Viral Video: ಪಾಕಿಸ್ತಾನದಲ್ಲಿ ನಡೆದ ಒಂದು ಕ್ರಿಕೆಟ್ ಪಂದ್ಯದ ತಮಾಷೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾನಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಒಂದೇ ತಂಡದ ಇಬ್ಬರು ಆಟಗಾರರು, ರನೌಟ್ ಆದ ನಂತರ, ಕೋಲು ಬೀಸಿದಂತೆ ಪರಸ್ಪರ ಬ್ಯಾಟ್ಗಳನ್ನು ಬೀಸಲು ಆರಂಭಿಸಿದ್ದಾರೆ. (Viral News In Kannada)
Trending Video: ನಾಯಿ, ಬೆಕ್ಕುಗಳನ್ನು ಜನರು ಬೈಕ್ ಮೇಲೆ ಕೂರಿಸಿಕೊಂಡು ಹೋಗುವ ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಹಸು ಅಥವಾ ಎತ್ತನ್ನು ಬೈಕ್ ಮೇಲೆ ಕೂರಿಸಿಕೊಂಡು ಬೈಕ್ ಓಡಿಸುವುದನ್ನು ನೋಡಿದ್ದೀರಾ? ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ತಮಾಷೆಯ ವೀಡಿಯೋ ಜನರನ್ನು ನಗೆಗಡಲಲ್ಲಿ ತೇಲಿಸಿದೆ. (Viral News In Kannada)
Thirsty Crow Returns: ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ವೀಡಿಯೊವೊಂದು ಕಾಣಿಸಿಕೊಂಡಿದ್ದು ಇದೀಗ ಅದು ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಕಾಗೆಯೊಂದು ಗಾಜಿನ ಬಾಟಲಿಗೆ ಕಲ್ಲು ಹಾಕುತ್ತಿರುವುದು ಕಂಡು ಬರುತ್ತದೆ. ಹೀಗೆ ಮಾಡುವುದರಿಂದ ನೀರು ಮೇಲಕ್ಕೆ ಬರುತ್ತಿದೆ ಮತ್ತು ಅದರಿಂದ ಅದು ತನ್ನ ಬ್ಯಾಯಾರಿಕೆಯನ್ನು ತಣಿಸಿಕೊಳ್ಳುತ್ತಿದೆ. ಈ ಕ್ಲಿಪ್ ನೋಡಿದಾಗ ಬಾಯಾರಿದ ಕಾಗೆಯ ಬಾಲ್ಯದ ಕಥೆ ನೆನಪಾಗುತ್ತದೆ. (Viral News In Kannada)
Rashimika Mandanna Deepfake Video: ನಟಿ ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದೆ ಎನ್ನಲಾಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಅದೂ ಆಕೆಯ ವಿಡಿಯೋ ಅಲ್ಲ ಮತ್ತು ಬೇರೊಬ್ಬ ಬೋಲ್ಡ್ ಹುಡುಗಿಯ ಮುಖಕ್ಕೆ ಆಕೆಯ ಮುಖ ಜೋಡಿಸಿ, ಅಂದರೆ ಡೀಪ್ ಫೇಕ್ ವಿಡಿಯೋ ಆಗಿದೆ. ಇದಾದ ಬಳಿಕ ಇದೀಗ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ಸಲಹೆ ಸೂಚನೆ ನೀಡಿದೆ. ಈ ರೀತಿ ಮಾಡಿದರೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ. (Viral News In Kannada)
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಡೆಲಿವರಿ ಬಾಯ್ನ ವಿಡಿಯೋವೊಂದು ಸಕತ್ ವೈರಲ್ ಆಗುತ್ತಿದೆ, ಈ ವಿಡಿಯೋದಲ್ಲಿ ಡೇಲಿವರಿ ಬಾಯ್ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ಸರಕು ಡೇಲಿವರಿ ಮಾಡಲು ಗಾಳಿಯಲ್ಲಿ ಹಾರಾಡಿಕೊಂಡು ಬರುವುದನ್ನು ನೀವು ನೋಡಬಹುದು. ಡೆಲಿವರಿ ಬಾಯ್ನ ಇಂತಹ ವಿಡಿಯೋವನ್ನು ನೀವು ಅಪರೂಪಕ್ಕೆ ನೋಡಿರಬಹುದು. (Viral News In Kannada)
