Youtube: ನಾಲ್ಕರಲ್ಲಿ ಒಬ್ಬ ಯೂಟ್ಯೂಬ್ ರಚನೆಕಾರರು ಗಳಿಸುತ್ತಿದ್ದಾರೆ ಲಕ್ಷ-ಲಕ್ಷ ಹಣ! ಕಂಪನಿ ಹೇಳಿದ್ದೇನು?

YouTube Creaters: ಯೂಟ್ಯೂಬ್ ಕೇವಲ ಮನರಂಜನೆಗಷ್ಟೇ ಸೀಮಿತವಾಗಿಲ್ಲ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರೂ ಕೂಡ ಯೂಟ್ಯೂಬ್ನಿಂದ ಹಣವನ್ನು ಕೂಡ ಸಂಪಾದಿಸಬಹುದು. ಹಾಗಾಗಿಯೇ, ಕಳೆದ ಕೆಲ ವರ್ಷಗಳಿಂದ ಯೂಟ್ಯೂಬ್ ರಚನೆಕಾರರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ. 

Written by - Yashaswini V | Last Updated : Mar 29, 2024, 12:50 PM IST
  • ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಹೊಂದಿರುವ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ.
  • ಕೆಲವರು ಈ ವೇದಿಕೆಯಲ್ಲಿ ಕಿರುಚಿತ್ರಗಳನ್ನು ತಯಾರಿಸುವ ಮೂಲಕ ಹಣ ಸಂಪಾದಿಸುತ್ತಾರೆ.
  • ಲಭ್ಯವಿರುವ ಮಾಹಿತಿಯ ಪ್ರಕಾರ, ಯೂಟ್ಯೂಬ್ ರಚನೆಕಾರರಲ್ಲಿ ನಾಲ್ಕರಲ್ಲಿ ಒಬ್ಬ ವ್ಯಕ್ತಿ ಯೂಟ್ಯೂಬ್ ಶಾರ್ಟ್ಸ್‌ನಲ್ಲಿ ಕಿರು ಚಿತ್ರಗಳನ್ನು ತಯಾರಿಸುವ ಮೂಲಕ ಹಣ ಗಳಿಸುತ್ತಿದ್ದಾರೆ.
Youtube: ನಾಲ್ಕರಲ್ಲಿ ಒಬ್ಬ ಯೂಟ್ಯೂಬ್ ರಚನೆಕಾರರು ಗಳಿಸುತ್ತಿದ್ದಾರೆ ಲಕ್ಷ-ಲಕ್ಷ ಹಣ!  ಕಂಪನಿ ಹೇಳಿದ್ದೇನು?   title=

YouTube Earnings: ಈ ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಜನರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ತಮ ಪ್ಲಾಟ್‌ಫಾರ್ಮ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಅಷ್ಟೇ ಅಲ್ಲ, ಇವು ಉತ್ತಮ ಆದಾಯ ಮೂಲಗಳು ಸಹ ಹೌದು. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಹೊಂದಿರುವ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ಕೆಲವರು ಈ ವೇದಿಕೆಯಲ್ಲಿ ಕಿರುಚಿತ್ರಗಳನ್ನು ತಯಾರಿಸುವ ಮೂಲಕ ಹಣ ಸಂಪಾದಿಸುತ್ತಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಯೂಟ್ಯೂಬ್ ರಚನೆಕಾರರಲ್ಲಿ ನಾಲ್ಕರಲ್ಲಿ ಒಬ್ಬ ವ್ಯಕ್ತಿ ಯೂಟ್ಯೂಬ್ ಶಾರ್ಟ್ಸ್‌ನಲ್ಲಿ  ಕಿರು ಚಿತ್ರಗಳನ್ನು ತಯಾರಿಸುವ ಮೂಲಕ ಹಣ ಗಳಿಸುತ್ತಿದ್ದಾರೆ. 

