IND vs AUS Final Weather Report: ಭಾರತ - ಆಸ್ಟ್ರೇಲಿಯಾ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಗೆಲುವು ಯಾರಿಗೆ?

Ahmedabad Weather Report : ಮಳೆಯಿಂದಾಗಿ ಫೈನಲ್ ಪಂದ್ಯ ರದ್ದಾದರೆ ಏನಾಗುತ್ತದೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಹಾಗೊಂದು ವೇಳೆ ಮಳೆ ಬಂದು ಮ್ಯಾಚ್‌ ರದ್ದಾದರೆ ಯಾವ ತಂಡವನ್ನು ಯಾವ ಆಧಾರದ ಮೇಲೆ ವಿಜೇತ ಎಂದು ಘೋಷಿಸಲಾಗುತ್ತದೆ ಎಂಬ ಕುತೂಹಲ ಸಹ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ... 

Written by - Chetana Devarmani | Last Updated : Nov 18, 2023, 11:23 AM IST
    • ಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಏನಾಗಬಹುದು?
    • ಮೀಸಲು ದಿನದ ಸಮೀಕರಣ ಹೇಗಿರುತ್ತದೆ?
    • ಯಾವ ತಂಡಕ್ಕೆ ಹೆಚ್ಚು ಲಾಭ? ಯಾರಿಗೆ ನಷ್ಟ?
IND vs AUS Final Weather Report: ಭಾರತ - ಆಸ್ಟ್ರೇಲಿಯಾ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಗೆಲುವು ಯಾರಿಗೆ? title=
final world cup 2023

India vs Australia Final Weather Report: ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಪಂದ್ಯಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಈ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ವಿಶ್ವಕಪ್ ಫೈನಲ್‌ಗೂ ಮುನ್ನ ಅಹಮದಾಬಾದ್‌ನ ಹವಾಮಾನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯ ಪಂದ್ಯದ ದಿನ ಅಹಮದಾಬಾದ್‌ನಲ್ಲಿ ಹವಾಮಾನ ಹೇಗಿರುತ್ತದೆ ಎಂದು ತಿಳಿಯಲು ಅನೇಕರು ಬಯಸುತ್ತಿದ್ದಾರೆ. ಫೈನಲ್ ಪಂದ್ಯದ ಸಮಯದಲ್ಲಿ ಮಳೆ ಬಂದರೆ ಏನಾಗಬಹುದು? ಮೀಸಲು ದಿನದ ಸಮೀಕರಣ ಹೇಗಿರುತ್ತದೆ? ಯಾವ ತಂಡಕ್ಕೆ ಇದು ಹೆಚ್ಚು ಲಾಭ? ಯಾರಿಗೆ ಇದರಿಂದ ನಷ್ಟ? ಎಂಬುದರ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೇಲ್ಸ್..

ಇದನ್ನೂ ಓದಿ : ಭಾರತ vs ಆಸ್ಟ್ರೇಲಿಯಾ.. ಟ್ರೋಫಿ ಗೆಲ್ಲುವ ತಂಡ ಇದು.. ವಿಶ್ವಕಪ್ ವಿಜೇತರ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..!

ಹವಾಮಾನ ಇಲಾಖೆಯ ಪ್ರಕಾರ, ಅಹಮದಾಬಾದ್‌ನಲ್ಲಿ ನವೆಂಬರ್ 19 ರಂದು ಗರಿಷ್ಠ ತಾಪಮಾನ ಸುಮಾರು 33 ಡಿಗ್ರಿ ಇರಬಹುದು. ಕನಿಷ್ಠ ತಾಪಮಾನವನ್ನು 20 ಡಿಗ್ರಿಗಳಷ್ಟು ನಿರೀಕ್ಷಿಸಲಾಗಿದೆ. ಸದ್ಯ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅಂದರೆ ಫೈನಲ್ ನಲ್ಲಿ 100 ಓವರ್ ಗಳ ಸಂಪೂರ್ಣ ಪಂದ್ಯವನ್ನು ನೋಡಬಹುದಾಗಿದೆ. ಆದರೆ ತಾಪಮಾನ ಕಡಿಮೆಯಾಗುವುದರಿಂದ, ಸಂಜೆ ಸಮಯದ ಮೈದಾನದಲ್ಲಿ ಇಬ್ಬನಿ ಗೋಚರಿಸುತ್ತದೆ. ಈ ಅವಧಿಯಲ್ಲಿ ಗಂಟೆಗೆ 8 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಳೆ ಬಂದರೆ ಸಮೀಕರಣ ಹೇಗಿರುತ್ತದೆ?