Baba Venga Predictions For Year 2024: ಬಾಬಾ ವೆಂಗಾ ಅವರ 2024 ರ ಭವಿಷ್ಯವಾಗಿ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಯಲ್ಲಿವೆ. ಬಾಬಾ ವೆಂಗಾ ನುಡಿದ ಭವಿಷ್ಯವಾಣಿಯ ಪ್ರಕಾರ, ಸೈಬರ್ ದಾಳಿಗಳು, ನೈಸರ್ಗಿಕ ವಿಕೋಪಗಳು ಸೇರಿದಂತೆ ಅನೇಕ ಘಟನೆಗಳು 2024 ರಲ್ಲಿ ಸಂಭವಿಸಲಿವೆ. 2024 ರಲ್ಲಿ ಬಾಬಾ ವೆಂಗಾ ನುಡಿದ ಕೆಲ ಭವಿಷ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ. (Viral News In Kannada)
Biscuit Aaloo Pakoda Viral Video: ಸಾಮಾಜಿಕ ಮಾಧ್ಯಮದಲ್ಲಿ ಪಾರ್ಲೆ ಜಿ ಆಲೂ ಪಕೋಡಾ ವಿಡಿಯೋವೊಂದು ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ, ಇದರಲ್ಲಿ ಮಹಿಳೆಯೊಬ್ಬರು ಬಿಸ್ಕೆಟ್ ಮತ್ತು ಆಲೂ ಮಸಾಲಾ ಬಳಸಿ ಪಕೋಡ ತಯಾರಿಸುತ್ತಿರುವುದು ಭಾರತೀಯ ಆಹಾರ ಪ್ರಿಯರ ಪಿತ್ತ ನೆತ್ತಿಗೇರಿಸಿದೆ. (Viral News In Kannada)
Rashmika Viral Deepfake Video: ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದ ದೀಪ್ ಫೇಕ್ ವೈರಲ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ನಟಿ ಕೂಡ ಟ್ರೋಲ್ ಗೆ ಗುರಿಯಾಗಿದ್ದರು ಇದೀಗ ಈ ವಿಡಿಯೋಗೆ ಸಂಬಂಧಿಸಿದ ಸಂಪೂರ್ಣ ಸತ್ಯ ಹೊರಬಿದ್ದಿದೆ. ವಿಡಿಯೋದಲ್ಲಿ ಕಾಣಿಸಿಕೊಂಡ ಆ ಬೋಲ್ಡ್ ಬಾಲೆ ಯಾರು ಎಂಬ ಕುತೂಹಲ ಇದೀಗ ಎಲ್ಲರ ಮನದಲ್ಲಿ ಮನೆಮಾಡಿದೆ. ಬನ್ನಿ ಆ ಬಾಲೆ ಯಾರು ತಿಳಿದುಕೊಳ್ಳೋಣ, (Viral News In Kannada)
Viral Cat Fight Video: ಓರ್ವ ಹುಡುಗಿಗೆ ಆಕೆಯ ಗೆಳತಿಯ ಬಾಯ್ ಫ್ರೆಂಡ್ ತುಂಬಾ ಇಷ್ಟವಾಗಿ ಆಕೆ ಅವನಿಗೆ ಲವ್ ಲೆಟರ್ ಬರೆದಿದ್ದಾಳೆ. ಈ ವಿಷಯ ಗೆಳತಿಗೆ ಗೊತ್ತಾದಾಗ ತರಗತಿಯಲ್ಲಿ ದೊಡ್ಡ ರಾದ್ಧಾಂತವೆ ನಡೆದುಹೋಗಿದೆ ಮತ್ತು ಈ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. (Viral News In Kannada)
Viral Video: ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿ ಇಬ್ಬರು ನೆರೆಹೊರೆಯವರ ನಡುವಿನ ವಾದ ಎಷ್ಟೊಂದು ತಾರಕ್ಕಕ್ಕೇರಿದೆ ಎಂದರೆ ಅದು ಇಬ್ಬರು ವ್ಯಕ್ತಿಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಒಬ್ಬ ವ್ಯಕ್ತಿ ಒಂದಾದ ಮೇಲೊಂದರಂತೆ ಗುಂಡು ಹಾರಿಸಿ ತಂದೆ ಮತ್ತು ಮಗನನ್ನು ಹತ್ಯೆಗೈದಿದ್ದಾನೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. (Viral News In Kannada)
