IRCTC AI Tool: ಈಗ ಟ್ರೈನ್ ಟಿಕೆಟ್ ಬುಕ್ ಮಾಡಲು ನೀವು ಮಾತನಾಡಿದರಷ್ಟೇ ಸಾಕು!

IRCTC AI Tool: ಭಾರತೀಯ ರೈಲ್ವೆ ಕಾಲಕಾಲಕ್ಕೆ ತಕ್ಕಂತೆ ಪ್ರಯಾಣಿಕರಿಗಾರಿ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ  ಇರುತ್ತದೆ. ಇದೀಗ ಈ ತಂತ್ರಜ್ಞಾನ ಯುಗದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್ ವೇಳೆ ಅನುಕೂಲವಾಗುವಂತೆ ಐ‌ಆರ್‌ಸಿ‌ಟಿ‌ಸಿ ಹೊಸ ಎಐ ಚಾಟ್‌ಬಾಟ್ AskDisha 2.0 ಅನ್ನು ಪರಿಚಯಿಸಿದೆ.  

Written by - Yashaswini V | Last Updated : Mar 13, 2024, 11:10 AM IST
  • AskDisha 2.0 ಅನ್ನು ಡಿಜಿಟಲ್ ಇಂಟರಾಕ್ಷನ್/ ಡಿಜಿಟಲ್ ಸಂವಹನ ಎಂತಲೂ ಕರೆಯಲಾಗುತ್ತದೆ.
  • ಇದು ಯಾವುದೇ ಸಮಯದಲ್ಲಿ ಪ್ರಯಾಣಿಕರ ಸಹಾಯಕ್ಕಾಗಿ ರೂಪಿಸಲಾಗಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಚಾಟ್‌ಬಾಟ್ ಆಗಿದೆ.
  • AskDisha 2.0 CoRover.AI ನಿಂದ ನಿರ್ವಹಿಸಲ್ಪಡುತ್ತದೆ.
IRCTC AI Tool: ಈಗ ಟ್ರೈನ್ ಟಿಕೆಟ್ ಬುಕ್ ಮಾಡಲು ನೀವು ಮಾತನಾಡಿದರಷ್ಟೇ ಸಾಕು! title=

IRCTC AI Tool For Train Ticket Booking: ಭಾರತೀಯ ರೈಲ್ವೆ ಐ‌ಆರ್‌ಸಿ‌ಟಿ‌ಸಿಯಲ್ಲಿ ಟ್ರೈನ್  ಟಿಕೆಟ್‌ಗಳನ್ನು ಕಾಯ್ದಿರಿಸುವುದು ಮತ್ತು ಇತರ ರೈಲ್ವೆ ಸಂಬಂಧಿತ ಸೇವೆಗಳನ್ನು ಪಡೆಯುವುದು ಈಗ ಮತ್ತಷ್ಟು ಸುಲಭವಾಗಲಿದೆ. ಇದಕ್ಕಾಗಿ ಭಾರತೀಯ ರೈಲ್ವೆ ಹೊಸ ಎಐ ತಂತ್ರಜ್ಞಾನವನ್ನು ಪರಿಚಯಿಸಿದೆ. ಅದಕ್ಕೆ AskDisha 2.0 ಎಂದು ಹೆಸರಿಡಲಾಗಿದೆ.  ಇದರ ಸಹಾಯದಿಂದ ಇನ್ನುಮುಂದೆ ನೀವು ಮಾತಾಡಿದರೆ ಅಷ್ಟೇ ಸಾಕು ನಿಮ್ಮ ಟಿಕೆಟ್ ಅನ್ನು ಸುಲಭವಾಗಿ ಬುಕ್ ಮಾಡಬಹುದು. 

ವಾಸ್ತವವಾಗಿ, ಭಾರತೀಯ ರೈಲ್ವೇಯೂ ತನ್ನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಎಐ ಚಾಟ್‌ಬಾಟ್ AskDisha 2.0 ಅನ್ನು ಪರಿಚಯಿಸಿದೆ. ಐ‌ಆರ್‌ಸಿ‌ಟಿ‌ಸಿ ವೆಬ್‌ಸೈಟ್‌ನಲ್ಲಿ ಈ ಚಾಟ್‌ಬಾಟ್ ಲಭ್ಯವಿದ್ದು, ಇದು ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್‌ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ ಎನ್ನಲಾಗಿದೆ. 

ಏನಿದು AskDisha 2.0? 
AskDisha 2.0 ಅನ್ನು ಡಿಜಿಟಲ್ ಇಂಟರಾಕ್ಷನ್/ ಡಿಜಿಟಲ್ ಸಂವಹನ ಎಂತಲೂ ಕರೆಯಲಾಗುತ್ತದೆ. ಇದು ಯಾವುದೇ ಸಮಯದಲ್ಲಿ ಪ್ರಯಾಣಿಕರ ಸಹಾಯಕ್ಕಾಗಿ ರೂಪಿಸಲಾಗಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಚಾಟ್‌ಬಾಟ್ ಆಗಿದೆ.  AskDisha 2.0 CoRover.AI ನಿಂದ ನಿರ್ವಹಿಸಲ್ಪಡುತ್ತದೆ. 