ಸದ್ಯ ಫೈನಲ್ ಪಂದ್ಯದ ವೇಳೆ ಅಹಮದಾಬಾದ್ ನ ಹವಾಮಾನ ವರದಿ ಪ್ರಕಾರ, ಮಳೆ ಬರುವುದಿಲ್ಲ. ಹಾಗೊಂದು ವೇಳೆ ಮಳೆ ಸುರಿದರೆ ಅಭಿಮಾನಿಗಳಿಗೆ ನಿರಾಸೆ ಕಾದಿದೆ. ಹೆಚ್ಚು ಮಳೆಯಾದರೆ, ಓವರ್‌ಗಳು ಕಡಿಮೆಯಾಗುತ್ತವೆ. ಇಲ್ಲಿ ಡಕ್ವರ್ತ್-ಲೂಯಿಸ್ ನಿಯಮ ಅನ್ವಯಿಸುತ್ತದೆ. ಇದಲ್ಲದೇ ಅಂತಿಮ ಪಂದ್ಯದಲ್ಲಿ ದಿನವಿಡೀ ಮಳೆ ಸುರಿದರೆ ಅದಕ್ಕೆ ಒಂದು ದಿನದ ಮೀಸಲು ದಿನ ಇಡಲಾಗಿದೆ. ನ.19ರಂದು ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡರೆ ಮರುದಿನ ಆಡಿಸಲಾಗುತ್ತದೆ.

ಇದಲ್ಲದೆ, ಮೀಸಲು ದಿನವೂ ಮಳೆಯಾದರೆ, ಕ್ರಿಕೆಟ್‌ ಅಭಿಮಾನಿಗಳಿಗೆ ತುಂಬಾ ಬೇಸರದ ಸಂಗತಿಯಾಗಲಿದೆ. ಆದರೆ ಐಸಿಸಿ ಈ ಪರಿಸ್ಥಿತಿಗೂ ನಿಯಮವನ್ನು ಮಾಡಿದೆ. ಈ ನಿಯಮದ ಪ್ರಕಾರ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡವನ್ನು ವಿಜೇತರೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಹವಾಮಾನ ಮುನ್ಸೂಚನೆಯನ್ನು ನೋಡಿದರೆ, ಅದರ ಸಾಧ್ಯತೆಗಳು ಕಡಿಮೆ ಅಥವಾ ನಗಣ್ಯ. ಸದ್ಯಕ್ಕೆ ಎಲ್ಲರ ಕಣ್ಣು ಭಾರತ ತಂಡದ ಮೇಲಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್‌ ಗೆ ಎಂಟ್ರಿ ಕೊಟ್ಟಿರುವ ಟೀಮ್‌ ಇಂಡಿಯಾ ಸತತ 10 ಪಂದ್ಯಗಳನ್ನು ಗೆದ್ದಿದೆ. ಸೆಮಿಫೈನಲ್ ಪಂದ್ಯದಲ್ಲಿ ಟೀಮ್‌ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಇದರಿಂದಾಗಿ ಭಾರತ ತಂಡದ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಕೂಡ ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿದೆ.

ಇದನ್ನೂ ಓದಿ : ಭಾರತ ಈ ತಪ್ಪುಗಳನ್ನು ಮಾಡದಿದ್ದರೆ ಈ ಸಲ ವಿಶ್ವಕಪ್ ನಮ್ದೇ.. ಅವರಿಬ್ಬರನ್ನು ಔಟ್ ಮಾಡಿದರೆ ಸಾಕು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News