ವಿಶ್ವಕಪ್’ನಿಂದ ವಿಂಡೀಸ್ ಔಟ್! ಈ ಆಟಗಾರರೇ ಸೋಲಿಗೆ ಕಾರಣ ಎಂದು ಪಬ್ಲಿಕ್’ನಲ್ಲಿಯೇ ದೂಷಿಸಿದ ನಾಯಕ

ICC World Cup 2023: 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ತಂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇರುವುದು ಇದೇ ಮೊದಲು. ಸೋಲಿನ ನಂತರ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಇಡೀ ತಂಡವನ್ನು ದೂಷಿಸಿದ್ದಾರೆ.

Written by - Bhavishya Shetty | Last Updated : Jul 2, 2023, 12:13 PM IST
    • ಐಸಿಸಿ ಕ್ರಿಕೆಟ್ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯ
    • ವೆಸ್ಟ್ ಇಂಡೀಸ್ ತಂಡವನ್ನು ಸ್ಕಾಟ್ಲೆಂಡ್ 7 ವಿಕೆಟ್ ಗಳಿಂದ ಸೋಲಿಸಿತು
    • 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ತಂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇರುವುದು ಇದೇ ಮೊದಲು
ವಿಶ್ವಕಪ್’ನಿಂದ ವಿಂಡೀಸ್ ಔಟ್! ಈ ಆಟಗಾರರೇ ಸೋಲಿಗೆ ಕಾರಣ ಎಂದು ಪಬ್ಲಿಕ್’ನಲ್ಲಿಯೇ ದೂಷಿಸಿದ ನಾಯಕ title=
West Indies World Cup 2023

ICC World Cup 2023: ಸ್ಕಾಟ್ಲೆಂಡ್ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನೊಂದಿಗೆ ಈ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಆಡುವ ವೆಸ್ಟ್ ಇಂಡೀಸ್ ಕನಸು ಕೂಡ ಭಗ್ನಗೊಂಡಿದೆ. ಸೋಲಿನ ಬಳಿಕ ನಾಯಕ ಶಾಯ್ ಹೋಪ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: 6 ಎಸೆತ… 35 ರನ್! ಟೆಸ್ಟ್ ಪಂದ್ಯದ 1 ಓವರ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗ Team Indiaದ ಈ ಬೌಲರ್

ಐಸಿಸಿ ಕ್ರಿಕೆಟ್ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಶನಿವಾರ ವೆಸ್ಟ್ ಇಂಡೀಸ್ ತಂಡವನ್ನು ಸ್ಕಾಟ್ಲೆಂಡ್ 7 ವಿಕೆಟ್ ಗಳಿಂದ ಸೋಲಿಸಿತು. ಇದರೊಂದಿಗೆ ವೆಸ್ಟ್ ಇಂಡೀಸ್ ತಂಡ 2023ರ ವಿಶ್ವಕಪ್‌ ನಲ್ಲಿ ಆಡುವ ರೇಸ್‌ ನಿಂದ ಹೊರಗುಳಿದಿದೆ. 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ತಂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇರುವುದು ಇದೇ ಮೊದಲು. ಸೋಲಿನ ನಂತರ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಇಡೀ ತಂಡವನ್ನು ದೂಷಿಸಿದ್ದಾರೆ.

ಪಂದ್ಯದಲ್ಲಿ ಸೋತ ನಂತರ ವಿಂಡೀಸ್ ತಂಡದ ನಾಯಕ ಶಾಯ್ ಹೋಪ್ ಮಾತನಾಡಿದ್ದು, “ಈ ಆಟ ತುಂಬಾ ಸವಾಲಿನದು ಎಂದು ನಮಗೆ ತಿಳಿದಿತ್ತು. ಟಾಸ್ ಬಹಳ ಮುಖ್ಯ. ಈ ಮೈದಾನದಲ್ಲಿ ಯಾವ ನಾಯಕ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಮಾಡಲು ಯೋಚಿಸುತ್ತಾನೆ. ನಮ್ಮ ಫೀಲ್ಡಿಂಗ್ ಚೆನ್ನಾಗಿರಲಿಲ್ಲ. ಕ್ಯಾಚ್‌ ಮತ್ತು ಮಿಸ್‌ಫೀಲ್ಡ್‌ ನಡೆಯುತ್ತಲೇ ಇರುತ್ತವೆ” ಎಂದರು.

“ನಾವು ಈ ಪಂದ್ಯದಲ್ಲಿ ನಮ್ಮ 100 ಪ್ರತಿಶತವನ್ನು ನೀಡಲಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ತಯಾರಿ ಸ್ವಲ್ಪ ಚೆನ್ನಾಗಿರಬೇಕಿತ್ತು. ನಮ್ಮನ್ನು ನಾವು ಸಿದ್ಧಪಡಿಸದೆ ಇಲ್ಲಿ ಆಡುವ ಬಗ್ಗೆ ಯೋಚಿಸಲು ಸಹ ಸಾಧ್ಯವಿಲ್ಲ. ನಮಗೆ ಇನ್ನೂ 2 ಪಂದ್ಯಗಳು ಬಾಕಿ ಇವೆ. ಅವುಗಳಲ್ಲಿ ನಮ್ಮ ಕೈಲಾದದ್ದನ್ನು ಮಾಡಲು ಪ್ರಯತ್ನಿಸುತ್ತೇವೆ. ನಮ್ಮಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ, ಅದರಲ್ಲಿ ನಿಯಮಿತವಾಗಿ ಉತ್ತಮ ಸಾಧನೆ ಮಾಡಬೇಕು” ಎಂದು ಕೊಂಚ ಅಸಮಾಧಾನದಿಂದಲೇ ಹೇಳಿದರು.

ಇದನ್ನೂ ಓದಿ: “ನಾನು 10,000 ಮಹಿಳೆಯರೊಂದಿಗೆ ಸೆಕ್ಸ್ ಮಾಡಿದ್ದೇನೆ…”: ದಿಗ್ಗಜನ ಹೇಳಿಕೆಗೆ ಕ್ರೀಡಾ ಜಗತ್ತಿನಲ್ಲಿ ಕೋಲಾಹಲ!

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 182 ರನ್ ಗಳ ಗುರಿಯನ್ನು ಸ್ಕಾಟ್ಲೆಂಡ್ 44ನೇ ಓವರ್ ನಲ್ಲಿ ಸಾಧಿಸಿತು. ವೆಸ್ಟ್ ಇಂಡೀಸ್ ತಂಡ 43.5 ಓವರ್‌ ಗಳಲ್ಲಿ 181 ರನ್ ಗಳಿಸಲಷ್ಟೇ ಶಕ್ತವಾಯಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News