Noida Park Viral Video: ನೋಯ್ಡಾದ ಸುಪ್ರಸಿದ್ಧ ವೇದ್ ಒನ್ ಪಾರ್ಕ್ ನಿಂದ ಯುವ ಜೋಡಿಯ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದ ಜನರು ತುಂಬಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರೂ ಪರಸ್ಪರ ಬಾಯಿ ಮುಕ್ಕಳಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬರುತ್ತಿದೆ. ದೆಹಲಿ ಮೆಟ್ರೋ ಮತ್ತು ಕನ್ನಾಟ್ ಪ್ಲೇಸ್ನಲ್ಲಿ ಸಾರ್ವಜನಿಕವಾಗಿ ಇಂತಹ ಹೇಯ ಕೃತ್ಯಗಳನ್ನು ನಡೆಸಿದ್ದು ಇದೇ ಜೋಡಿ ಎನ್ನಲಾಗುತ್ತಿದೆ.(Viral News In Kannada)
Trending Viral Video: ಸಾಮಾನ್ಯವಾಗಿ ನಮ್ಮ ವಾಹನ ಅಥವಾ ಬೈಕ್ ಕೈಕೊಟ್ಟಾಗ ನಾವು ನಮ್ಮ ದೈನಂದಿನ ಜೀವನದಲ್ಲಿ ಇ-ರಿಕ್ಷಾ ಅಥವಾ ಸಾಮಾನ್ಯ ಆಟೋ ರಿಕ್ಷಾನಲ್ಲಿ ಸವಾರಿ ಮಾಡುತ್ತೇವೆ. ರಿಕ್ಷಾದಲ್ಲಿ ಇಬ್ಬರು ಅಥವಾ ಮೂವರು ಸುಲಭವಾಗಿ ಪ್ರಯಾಣ ಮಾಡಬಹುದು. ಪ್ರಯಾಣಿಸಬಹುದು. ಆದರೆ ಕೆಲವು ಪ್ರಯಾಣಿಕರು ರಿಕ್ಷಾದ ಹಿಂಬದಿಯಲ್ಲಿ ಹಿಮ್ಮುಖ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ರಿಕ್ಷಾ ಸ್ಪೀಡ್ ಬ್ರೇಕರ್ ಮೂಲಕ ಹಾದುಹೋಗುವಾಗ, ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ, ಏಕೆಂದರೆ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ರುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. (Viral News In Kannada)
Boyfriend-Girlfriend Viral Video: ಬೆಚ್ಚಿ ಬೀಳಿಸುವ ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆಗೆ ಹಟಕ್ಕೆ ಬಿದ್ದು ಪಂಜಾ ಫೈಟ್ ಗೆ ಇಳಿದಿದ್ದಾಳೆ. ಆದರೆ ಪಂದ್ಯದ ವೇಳೆ ಬಾಯ್ ಫ್ರೆಂಡ್ ಹಾಕಿದ ಒತ್ತಡಕ್ಕೆ ಹುಡುಗಿಯ ಕೈಯೆ ಮುರಿದಿದೆ. (Viral News In Kannada)
Viral Video: ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಬಾಲಕನೊಬ್ಬ ಮಾಡಿರುವ ಸಾಹಸಾವನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ಕಕ್ಕಾಬಿಕ್ಕಿಯಾಗಿದ್ದಾರೆ. ಇದರಲ್ಲಿ ವಿಶೇಷತೆ ಎಂದರೆ ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ತನ್ನ ಕೈಯಿಂದಲೇ ವಿದ್ಯುತ್ ಪರಿವರ್ತಕಕ್ಕೆ ಬಾಲಕ ತಂತಿಯನ್ನು ಜೋಡಿಸುತ್ತಿದ್ದಾನೆ. ಇದರ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಜನರು ಈ ರೀತಿ ಯಾರು ತಂತಿ ಜೋಡಿಸುತ್ತಾರೆ ಭಾಯ್..! ಎಂದು ಪ್ರಶ್ನಿಸುತ್ತಿದ್ದಾರೆ. (Viral News In Kannada)
