Viral Video: ವಿಕೆಟ್ ಪಡೆದು ವಿಚಿತ್ರವಾಗಿ ಸಂಭ್ರಮಿಸಿದ ವೆಸ್ಟ್ ಇಂಡೀಸ್ ಬೌಲರ್..!

Australia vs West Indies: ವೆಸ್ಟ್ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳಿಗೆ ಆಲೌಟ್ ಆದ ಬಳಿಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಉಸ್ಮಾನ್ ಖವಾಜಾ 75 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 25 ರನ್ ಗಳಿಸಿದರು. ೩ನೇ ದಿನದಾಟದಲ್ಲಿ ವೆಸ್ಟ್‌ ಇಂಡೀಸ್‌ ತಂಡವು ೫೦ ಓವರ್‌ಗಳಲ್ಲಿ ೪ ವಿಕೆಟ್‌ ಕಳೆದುಕೊಂಡು ೧೪೮ ರನ್‌ ಗಳಿಸಿದ್ದು, ೧೭೦ ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. 

Written by - Puttaraj K Alur | Last Updated : Jan 27, 2024, 01:31 PM IST
  • ಮೊದಲ ಟೆಸ್ಟ್‌ ವಿಕೆಟ್‌ ಪಡೆದ ಬಳಿಕ ವಿಚಿತ್ರವಾಗಿ ಸಂಭ್ರಮಿಸಿದ ವೆಸ್ಟ್‌ ಇಂಡೀಸ್‌ ಬೌಲರ್‌
  • ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಕೆವಿನ್ ಸಿಂಕ್ಲೇರ್ ಕಾರ್ಟ್‌ವೀಲ್‌ ಸಂಭ್ರಮ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ಸಂಭ್ರಮಾಚರಣೆಯ ವಿಡಿಯೋ
Viral Video: ವಿಕೆಟ್ ಪಡೆದು ವಿಚಿತ್ರವಾಗಿ ಸಂಭ್ರಮಿಸಿದ ವೆಸ್ಟ್ ಇಂಡೀಸ್ ಬೌಲರ್..! title=
ವಿಚಿತ್ರವಾಗಿ ಸಂಭ್ರಮಿಸಿದ ವೆಸ್ಟ್‌ ಇಂಡೀಸ್‌ ಬೌಲರ್‌!

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ೨ನೇ ಟೆಸ್ಟ್ ಪಂದ್ಯವು ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ಬ್ರಿಸ್ಬೇನ್‌ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ೨ನೇ ದಿನದಾಟದ ವೇಳೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕೆವಿನ್ ಸಿಂಕ್ಲೇರ್ ಶುಕ್ರವಾರ ತಮ್ಮ ಮೊದಲ ಟೆಸ್ಟ್ ವಿಕೆಟ್ ಪಡೆದ ಬಳಿಕ ವಿಚಿತ್ರವಾಗಿ ಸಂಭ್ರಮಿಸಿದ್ದಾರೆ. ಸಿಂಕ್ಲೇರ್‌ ತಮ್ಮ ಅದ್ಭುತ ಕಾರ್ಟ್‌ವೀಲ್‌ ಸಂಭ್ರಮಾಚರಣೆಯ ಮೂಲಕ ನೋಡುಗರ ಬೆರಗುಗೊಳಿಸಿದರು. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಉಸ್ಮಾನ್ ಖವಾಜಾ ವಿಕೆಟ್‌ ಪಡೆದ ಬಳಿಕ ಖುಷಿಯಲ್ಲಿ ತೇಲಾಡಿದ ಸಿಂಕ್ಲೇರ್‌ ಸಂಭ್ರಮಿಸಿದರು. ೪೮ನೇ ಓವರ್‌ನಲ್ಲಿ ೭೫ ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಖವಾಜಾ ಮೊದಲ ಸ್ಲಿಪ್‌ನಲ್ಲಿದ್ದ ಅಲಿಕ್ ಅಥಾನಾಜೆಗೆ ಕ್ಯಾಚ್‌ ನೀಡಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ ಪಡೆಯುತ್ತಿದ್ದಂತೆಯೇ ಗಾಳಿಯಲ್ಲಿ ತೇಲಾಡಿದ ಸಿಂಕ್ಲೇರ್‌ ಭರ್ಜರಿ ಸಂಭ್ರಮಿಸಿದರು.  

ಇದನ್ನೂ ಓದಿ: India vs England: ಅಶ್ವಿನ್ ಹೊಸ ರೆಕಾರ್ಡ್... ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಈ ದಾಖಲೆ ಬರೆದ ಮೊದಲ ಬೌಲರ್!

ಸಿಂಕ್ಲೇರ್‌ ಎರಡು ಕಾರ್ಟ್‌ವೀಲ್‌ ಬ್ಯಾಕ್‌ ಫ್ಲಿಪ್‌ಗಳನ್ನು ಪೂರ್ಣಗೊಳಿಸಿದರು. ಈ ಸಂಭ್ರಮಾಚರಣೆ ನೋಡಿದ ಕಾಮೆಂಟೇಟರ್‌ಗಳು ಹಾಗೂ ಪ್ರೇಕ್ಷಕರು ಮಂತ್ರಮುಗ್ಧರಾದರು. ಅಧ್ಬುತ... ಸಂಭ್ರಮಾಚರಣೆ ಎಂದು ಹೇಳುವ ಮೂಲಕ ಸಿಂಕ್ಲೇರ್‌ಗೆ ಮೆಚ್ಚುಗೆ ವ್ಯಕ್ತಪಸಿದರು. ಸಿಂಕ್ಲೇರ್‌ ಅವರ ವಿಚಿತ್ರ ಸಂಭ್ರಮಾಚರಣೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. 
ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ವಾವ್‌ ಎಂದಿದ್ದಾರೆ. 

ಇನ್ನು ವೆಸ್ಟ್ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳಿಗೆ ಆಲೌಟ್ ಆದ ಬಳಿಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಉಸ್ಮಾನ್ ಖವಾಜಾ 75 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 25 ರನ್ ಗಳಿಸಿದರು. ಇನ್ನುಳಿದಂತೆ ಅಲೆಕ್ಸ್ ಕ್ಯಾರಿ 65 ಮತ್ತು ನಾಯಕ ಪಾಟ್ ಕಮ್ಮಿನ್ಸ್ 64 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಸದ್ಯ ೩ನೇ ದಿನದಾಟದಲ್ಲಿ ವೆಸ್ಟ್‌ ಇಂಡೀಸ್‌ ತಂಡವು ೫೦ ಓವರ್‌ಗಳಲ್ಲಿ ೪ ವಿಕೆಟ್‌ ಕಳೆದುಕೊಂಡು ೧೪೮ ರನ್‌ ಗಳಿಸಿದ್ದು, ೧೭೦ ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. 

ಇದನ್ನೂ ಓದಿ: Virat Kohli: ಮತ್ತೊಮ್ಮೆ ತಂದೆಯಾಗುವ ಸೂಚನೆ ನೀಡಿದ ವಿರಾಟ್‌ ಕೊಹ್ಲಿ..? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News