Social Media: ನೀವೂ ಸಹ ಹೆಚ್ಚಾಗಿ ಸೋಶಿಯಲ್ ಮೀಡಿಯಾ ಬಳಸುತ್ತೀರಾ! ವಂಚನೆಗಳನ್ನು ತಪ್ಪಿಸಲು ಸುಲಭ ಟ್ರಿಕ್ಸ್

Social Media: ಪ್ರಸ್ತುತ ಎಲ್ಲೆಡೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಇದರೊಂದಿಗೆ ಹಲವು ರೀತಿಯ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ನೀವು ಜಾಗರೂಕರಾಗಿರುವುದು ತುಂಬಾ ಅಗತ್ಯ. 

Written by - Yashaswini V | Last Updated : Jan 16, 2024, 09:04 AM IST
  • ಸಾಮಾಜಿಕ ಜಾಲತಾಣಗಳಲ್ಲಿ ನೀವು ನಿತ್ಯ ತರಾವರಿ ಕೊಡುಗೆಗಳನ್ನು ಕಾಣಬಹುದು.
  • ಒಂದು ಆಫರ್ ತುಂಬಾ ಚೆನ್ನಾಗಿ ಕಾಣಿಸಿದರೆ ಅದು ಖಂಡಿತವಾಗಿಯೂ ಹಗರಣವಾಗಿರುತ್ತದೆ.
  • ಇಂತಹ ವಂಚನೆಗಳನ್ನು ತಪ್ಪಿಸಲು ಸೋಶಿಯಲ್ ಮೀಡಿಯಾ ಬಳಕೆದಾರರು ತುಂಬಾ ಜಾಗರೂಕರಾಗಿರುವುದು ಅಗತ್ಯ.
Social Media: ನೀವೂ ಸಹ ಹೆಚ್ಚಾಗಿ ಸೋಶಿಯಲ್ ಮೀಡಿಯಾ ಬಳಸುತ್ತೀರಾ! ವಂಚನೆಗಳನ್ನು ತಪ್ಪಿಸಲು ಸುಲಭ ಟ್ರಿಕ್ಸ್  title=

Social Media: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳ ಬಳಕೆ ಹೆಚ್ಚಾಗುತ್ತಿದ್ದು ಇದರೊಂದಿಗೆ ದಿನೇ ದಿನೇ ವಂಚನೆಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವಾರು ರೀತಿಯ ವಂಚನೆಗಳು ನಡೆಯುತ್ತಿದ್ದು, ಇದನ್ನು ತಪ್ಪಿಸಲು ಸೋಶಿಯಲ್ ಮೀಡಿಯಾ ಬಳಕೆದಾರರು ತುಂಬಾ ಜಾಗರೂಕರಾಗಿರುವುದು ಅಗತ್ಯ. ಇದಕ್ಕಾಗಿ, ಕೆಲವು ಟ್ರಿಕ್ಸ್ ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

ಇಂತಹ ಬಳಕೆದಾರರನ್ನು ನಿರ್ಬಂಧಿಸಿ: 
ನೀವು ಸೋಶಿಯಲ್ ಮೀಡಿಯಾ ಮೂಲಕ ಆಗುವ ವಂಚನೆಗಳನ್ನು ತಪ್ಪಿಸಲು ಅತಿಯಾದ ಆಸಕ್ತಿ ತೋರಿಸುವ ಯಾವುದೇ ಬಳಕೆದಾರರ ಬಗ್ಗೆ ಅದರಲ್ಲೂ ನಿಮಗೆ ಪರಿಚಯವಿಲ್ಲದ, ಸೋಶಿಯಲ್ ಮೀಡಿಯಾ ಮೂಲಕವೇ ಸ್ನೇಹಿತರಾಗಿರುವ ಬಳಕೆದಾರರ ಬಗ್ಗೆ ಎಚ್ಚರಿಕೆಯಿಂದ ಇರಿ. ಜೊತೆಗೆ ಗೊತ್ತಿಲ್ಲದವರನ್ನು ಫಾಲೋ ಮಾಡುವುದು, ಇಲ್ಲವೇ, ಅವರೊಂದಿಗೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸುವುದು ಒಳ್ಳೆಯದು. ಜೊತೆಗೆ ಅಂತಹ ಬಳಕೆದಾರದನ್ನು ನಿರ್ಬಂಧಿಸಿ. 