ಇದನ್ನೂ ಓದಿ- Google Photos: ಗೂಗಲ್ ಫೋಟೋಸ್‌ನಲ್ಲಿ ಫೋಟೋ ಡಿಲೀಟ್ ಆಗಿದ್ಯಾ? ಚಿಂತೆಬಿಡಿ ಈ ರೀತಿ ಮರಳಿ ಪಡೆಯಿರಿ

AskDisha 2.0 ಅನ್ನು ಬಳಸುವುದು ಹೇಗೆ? 
ಪ್ರಸ್ತುತ ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನು ಬೆಂಬಲಿಸುವ ಈ ಚಾಟ್‌ಬಾಟ್ ಐ‌ಆರ್‌ಸಿ‌ಟಿ‌ಸಿ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡರಲ್ಲೂ ಲಭ್ಯವಾಗಲಿದೆ. 

ವೆಬ್‌ಸೈಟ್‌ನಲ್ಲಿ AskDisha 2.0 ಬಳಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: 
* ಮೊದಲು ಐ‌ಆರ್‌ಸಿ‌ಟಿ‌ಸಿ ವೆಬ್‌ಸೈಟ್ ತೆರೆಯಿರಿ. 
* ಮುಖಪುಟದ ಕೆಳಗಿನ ಬಲ ಮೂಲೆಯಲ್ಲಿ ಕಾಣುವ AskDisha 2.0 ಐಕಾನ್‌ನ್ನು ಟ್ಯಾಪ್ ಮಾಡಿ. 
* ಇಲ್ಲಿ ಕಾಣುವ ಪಠ್ಯ ಪೆಟ್ಟಿಗೆಯಲ್ಲಿ ನೇರವಾಗಿ ನಿಮ್ಮ ಪ್ರಶ್ನೆಗಳನ್ನು ಟೈಪ್ ಮಾಡುವ ಮೂಲಕ ಅಗತ್ಯ ಮಾಹಿತಿ ಪಡೆಯಬಹುದು. 
*  ಒಂದೊಮ್ಮೆ ನೀವು ಟೈಪ್ ಮಾಡಲು ಬಯಸದಿದ್ದರೆ ಮಾತನಾಡುವ ಮೂಲಕವೂ ಪ್ರಶ್ನೆಗಳನ್ನು ಕೇಳಬಹುದು. ಇದಕ್ಕಾಗಿ ನೀವು ಮೈಕ್ರೊಫೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ ಪ್ರಶ್ನೆ ಕೇಳಬೇಕಾಗುತ್ತದೆ. 
* ನಂತರ ಚಾಟ್‌ಬಾಟ್ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತದೆ. 

ಇದನ್ನೂ ಓದಿ- ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಯೂಟ್ಯೂಬ್... ಜನರು ಯಾವುದನ್ನು ಹೆಚ್ಚು ಬಳಸುತ್ತಾರೆ ಗೊತ್ತಾ?

ಮೊಬೈಲ್ ಅಪ್ಲಿಕೇಶನ್‌ನಲ್ಲಿ AskDisha 2.0 ಬಳಸುವ ವಿಧಾನ: 
>> ಮೊಬೈಲ್ ಅಪ್ಲಿಕೇಶನ್‌ನಲ್ಲಿ AskDisha 2.0 ಬಳಸಲು ಬಯಸಿದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಐ‌ಆರ್‌ಸಿ‌ಟಿ‌ಸಿ ರೈಲ್ ಕನೆಕ್ಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
>> ಬಳಿಕ ಅಪ್ಲಿಕೇಶನ್‌ನಲ್ಲಿ AskDisha 2.0 ಐಕಾನ್ ಅನ್ನು ಸರ್ಚ್ ಮಾಡಿ. 
>> ಇದರಲ್ಲಿ ನಿಮ್ಮ ಪ್ರಶ್ನೆಗಳನ್ನು ಟೈಪ್ ಮಾಡಿ ಇಲ್ಲವೇ, ಮೈಕ್ರೊಫೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪ್ರಶ್ನೆಗಳನ್ನು ಕೇಳಿ. 
>> ಬಳಿಕ ಚಾಟ್‌ಬಾಟ್ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತದೆ. 

AskDisha 2.0 ಪ್ರಯೋಜನ: 
ಸರಳ ಆಜ್ಞೆಗಳ ಮುಖಾಂತರ ನೀವು AskDisha 2.0 ಅನ್ನು ರೈಲ್ವೆ ಟಿಕೆಟ್ ಬುಕಿಂಗ್ ಸಮಯದಲ್ಲಿ ಬಳಸಬಹುದು. ಇದಲ್ಲದೆ, ಇದರ ಸಹಾಯದಿಂದ ನೀವು ನೀವು PNR ಸ್ಥಿತಿ ಪರಿಶೀಲನೆ, ಟಿಕೆಟ್ ರದ್ದುಗೊಳಿಸುವಿಕೆಯಂತಹ  ಇತರ ಹಲವು ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News