Trending Video: ಗಿಳಿ ಮರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಅದರಲ್ಲಿ ಅದು ಮಗುವಿನಂತೆ ಹಸಿವಾದಾಗ ತನ್ನ ತಾಯಿಯಿಂದ ಊಟ ಕೇಳುತ್ತಿರುವುದು ನೀವು ನೋಡಬಹುದು. ಈ ವಿಡಿಯೋ ನೋಡಿದ ಸಾರ್ವಜನಿಕರ ಮುಖದಲ್ಲಿ ನಗು ನಿಲ್ಲುತ್ತಲೆ ಇಲ್ಲ.(Viral News In Kannada)
Hanuman Flying Viral Video: ಛತ್ತೀಸ್ಗಢದಲ್ಲಿ ದಸರಾ ಆಚರಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಇದರಲ್ಲಿ ‘ಹನುಮಂತನ’ ಮೂರ್ತಿಯನ್ನು ಡ್ರೋನ್ಗೆ ಜೋಡಿಸಿ ಹಾರಿಸುತ್ತಿರುವುದನ್ನು ನೀವು ಕಾಣಬಹುದು. ಜತೆಗೆ ಧಾರ್ಮಿಕ ಘೋಷಣೆಗಳೂ ಮೊಳಗುತ್ತಿವೆ. ಈ ವಿಡಿಯೋ ವೈರಲ್ ಆದ ಬಳಿಕ, ಸಾಮಾಜಿಕ ವೇದಿಕೆ X ನಲ್ಲಿ ವಿಜ್ಞಾನ ಮತ್ತು ಧರ್ಮದ ಕುರಿತಾದ ಚರ್ಚೆಗಳು ವೇಗ ಪಡೆದುಕೊಂಡಿವೆ! (Viral News In Kannada)
Vande Ordinary Inside Look: ದೇಶದ ಮೊದಲ ವಂದೇ ಸಾಧಾರಣ ರೈಲು ಶೀಘ್ರದಲ್ಲೇ ಹಳಿಗೆ ಇಳಿಯಲಿದೆ. ಇದರ ಒಳ ನೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. (Viral News In Kannada)
Viral Video: ನಿಬ್ಬೆರಗಾಗಿಸುವ ಈ ವಿಡಿಯೋದಲ್ಲಿ ಒಂದು ಶಕ್ತಿಶಾಲಿ ಗೂಳಿ ಪುಟಾಣಿ ಮೇಕೆಯ ಮುಂದೆ ಕೈಚೆಲ್ಲಿದ್ದನ್ನು ನೀವು ನೋಡಬಹುದು. ಅಷ್ಟೇ ಯಾಕೆ ಪುಟಾಣಿ ಮೇಕೆಯ ಕಾನ್ಫಿಡೆನ್ಸ್ ಕಂಡು ಅಲ್ಲಿಂದ ಕಾಲು ಕಿತ್ತಿದೆ. (Viral News In Kannada)
Weird Job: ಇಂದಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿ ಹಣ ಸಂಪಾದಿಸಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆಗ ಮಾತ್ರ ನಾವು ನಮ್ಮನ್ನು ಉಳಿಸಿಕೊಳ್ಳಲು ಸಾಕಷ್ಟು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಕೆಲಸವು ಭಾರಿ ಚರ್ಚೆಗೆ ಬಂದಿರುವುದು ನಿಮಗೆ ತಿಳಿದಿದೆಯೇ? ಈ ಕೆಲಸದಲ್ಲಿ ನೀವು ಏನನ್ನೂ ಮಾಡಬೇಕಾಗಿಲ್ಲ ಮತ್ತು ಆದರೆ ಪ್ರತಿಯಾಗಿ ನಿಮಗೆ ಸಾವಿರಾರು ರೂಪಾಯಿಗಳ ವೇತನ ಸಿಗುತ್ತದೆ. Viral News In Kannada
Trending Video: ಈಗ ಚಲಿಸುತ್ತಿರುವ ದೆಹಲಿ ಮೆಟ್ರೋದಿಂದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಇಂತಹ ಕೆಲಸವನ್ನು ಹೇಗೆ ಮಾಡುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ. ಈ ಜೋಡಿಯ ಅಸಹ್ಯಕರ ವರ್ತನೆ ನೋಡಿ ಇಂಟರ್ನೆಟ್ ಮಂದಿಯ ತಾಪತ್ರಯ ಜಾಸ್ತಿಯಾಗಿದೆ. (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.