ ಕನ್ಫರ್ಮ್ ಆಗದಿದ್ದಲ್ಲಿ ಫ್ರೀ ಫ್ಲೈಟ್ ಟಿಕೆಟ್
  • ಈ ಆಪ್ ನಲ್ಲಿದೆ ಟ್ರಿಪ್ ಅಶ್ಯೂರೆನ್ಸ್ ವೈಶಿಷ್ಟ್ಯ
  • ಫ್ರೀ ಫ್ಲೈಟ್ ಟಿಕೆಟ್ ಹೇಗೆ ನೀಡಲಾಗುತ್ತದೆ ?
 ರೈಲು ಟಿಕೆಟ್ ಕನ್ಫರ್ಮ್ ಆಗದಿದ್ದಲ್ಲಿ ಫ್ರೀ ಫ್ಲೈಟ್  ಟಿಕೆಟ್! ಈ ಆಪ್ ನಲ್ಲಿ ಟಿಕೆಟ್ ಬುಕ್ ಮಾಡಿ.!  title=
Free Flight Ticket

ಬೆಂಗಳೂರು : ರೈಲು ಟಿಕೆಟ್ ಕಾಯ್ದಿರಿಸುವಾಗ ಕನ್ಫರ್ಮ್ ಟಿಕೆಟ್ ಸಿಗುವುದೋ ಇಲ್ಲವೋ ಎನ್ನುವ ಸಣ್ಣ ಭಯ ಇದ್ದೇ ಇರುತ್ತದೆ. ಇನ್ನು ವೈಟಿಂಗ್ ಲಿಸ್ಟ್ ನಲ್ಲಿದ್ದರಂತೂ ಇನ್ನೂ ಹೆಚ್ಚಿನ ಆತಂಕ.  ಪ್ರಯಾಣದ ದಿನದವರೆಗೂ ಆ ಟೆನ್ಶನ್ ಜೊತೆಗೇ ಇರಬೇಕು. ಆದರೆ ಇದಕ್ಕೊಂದು ಪರಿಹಾರ ಸಿಕ್ಕಿದೆ. ಈಗ ರೈಲು ಟಿಕೆಟ್ ಕನ್ಫರ್ಮ್ ಆಗದಿದ್ದಲ್ಲಿ, IRCTC ಪ್ರಯಾಣಿಕರಿಗೆ ಉಚಿತ ವಿಮಾನ ಟಿಕೆಟ್ ನೀಡುತ್ತದೆ. 

ರೈಲು ಟಿಕೆಟ್  ಕನ್ಫರ್ಮ್ ಆಗದಿದ್ದಲ್ಲಿ ಫ್ರೀ ಫ್ಲೈಟ್ ಟಿಕೆಟ್ :
ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಟ್ರೈನ್‌ಮ್ಯಾನ್ ಈ ಅದ್ಭುತ  ಆಫರ್ ನೀಡುತ್ತಿದೆ. ಟ್ರೈನ್‌ಮ್ಯಾನ್ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇಲ್ಲಿ ಟಿಕೆಟ್ ಬುಕ್ ಮಾಡಿದರೆ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಸಿಗುತ್ತದೆ. ಒಂದು ವೇಳೆ ಟಿಕೆಟ್ ಕನ್ಫರ್ಮ್ ಆಗದಿದ್ದಲ್ಲಿ  ಪ್ರಯಾಣಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಫ್ರೀ ಫ್ಲೈಟ್  ಟಿಕೆಟ್ ನೀಡಲಾಗುತ್ತದೆ. 

