Facebook Insta Outage: ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಫೆಸ್ಬುಕ್, ಇನ್ಸ್ಟಾ, ಖಾತೆ ತನ್ನಷ್ಟಕ್ಕೆ ತಾನೇ ಲಾಗ್ಔಟ್ ಆಗುತ್ತಿವೆ

Facebook Instagram Outage: ಸಾಮಾಜಿಕ ಮಾಧ್ಯಮ ವೇಡಿಕೆಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಹಠಾತ್ ಸ್ಥಗಿತಗೊಂಡಿರುವುದರಿಂದ ಬಳಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. #facebookdown ಪ್ರಸ್ತುತ ಮತ್ತೊಂದು ಸಾಮಾಜಿಕ ಮಾಧ್ಯಮ 'X'  ನಲ್ಲಿ ಟ್ರೆಂಡಿಂಗ್ ಆರಂಭಿಸಿದೆ. ಬಳಕೆದಾರರು ಮೀಮ್‌ಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. (Technology News In Kannada)  

Written by - Nitin Tabib | Last Updated : Mar 5, 2024, 09:56 PM IST
  • ಮೆಟಾ ಮಾಲೀಕತ್ವದ ಕಂಪನಿ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ (Instagram)
  • ಸ್ಥಗಿತಗೊಂಡಿರುವುದು ಇದೇ ಮೊದಲಲ್ಲ. ಜನರು ಫೇಸ್ ಬುಕ್ ನಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
  • ಮೊದಲ ಬಾರಿಗೆ ಫೇಸ್‌ಬುಕ್ ತೆರೆದ ನಂತರ ಲಾಗಿನ್ ಸಾಧ್ಯವಾಗದಿದ್ದಾಗ, ಬಳಕೆದಾರರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮತ್ತು ಆನ್ ಮಾಡಲು ಆರಂಭಿಸಿದ್ದಾರೆ.
Facebook Insta Outage: ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಫೆಸ್ಬುಕ್, ಇನ್ಸ್ಟಾ, ಖಾತೆ ತನ್ನಷ್ಟಕ್ಕೆ ತಾನೇ ಲಾಗ್ಔಟ್ ಆಗುತ್ತಿವೆ title=

Facebook Instagram Down: ಸಾಮಾಜಿಕ ಮಾಧ್ಯಮ ವೇದಿಕೆಗಲಾಗಿರುವ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಂಗಳವಾರ ರಾತ್ರಿ (5 ಫೆಬ್ರವರಿ 2024) ಇದ್ದಕ್ಕಿದ್ದಂತೆ ಸ್ಥಗಿತಗೊಂಡಿವೆ. ಬಳಕೆದಾರರ ಸಾಮಾಜಿಕ ಮಾಧ್ಯಮ (Social Media) ಖಾತೆಗಳು ಇದ್ದಕ್ಕಿದ್ದಂತೆ ಲಾಗ್ ಔಟ್ ಆಗುತ್ತಿವೆ. (Technology News In Kannada)

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಹಠಾತ್ ಸ್ಥಗಿತಗೊಳ್ಳುವಿಕೆಯಿಂದ ಲಕ್ಷಾಂತರ ಬಳಕೆದಾರರು ಕಿರಿಕಿರಿ ಅನುಭವಿಸಿದ್ದಾರೆ. #facebookdown ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಟ್ರೆಂಡಿಂಗ್ ಆರಂಭಿಸಿದೆ. ಬಳಕೆದಾರರು ದೂರುವುದರ ಜೊತೆಗೆ ಈ ಬಗ್ಗೆ ತಮಾಷೆಯ ಪ್ರತಿಕ್ರಿಯೆಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ.

ಫೇಸ್‌ಬುಕ್ (Facebook) ಸ್ಥಗಿತಗೊಂಡ ಬಳಿಕ ಟ್ವಿಟರ್‌ನಲ್ಲಿ ಮೀಮ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಜನರು ಇದನ್ನು ಸಾಕಷ್ಟು ತಮಾಷೆ ಮಾಡುವುದರ ಮೂಲಕ ಟ್ವೀಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ-Tips For Safety Driving: ನೀವೂ ಚಪ್ಪಲ್ ಧರಿಸಿ ಕಾರು ಒಡಸ್ತಿರಾ? ಎಚ್ಚರ..! ಕಾರಣ ಇಲ್ಲಿದೆ

ಇಂತಹ ಸಂದರ್ಭದಲ್ಲಿ ಜನ ಮೆಟಾ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಅವರನ್ನು ಕೂಡ ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.  ಜನರು ಜುಕರ್‌ಬರ್ಗ್ ಅವರ ಮಾರ್ಫ್ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಜುಕರ್‌ಬರ್ಗ್ ವೈಯರ್ ಕತ್ತರಿಸುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ-WhatsApp Favorite Feature: ವಾಟ್ಸ್ ಆಪ್ ನಲ್ಲಿ ಶೀಘ್ರದಲ್ಲೇ ಬರಲಿದೆ ನಿಮ್ಮ ನೆಚ್ಚಿನ ವೈಶಿಷ್ಟ್ಯ, ಇಲ್ಲಿದೆ ಡೀಟೈಲ್ಸ!

ಮೆಟಾ ಮಾಲೀಕತ್ವದ ಕಂಪನಿ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ (Instagram) ಸ್ಥಗಿತಗೊಂಡಿರುವುದು ಇದೇ ಮೊದಲಲ್ಲ. ಜನರು ಫೇಸ್ ಬುಕ್ ನಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೊದಲ ಬಾರಿಗೆ ಫೇಸ್‌ಬುಕ್ ತೆರೆದ ನಂತರ ಲಾಗಿನ್ ಸಾಧ್ಯವಾಗದಿದ್ದಾಗ, ಬಳಕೆದಾರರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮತ್ತು ಆನ್ ಮಾಡಲು ಆರಂಭಿಸಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News