ಜಿಯೋಗೆ ಟಕ್ಕರ್ ನೀಡಿದ ಬಿಎಸ್ಎನ್ಎಲ್: 90ರೂ. ಗಿಂತ ಕಡಿಮೆ ಬೆಲೆಯಲ್ಲಿ ಪರಿಚಯಿಸಿದೆ ಹೊಸ ಪ್ಲಾನ್

BSNL Launched New Rs 87 Prepaid Plan: ಬಿಎಸ್ಎನ್ಎಲ್ ರೂ. 87 ರ ಬ್ಯಾಂಗಿಂಗ್ ಯೋಜನೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಬಳಕೆದಾರರಿಗೆ ದಿನಕ್ಕೆ 1ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಇದರ ಹೊರತಾಗಿ, ಅನೇಕ ಪ್ರಯೋಜನಗಳು ಲಭ್ಯವಿವೆ. 

Written by - Yashaswini V | Last Updated : May 11, 2022, 08:50 AM IST
  • ಬಿಎಸ್ಎನ್ಎಲ್ ರೂ. 87 ರ ಬ್ಯಾಂಗಿಂಗ್ ಯೋಜನೆಯನ್ನು ಪ್ರಾರಂಭಿಸಿದೆ.
  • ಬಳಕೆದಾರರಿಗೆ ದಿನಕ್ಕೆ 1ಜಿಬಿ ಡೇಟಾವನ್ನು ನೀಡಲಾಗುತ್ತಿದೆ.
  • ಬಳಕೆದಾರರು ದಿನಕ್ಕೆ 100 ಎಸ್ಎಂಎಸ್ ನೊಂದಿಗೆ ಉಚಿತ ಅನಿಯಮಿತ ಧ್ವನಿ ಕರೆಯನ್ನು ಸಹ ಪಡೆಯುತ್ತಾರೆ.
ಜಿಯೋಗೆ ಟಕ್ಕರ್ ನೀಡಿದ ಬಿಎಸ್ಎನ್ಎಲ್: 90ರೂ. ಗಿಂತ ಕಡಿಮೆ ಬೆಲೆಯಲ್ಲಿ ಪರಿಚಯಿಸಿದೆ ಹೊಸ ಪ್ಲಾನ್  title=
BSNL Rs 87 Prepaid Plan

ಬಿಎಸ್ಎನ್ಎಲ್ ಹೊಸ ಪ್ರಿಪೇಯ್ಡ್ ಯೋಜನೆ:  ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್-ಐಡಿಯಾ ಕೆಲವು ತಿಂಗಳ ಹಿಂದೆ ತಮ್ಮ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ. ಅದರ ನಂತರ ಮೂರು ಟೆಲಿಕಾಂ ಕಂಪನಿಗಳು ಅನೇಕ ಅಗ್ಗದ ಯೋಜನೆಗಳನ್ನು ಪರಿಚಯಿಸಿವೆ. ಇದೀಗ ಬಿಎಸ್ಎನ್ಎಲ್ ಹೊಸ ಪ್ಲಾನ್ ಬಿಡುಗಡೆ ಮಾಡುವ ಮೂಲಕ ಈ ಕಂಪನಿಗಳಿಗೆ ಟಕ್ಕರ್ ನೀಡಿದೆ. 

ದೇಶದ ಪ್ರತಿಯೊಂದು ಟೆಲಿಕಾಂ ವೃತ್ತದಲ್ಲಿ ವೋಚರ್ ಲಭ್ಯವಿಲ್ಲದಿರಬಹುದು. ಈ ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳನ್ನು ನೋಡಿದ ನಂತರ, ಈ ಯೋಜನೆಯು ಅತ್ಯುತ್ತಮ ಆಯ್ಕೆಯಾಗಿದೆ ಎಂದು ನೀವು ಹೇಳುತ್ತೀರಿ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಹುಡುಕುತ್ತಿರುವವರಿಗೆ, ಈ ಯೋಜನೆಯು ಅನುಕೂಲವಾಗಲಿದೆ. ಬಿಎಸ್ಎನ್ಎಲ್ ನ ಹೊಸ ರೂ. 87 ಪ್ರಿಪೇಯ್ಡ್ ಯೋಜನೆಯು ನೀಡುವ ಸಂಪೂರ್ಣ ಪ್ರಯೋಜನಗಳನ್ನು ತಿಳಿಯೋಣ...

ಇದನ್ನೂ ಓದಿ- ನಿಮ್ಮ ಫೆವರೆಟ್ ಶೋಗಳನ್ನು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ವೀಕ್ಷಿಸಿ!