ನಕಲಿ ಖಾತೆಗಳ ಬಗ್ಗೆ ಇರಲಿ ಎಚ್ಚರ: 
ಇತ್ತೀಚಿನ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಸೃಷ್ಟಿ ಹೆಚ್ಚಾಗಿದೆ. ನೀವು ಇಂತಹ ಖಾತೆಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನೀವು ಯಾವುದೇ ರೀತಿಯ ಅನುಮಾನಾಸ್ಪದ ಸಂದೇಶ ಅಥವಾ ಲಿಂಕ್ ಅನ್ನು ಸ್ವೀಕರಿಸಿದ್ದರೆ ಆ ಬಗ್ಗೆ ತಕ್ಷಣವೇ ವರದಿ ಮಾಡಿ. 

ಇದನ್ನೂ ಓದಿ- ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ ನಿಯಂತ್ರಿಸಲು ಈ ಟಿಪ್ಸ್ ಅನುಸರಿಸಿ

ಕೊಡುಗೆಗಳ ಹೆಸರಿನಲ್ಲಿ ಬಲೆ ಬೀಸುವ ವಂಚಕರು: 
ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ಅಸಾಧ್ಯವೆಂದು ತೋರುವ ಅತ್ಯಂತ ಆಕರ್ಷಕ ಕೊಡುಗೆಗಳನ್ನು ನೀಡುತ್ತಾರೆ. ನೀವು ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಯಾವುದೇ ರೀತಿಯ ಕೊಡುಗೆಗಳಿಗೆ ಮಾರುಹೋಗಬೇಡಿ. ಇಂತಹ ಕೊಡುಗೆಗಳು ನಿಮ್ಮ ಖಾತೆಯನ್ನೇ ಖಾಲಿ ಮಾಡಬಹುದು. 

ವೈಯಕ್ತಿಕ ಮಾಹಿತಿ: 
ಮೊದಲೇ ತಿಳಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಸ್ನೇಹಿತರೊಂದಿಗೆ ನಿಮ್ಮ  ಬ್ಯಾಂಕ್ ಖಾತೆ ಸಂಖ್ಯೆ, ಕ್ರೆಡಿಟ್ ಕಾರ್ಡ್ ಸಂಖ್ಯೆ ಅಥವಾ ಯಾವುದೇ ಇತರ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. 

ಇದನ್ನೂ ಓದಿ- Side Effect Of Mobile Use: ನೀವು ಸದಾ ಸ್ಮಾರ್ಟ್‌ಫೋನ್‌ ಬಳಸ್ತೀರಾ! ನಿಮ್ಮ ಬ್ರೈನ್ ಮೇಲೆ ಅದು ಹೇಗೆ ಎಫೆಕ್ಟ್ ಆಗುತ್ತೆ ಗೊತ್ತಾ!

ಗೌಪ್ಯತೆ ಸೆಟ್ಟಿಂಗ್‌: 
ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ವೈಯಕ್ತಿಕ ಮಾಹಿತಿ ಲೀಕ್ ಆಗುವುದನ್ನು ತಪ್ಪಿಸಲು  ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀಡಲಾಗಿದೆ. ಈ  ಸೆಟ್ಟಿಂಗ್‌ಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ನೀವು ನಂಬುವ ಜನರಿಗೆ ಮಾತ್ರ ನಿಮ್ಮ ಖಾತೆಗೆ ಪ್ರವೇಶ ನೀಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News