20 ಸಾವಿರ ಅಗ್ಗವಾದ ಈ ಎಲೆಕ್ಟ್ರಿಕ್ ಸ್ಕೂಟರ್ : ಈಗ ಅಗ್ಗದ ಬೆಲೆಗೆ ಖರೀದಿಸಿ ಈ ಸೂಪರ್ EV

Ather 450S Price Slashed:ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಆಡುತ್ತಿದೆ. ಇದೀಗ ಅಥರ್ ಎನರ್ಜಿ ತನ್ನ ಎಂಟ್ರಿ ಲೆವೆಲ್ ಸ್ಕೂಟರ್ - 450S ನ ಹೊಸ ಬೆಲೆಗಳನ್ನು ಘೋಷಿಸಿದೆ.  

Written by - Ranjitha R K | Last Updated : Jan 11, 2024, 12:53 PM IST
  • ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ತಮ್ಮ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ.
  • ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
  • ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕಡಿಮೆ ಮಾಡಿದ ಕಂಪನಿ
20 ಸಾವಿರ ಅಗ್ಗವಾದ ಈ ಎಲೆಕ್ಟ್ರಿಕ್ ಸ್ಕೂಟರ್ : ಈಗ ಅಗ್ಗದ ಬೆಲೆಗೆ ಖರೀದಿಸಿ ಈ ಸೂಪರ್ EV  title=

Ather 450S Price Slashed : ಎಲೆಕ್ಟ್ರಿಕ್ ಸ್ಕೂಟರ್  ಗಳು ಮಾರುಕಟ್ಟೆಯಲ್ಲಿ ತಮ್ಮ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲೆ ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಿನ್ನೆಲೆಯಲ್ಲಿ ಜನರು ಕೂಡಾ ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದೀಗ ಅಥರ್ ಎನರ್ಜಿ ತನ್ನ ಎಂಟ್ರಿ ಲೆವೆಲ್ ಸ್ಕೂಟರ್ - 450S ನ ಹೊಸ ಬೆಲೆಗಳನ್ನು ಘೋಷಿಸಿದೆ. ಸ್ಕೂಟರ್ ಅನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಅದರ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಅಲ್ಲದೆ ಈ ಎಲೆಕ್ಟ್ರಿಕ್ ಸ್ಕೂಟರ್ ನ ಹೊಸ ಬೆಲೆಯನ್ನು ಕೂಡಾ ಬಿಡುಗಡೆ ಮಾಡಲಾಗಿದೆ. 

ಅಥರ್ ಎನರ್ಜಿ 450S  ಹೊಸ ಬೆಲೆ :
ಬೆಂಗಳೂರು - 1,09,000 ರೂ. 
ದೆಹಲಿ - 97,500 ರೂ. 
ಮೊದಲು ಇದರ ಬೆಲೆ ಸುಮಾರು 1.3 ಲಕ್ಷ ರೂ.ಆಗಿತ್ತು. ಅಂದರೆ ಈಗ ಈ ಸ್ಕೂಟರ್ ಬೆಲೆಯನ್ನು 20 ಸಾವಿರ ರೂಪಾಯಿವರೆಗೆ ಕಡಿತ ಮಾಡಲಾಗಿದೆ. ಆದರೆ, ಈ ಬೆಲೆ ಪರಿಷ್ಕರಣೆಗೆ ಕಂಪನಿಯು ಯಾವುದೇ ನಿಖರವಾದ ಕಾರಣವನ್ನು ನೀಡಿಲ್ಲ. ಆದರೆ, Ola ಇತ್ತೀಚೆಗೆ S1 X+ (3 kWh ಬ್ಯಾಟರಿ ಪ್ಯಾಕ್) ಮೇಲೆ 20 ಸಾವಿರ ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಅಥರ್ 450S ನ ಬೆಲೆಯನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : AI Device: ಸ್ಮಾರ್ಟ್‌ಫೋನ್‌ನಂತೆ ಕಾಣುವ ಈ ಸಾಧನ ಯಾವುದು ಗೊತ್ತಾ..?

ಅಥೆರ್ ಎನರ್ಜಿಯ ಮುಖ್ಯ ಅಧಿಕಾರಿ ರವನೀತ್ ಸಿಂಗ್ ಫೋಕೆಲಾ ಮಾತನಾಡಿ, “ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅಥರ್ ಅಗ್ರೆಸಿವ್ ಗ್ರೋಥ್ ಜರ್ನಿಯನ್ನು ಪ್ರಾರಂಭಿಸುತ್ತಿದೆ. ಬೇಡಿಕೆಯನ್ನು ಪೂರೈಸಲು, ನಾವು ಈ ತ್ರೈಮಾಸಿಕದಲ್ಲಿ ಸರಿಸುಮಾರು 100 ಚಿಲ್ಲರೆ ಟಚ್‌ಪಾಯಿಂಟ್‌ಗಳನ್ನು ಸೇರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಒಟ್ಟು ಟಚ್‌ಪಾಯಿಂಟ್‌ಗಳು  350 ಕ್ಕೆ ಏರಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ. 

ಇನ್ನು ಎಂಟ್ರಿ ಲೆವೆಲ್ ನ  ಸ್ಕೂಟರ್ - 450S ಅನ್ನು ಅತ್ಯಂತ ಆಕರ್ಷಕ ಬೆಲೆಯಲ್ಲಿ ಪರಿಚಯಿಸುತ್ತಿರುವುದಾಗಿಯೂ ಘೋಷಿಸಿದ್ದಾರೆ.ಅಥರ್‌ನ ಗುಣಮಟ್ಟ ಮತ್ತು ಭರವಸೆಯನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಜನರಿಗೆ ಪರಿಚಯಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : UPI LIte ಸೇವೆಯನ್ನು ಫೋನ್ ಪೇನಲ್ಲಿ ಹೇಗೆ ಸಕ್ರೀಯಗೊಳಿಸಬೇಕು? ಇಲ್ಲಿದೆ ಸುಲಭ ವಿಧಾನ

ಅಥರ್ 450S 2.9kWh ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ. ಇದು 115 km IDC  ರೇಂಜ್ ನೀಡುತ್ತದೆ. ಇದು 3.9 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಕ್ರಮಿಸುತ್ತದೆ. ಇದರ ಗರಿಷ್ಠ ವೇಗ 90 kmph ಆಗಿದೆ. ವೆಚ್ಚವನ್ನು ಕಡಿತಗೊಳಿಸಲು, ಅಥರ್ 450X ನಲ್ಲಿ ಕಂಡುಬರುವ ಟಚ್‌ಸ್ಕ್ರೀನ್ TFT ಬದಲಿಗೆ LCD ಡಿಸ್ಪ್ಲೇಯೊಂದಿಗೆ 450S ಅನ್ನು ಸಜ್ಜುಗೊಳಿಸಲಾಗಿದೆ. ಫೋನ್ ಸಂಪರ್ಕ ಆಯ್ಕೆಯನ್ನು ಇದರಲ್ಲಿಯೂ ಉಳಿಸಿಕೊಳ್ಳಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News