ಬಿಎಸ್ಎನ್ಎಲ್ ರೂ. 87 ರ ಬ್ಯಾಂಗಿಂಗ್ ಯೋಜನೆ:
ಬಿಎಸ್ಎನ್ಎಲ್ ತನ್ನ ರೂ. 87 ಪ್ರಿಪೇಯ್ಡ್ ಯೋಜನೆಯನ್ನು ಒಟ್ಟು 14 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಯೋಜನೆಯೊಂದಿಗೆ ನೀಡಲಾಗುವ ಎಲ್ಲಾ ಉಚಿತ ಕೊಡುಗೆಗೆಳು ಬಳಕೆದಾರರಿಗೆ ಪೂರ್ಣ 14 ದಿನಗಳವರೆಗೆ ಲಭ್ಯವಿರುತ್ತವೆ. ರೂ. 87 ಯೋಜನೆಯು 1ಜಿಬಿ ದೈನಂದಿನ ಡೇಟಾದೊಂದಿಗೆ ಬರುತ್ತದೆ, ಅದರ ನಂತರ ದಿನದ ಉಳಿದ ವೇಗವು 40 Kbps ಗೆ ಕಡಿಮೆಯಾಗುತ್ತದೆ. ಇದಲ್ಲದೆ, ಬಳಕೆದಾರರು ದಿನಕ್ಕೆ 100 ಉಚಿತ ಎಸ್ಎಂಎಸ್ ನೊಂದಿಗೆ ಉಚಿತ ಅನಿಯಮಿತ ಧ್ವನಿ ಕರೆಯನ್ನು ಸಹ ಪಡೆಯುತ್ತಾರೆ. 

ಈ ಯೋಜನೆಯು ಪ್ರತಿ ವಲಯದಲ್ಲಿ ಲಭ್ಯವಿಲ್ಲ:
ಬಿಎಸ್ಎನ್ಎಲ್ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನಿಂದ ಹಾರ್ಡಿ ಗೇಮ್ಸ್ ಮೊಬೈಲ್ ಸೇವೆಯನ್ನು ಸಹ ಬಂಡಲ್ ಮಾಡುತ್ತದೆ. ಇದು ಬಿಎಸ್ಎನ್ಎಲ್ ನಿಂದ ನೀಡುವ ನಿಜವಾದ ಅನನ್ಯ ಪ್ರಿಪೇಯ್ಡ್ ಯೋಜನೆಯಾಗಿದೆ. ಮೇಲೆ ಹೇಳಿದಂತೆ, ಬಿಎಸ್ಎನ್ಎಲ್  ಇನ್ನೂ ಈ ಯೋಜನೆಯನ್ನು ಪ್ರತಿ ವಲಯದಲ್ಲಿ ನೀಡುತ್ತಿಲ್ಲ. ಛತ್ತೀಸ್‌ಗಢ ಮತ್ತು ಅಸ್ಸಾಂ ರಾಜ್ಯಗಳಿಗೆ ಈ ಯೋಜನೆ ಸಿಗುವುದಿಲ್ಲ. ಪಟ್ಟಿಯಲ್ಲಿ ಹೆಚ್ಚಿನವುಗಳಿರಬಹುದು, ಆದರೆ ಬಳಕೆದಾರರು ಬಿಎಸ್ಎನ್ಎಲ್  ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅದನ್ನು ದೃಢೀಕರಿಸಬಹುದು.

ಇದನ್ನೂ ಓದಿ- ಈ ಟಿಪ್ಸ್ ಅನುಸರಿಸಿದರೆ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಬರುತ್ತೆ

ರೂ.6ಕ್ಕೆ ಪ್ರತಿದಿನ 1ಜಿಬಿ ಡೇಟಾವನ್ನು ಪಡೆಯಿರಿ:
ನೀವು ದಿನದ ಪ್ರಕಾರ ಯೋಜನೆಯನ್ನು ನೋಡಿದರೆ, ನೀವು ಸುಮಾರು ರೂ.6 ವೆಚ್ಚದಲ್ಲಿ 1ಜಿಬಿ ಡೇಟಾವನ್ನು ಪಡೆಯುತ್ತೀರಿ. ಧ್ವನಿ ಕರೆ, ಎಸ್ಎಂಎಸ್ ಮತ್ತು ಡೇಟಾ ಸೇವೆಗಳಿಗಾಗಿ ಒಂದು ಸಮಯದಲ್ಲಿ 100 ರೂ.ಗಿಂತ ಹೆಚ್ಚು ಪಾವತಿಸಲು ಬಯಸದ ಬಳಕೆದಾರರಿಗೆ ಇದು ಉತ್ತಮ ಆಯ್ಕೆಯಾಗಿದೆ. ಒಳ್ಳೆಯ ವಿಷಯವೆಂದರೆ ಗ್ರಾಹಕರಿಗೆ ಅಗತ್ಯವಿರುವ ಎಲ್ಲವೂ ಈ ಯೋಜನೆಯಲ್ಲಿ ಲಭ್ಯವಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News