ವಿರಾಟ್‌ ಸಾಧನೆಗೆ ʼಕ್ರಿಕೆಟ್‌ ದೇವರʼ ಶುಭ ಸಂದೇಶ..! ಕೊಹ್ಲಿ ಹೊಗಳಿದ ಸಚಿನ್‌

Sachin Tendulkar on Virat kohli : ವಿಶ್ವಕಪ್‌ 2023 ವಿರಾಟ್ ಕೊಹ್ಲಿಗೆ ವಿಶ್ವ ದಾಖಲೆ ವೇದಿಕೆ ನಿರ್ಮಾಣ ಮಾಡಿ ಕೊಟ್ಟಿದೆ.  ಕ್ರಿಕೆಟ್‌ ದೇವರು ಸಚಿನ್‌ ತೆಂಡಲ್ಕೂರ್‌ ಅವರ ವಿಶ್ವ ದಾಖಲೆಯನ್ನು ಈ ಪಂದ್ಯದ ಕೊಹ್ಲಿ ಸರಿಗಟ್ಟಿ ದಾಖಲೆ ನಿರ್ಮಿಸಿದ್ದಾರೆ. ಸಧ್ಯ ಜೂನಿಯರ್‌ ಸಾಧನೆಗೆ ಸಿನಿಯರ್‌ ಸಚಿನ್‌ ಮೆಚ್ಚುಗೆ ಸಂದೇಶ ಬರೆದಿದ್ದಾರೆ.

Written by - Krishna N K | Last Updated : Nov 15, 2023, 08:03 PM IST
  • ವಿರಾಟ್‌ ಬಗ್ಗೆ ಮೆಚ್ಚುಗೆ ಸಂದೇಶ ಬರೆದ ಕ್ರಿಕೆಟ್‌ ಗಾಡ್‌
  • ಕೊಹ್ಲಿ 50ನೇ ಶತಕಕ್ಕೆ ಕ್ರಿಕೆಟ್‌ ಗಾಡ್‌ ಸಚಿನ್‌ ಶುಭಾಶಯ
  • ಎಕ್ಸ್‌ ಖಾತೆಯಲ್ಲಿ ಕಿಂಗ್‌ ಕೊಹ್ಲಿ ಹೊಗಳಿದ ತೆಂಡಲ್ಕೂರ್‌
ವಿರಾಟ್‌ ಸಾಧನೆಗೆ ʼಕ್ರಿಕೆಟ್‌ ದೇವರʼ ಶುಭ ಸಂದೇಶ..! ಕೊಹ್ಲಿ ಹೊಗಳಿದ ಸಚಿನ್‌ title=

Virat Kohli's 50th century : ವಿಶ್ವಕಪ್‌ 2023ರಲ್ಲಿ ಭಾರತ ಅಜೇಯನಾಗಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಇಂದು ಭಾರತ ವರ್ಸಸ್ ನ್ಯೂಜಿಲೆಂಡ್ ವಿಶ್ವಕಪ್ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು, ವಾಂಖೆಡೆ ಕ್ರೀಡಾಂಗಣ ರೋಚಕ ಪಂದ್ಯಾವಳಿಗೆ ಸಾಕ್ಷಿಯಾಗಿದೆ. ಮೊದಲಿಗೆ ಟಾಸ್‌ ಗೆದ್ದು, ಬ್ಯಾಟಿಂಗ್‌ ಆಯ್ದುಕೊಂಡ ಭಾರತ ತಂಡ ಅಬ್ಬರ ಬ್ಯಾಟಿಂಗ್‌ ಮೂಲಕ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿತು.