ಇದನ್ನೂ ಓದಿ : Holidays Scam Alert! ರಜೆಯನ್ನು ಮಜಾ ಮಾಡಲು ಹೋಗಿ ಸಜೆ ಅನುಭವಿಸದಿರಿ

ಟ್ರಿಪ್ ಅಶ್ಯೂರೆನ್ಸ್ ವೈಶಿಷ್ಟ್ಯ :
ಟ್ರೈನ್‌ಮ್ಯಾನ್ ಅಪ್ಲಿಕೇಶನ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.  ಅದರ ಹೆಸರು 'ಟ್ರಿಪ್ ಅಶ್ಯೂರೆನ್ಸ್'. ಈ ಹೊಸ ವೈಶಿಷ್ಟ್ಯದ ಅಡಿಯಲ್ಲಿ ವೈಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರು ಅದೇ ದಿನ  ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.  ಈ ಅಪ್ಲಿಕೇಶನ್‌ನಲ್ಲಿ ಟಿಕೆಟ್ ಬುಕ್ ಮಾಡಿದ ನಂತರ ಟಿಕೆಟ್ ಸ್ಟೇಟಸ್ ಅನ್ನು ಚೆಕ್ ಮಾಡಿ ನೋಡಬಹುದು.  ಒಂದು ವೇಳೆ ಕೊನೆ ಘಳಿಗೆಗವರೆಗೂ ಟಿಕೆಟ್ ಕನ್ಫರ್ಮ್ಆಗದಿದ್ದರೆ, ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆಯ ಆಯ್ಕೆಯನ್ನು ಕೂಡಾ ನೀಡಲಾಗುವುದು. 

 ಫ್ರೀ ಫ್ಲೈಟ್ ಟಿಕೆಟ್ ಹೇಗೆ ನೀಡುತ್ತದೆ ? : 
ಪ್ರಯಾಣಿಕರ ಟಿಕೆಟ್  ಪ್ರೆಡಿಕ್ಶನ್  ಮೀಟರ್ ಶೇಕಡಾ 90 ಅಥವಾ ಅದಕ್ಕಿಂತ ಹೆಚ್ಚಿನದನ್ನು ಸೂಚಿಸಿದರೆ, ಟ್ರೈನ್‌ಮೆನ್‌ 1 ರೂಪಾಯಿ ಟ್ರಿಪ್ ಅಶ್ಯೂರೆನ್ಸ್ ಶುಲ್ಕ ವಿಧಿಸುತ್ತದೆ. ಟಿಕೆಟ್  ಪ್ರೆಡಿಕ್ಶನ್  90 ಶೇಕಡಾಕ್ಕಿಂತ ಕಡಿಮೆಯಿದ್ದರೆ, ಟಿಕೆಟ್‌ನ ವರ್ಗವನ್ನು ಆಧರಿಸಿ ಅಪ್ಲಿಕೇಶನ್ ಶುಲ್ಕ ವಿಧಿಸಲಾಗುತ್ತದೆ. ರೈಲು ಚಾರ್ಟ್ ಸಿದ್ಧಪಡಿಸಿದ ನಂತರ ಟಿಕೆಟ್   ಕನ್ಫರ್ಮ್ ಆದರೆ, Trip Assurance ಚಾರ್ಜ್ ಅನ್ನು ಹಿಂದಿರುಗಿಸಲಾಗುತ್ತದೆ. ಪ್ರಯಾಣದ ಭರವಸೆ ಶುಲ್ಕವನ್ನು ಪ್ರಯಾಣಿಕರಿಗೆ ಮರುಪಾವತಿಸಲಾಗುತ್ತದೆ. ಒಂದು ವೇಳೆ ಟಿಕೆಟ್  ಕನ್ಫರ್ಮ್ ಆಗದೆ ಇದ್ದಲ್ಲಿ ಉಚಿತವಾಗಿ ವಿಮಾನ ಟಿಕೆಟ್ ಅನ್ನು ಒದಗಿಸಲಾಗುವುದು. 

ಇದನ್ನೂ ಓದಿ : Heating Device: 180 ರೂಪಾಯಿಯಲ್ಲಿ ಮನೆಗೆ ತನ್ನಿ ಈ ಸಾಧನ! ಚಳಿಗೆ ಹೇಳಿ ಗುಡ್‌ ಬೈ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News