ಹೌದು, ಈ ಕುರಿತಂತೆ ಗುರುವಾರ (ಮಾರ್ಚ್ 28) ಮಾಹಿತಿ ನೀಡಿರುವ ಯೂಟ್ಯೂಬ್ (Youtube), ಕಳೆದ ವರ್ಷ ಶಾರ್ಟ್ಸ್‌ನಲ್ಲಿ ಆದಾಯ ಹಂಚಿಕೆಯನ್ನು ಪರಿಚಯಿಸಿದಾಗಿನಿಂದ ಯೂಟ್ಯೂಬ್ ಪಾಲುದಾರ ಪ್ರೋಗ್ರಾಂ (YPP) ನಲ್ಲಿನ 25 ಪ್ರತಿಶತಕ್ಕೂ ಹೆಚ್ಚು ಚಾನಲ್‌ಗಳು ಈಗ ಆದಾಯ ಸ್ಟ್ರೀಮ್ ಮೂಲಕ ಗಳಿಸುತ್ತಿವೆ. ಅದರ ಜಾಹೀರಾತು ಹಂಚಿಕೆ ಕಾರ್ಯಕ್ರಮದ ಭಾಗವಾಗಿರುವ ನಾಲ್ಕರಲ್ಲಿ ಒಂದಕ್ಕಿಂತ ಹೆಚ್ಚು ಯೂಟ್ಯೂಬ್ ರಚನೆಕಾರರು ಈಗ ಕಿರು-ರೂಪದ ವಿಡಿಯೋ ಸೇವೆ ಶಾರ್ಟ್ಸ್ ಮೂಲಕ ಹಣ ಗಳಿಸುತ್ತಿದ್ದಾರೆ ಮಾಹಿತಿ ಹಂಚಿಕೊಂಡಿದೆ. 

ಇದನ್ನೂ ಓದಿ- ಗೂಗಲ್ ಚಾಟ್‌ನಲ್ಲಿ ವಾಟ್ಸಾಪ್‌ನಂತಹ ವೈಶಿಷ್ಟ್ಯ! ಏನಿದರ ಪ್ರಯೋಜನ

ಕಳೆದ ಮೂರು ವರ್ಷಗಳಲ್ಲಿ 70 ಬಿಲಿಯನ್ ಡಾಲರ್‌ಗಳನ್ನು ಪಾವತಿಸಿರುವ ಯೂಟ್ಯೂಬ್: 
ಯೂಟ್ಯೂಬ್ ಶಾರ್ಟ್ಸ್ (Youtube Shorts) ಅರ್ಹತೆಯ ಮಿತಿಯನ್ನು 80%ಕಿಂತ ಹೆಚ್ಚಿನದನ್ನು ಪೂರೈಸುವ ಮೂಲಕ ಯೂಟ್ಯೂಬ್ ಪಾಲುದಾರ ಪ್ರೋಗ್ರಾಂ (ವೈ‌ಪಿ‌ಪಿ)  ಗೆ ಸೇರಿದ ರಚನೆಕಾರರು ಈಗ ಯೂಟ್ಯೂಬ್ ನಲ್ಲಿ ಇತರ ವೈ‌ಪಿ‌ಪಿ ಹನಗಳಿಕೆಯ ವೈಶಿಷ್ಟ್ಯಗಳ ಮೂಲಕ ಗಳಿಸುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ಯೂಟ್ಯೂಬ್  ರಚನೆಕಾರರು, ಕಲಾವಿದರು ಮತ್ತು ಮಾಧ್ಯಮ ಕಂಪನಿಗಳಿಗೆ $ 70 ಶತಕೋಟಿ ಪಾವತಿಸಿದೆ ಎಂದು ಹೇಳಿಕೊಂಡಿದೆ. 

ಇದನ್ನೂ ಓದಿ- ಫೇಸ್‌ಬುಕ್‌ನಲ್ಲಿ ವೀಕ್ಷಣೆ ಇತಿಹಾಸವನ್ನು ಡಿಲೀಟ್ ಮಾಡಲು ಇಲ್ಲಿದೆ ಸುಲಭ ಮಾರ್ಗ

ಅಷ್ಟೇ ಅಲ್ಲದೆ, "ಶಾರ್ಟ್ಸ್‌ನಲ್ಲಿ ದಿನಕ್ಕೆ ಸರಾಸರಿ 70 ಶತಕೋಟಿ ವೀಕ್ಷಣೆಗಳು ಮತ್ತು ಹಣ ಗಳಿಸುವ ಹೊಸ ಮಾರ್ಗಗಳೊಂದಿಗೆ, ಶಾರ್ಟ್ಸ್ ಸಮುದಾಯವು ಹೊಸ ರೀತಿಯ ಸೃಜನಶೀಲತೆ ಮತ್ತು ವೇದಿಕೆಯಲ್ಲಿ ಹೊಸ ಧ್ವನಿಗಳೊಂದಿಗೆ ಪ್ರವರ್ಧಮಾನಕ್ಕೆ ಬರುತ್ತಿರುವುದಾಗಿ" ಕಂಪನಿ ಹೇಳಿಕೊಂಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News