ಇನ್ನು ಈ ಪಂದ್ಯ ವಿರಾಟ್ ಕೊಹ್ಲಿಗೆ ವಿಶ್ವ ದಾಖಲೆ ವೇದಿಕೆ ನಿರ್ಮಾಣ ಮಾಡಿ ಕೊಟ್ಟಿದೆ. ಕ್ರಿಕೆಟ್‌ ದೇವರು ಸಚಿನ್‌ ತೆಂಡಲ್ಕೂರ್‌ ಅವರ ವಿಶ್ವ ದಾಖಲೆಯನ್ನು ಈ ಪಂದ್ಯದ ಕೊಹ್ಲಿ ಸರಿಗಟ್ಟಿ ದಾಖಲೆ ನಿರ್ಮಿಸಿದ್ದಾರೆ. ಕಿಂಗ್‌ ಕೊಹ್ಲಿ ಈ ಸಾಧನೆಗೆ ಕ್ರೀಡಾಂಗಣದಲ್ಲಿದ್ದ ಕ್ರಿಕೆಟ್‌ ಅಭಿಮಾನಿಗಳು ಕೊಹ್ಲಿ ಹೆಸರನ್ನು ಕೂಗುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. 

ಇದನ್ನೂ ಓದಿ:'ಕೊಹ್ಲಿಯ ಶ್ರೇಷ್ಠ ದಾಖಲೆಗಳ ಮಧ್ಯೆ ಅಬ್ಬರಿಸಿದ ಶ್ರೇಯಸ್ ಅಯ್ಯರ್! ಈ ರೆಕಾರ್ಡ್ ಬರೆದವರು ಭಾರತದಲ್ಲಿ ಯಾರೂ ಇಲ್ಲ…

ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ 50ನೇ ಶತಕವನ್ನು ಇಂದಿನ ಪಂಧ್ಯದಲ್ಲಿ ದಾಖಲಿಸಿದರು. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದರು. 113 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 117 ರನ್ ಕೆಲ ಹಾಕಿದರು.  ಸಧ್ಯ ಸ್ವತಃ ಸಚಿನ್‌ ಕೊಹ್ಲಿ ಸಾಧನೆಯನ್ನು ಕೊಂಡಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖ್ಯಾತೆಯಲ್ಲಿ, ʼʼನಾನು ಮೊದಲ ಬಾರಿ ನಿಮ್ಮನ್ನು ಕಂಡದ್ದು ಡ್ರೆಸ್ಸಿಂಗ್ ರೂಮ್‌ನಲ್ಲಿ. ಇತರ ಆಟಗಾರರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಎಂದು ಹೇಳಿದ್ದರು. ನೀವು ಹಾಗೆ ಮಾಡಲು ಬಂದಾಗ ತಮಾಷೆ ಮಾಡಿ ನಕ್ಕಿದ್ದರು. ನನಗೂ ನಗು ತಡೆಯಲಾಗಲಿಲ್ಲ. ಆದ್ರೆ ಶೀಘ್ರವಾಗಿ ನೀವು ನನ್ನ ಹೃದಯವನ್ನ  ಮುಟ್ಟಿದ್ದೀರಿ. ಆ ಯುವ ಆಟಗಾರ ಈಗ 'ವಿರಾಟ್' ಆಗಿ ಬೆಳೆದಿದ್ದು ನನಗೆ ಖುಷಿ ಕೊಟ್ಟಿದೆ. ಭಾರತೀಯನೊಬ್ಬ ನನ್ನ ದಾಖಲೆ ಮುರಿದಿದ್ದಕ್ಕೆ ನನ್ನಷ್ಟು ಹೆಚ್ಚು ಸಂತೋಷಪಡಲು ಬೇರೆಯವರಿಂದ ಸಾಧ್ಯವಿಲ್ಲ. ವಿಶ್ವಕಪ್‌ನ ಅತಿದೊಡ್ಡ ವೇದಿಕೆಯಲ್ಲಿ ಅದರಲ್ಲೂ ನನ್ನ ತವರು ನೆಲದಲ್ಲಿ, ಸೆಮಿ-ಫೈನಲ್‌ ಪಂದ್ಯದಲ್ಲಿ ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ.ʼʼ ಎಂದು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News