ವಿರಾಟ್‌ ಕೊಹ್ಲಿ ಹೊಸ ಟ್ರಿಕ್ಸ್‌ ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನ ! ಇದೇನಿದು ಬೇಲ್ಸ್‌ ಟ್ರಿಕ್ ?

IND VS SA 1st test : ಭಾರತ ಮತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ನಲ್ಲಿ ಭಾರತವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ ಗಳಿಗೆ ಆಲ್‌ ಔಟ್‌ ಆಯ್ತು. ಬ್ಯಾಟಿಂಗ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ಎರಡನೇ ದಿನದಂತ್ಯಕ್ಕೆ 256 ರನ್‌ ಕಲೆಹಾಕಿದೆ. ತಂಡದ ಪರ ಡೀನ್ ಎಲ್ಗರ್ 140ರನ್‌ ಗಳಿಸಿ ಅಜೇಯರಾಗಿ ಉಳಿದಿದ್ಧಾರೆ. ಹಾಗು 3ನೇ ದಿನವನ್ನು ಚ್ಯಾಟಿಂಗ್‌ ಮೂಲಕ ಮುನ್ನಡೆಸಲು ಇವರು ಸಜ್ಜಾಗಿದ್ಧಾರೆ.

Written by - Zee Kannada News Desk | Last Updated : Dec 28, 2023, 06:35 PM IST
  • ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ ಗೆ ಆಲ್‌ ಔಟ್‌ ಆದ ಭಾರತ
  • ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕೆಎಲ್‌ ರಾಹುಲ್‌
  • ಎರಡನೇ ದಿನದಾಟದಲ್ಲಿ 140 ರನ್‌ ಗಳಿಸಿ ಅಜೇಯರಾಗಿ ಉಳಿದ ಡೀನ್ ಎಲ್ಗರ್
ವಿರಾಟ್‌ ಕೊಹ್ಲಿ  ಹೊಸ ಟ್ರಿಕ್ಸ್‌ ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನ ! ಇದೇನಿದು ಬೇಲ್ಸ್‌  ಟ್ರಿಕ್ ? title=

Virat kohli bails trick : ಭಾರತ ಮತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ನ ಎರಡನೇ ದಿನದಾಟ ಅಂತ್ಯಗೊಂಡಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಇನ್ನಿಂಗ್ಸ್‌ ನಲ್ಲಿ ಭಾರತವು 67 ಒವರ್‌ ಗೆ ಆಲ್‌ ಔಟ್‌ ಆಗುವ ಮೂಲಕ 245 ರನ್‌ ಗಳನ್ನು ಕೆಲಹಾಕಿತು, ಇನ್ನ ಈ ಪಂದ್ಯದಲ್ಲಿ ಕೆಎಲ್‌ ರಾಹುಲ್‌(10) ಭರ್ಜರಿ ಶತಕಗಳಿಸಿ ತಂಡವು 200 ರ ಗಡಿದಾಟಲು ನೆರವಾದರು.ಎರಡನೇ ದಿನದಂತ್ಯದಲ್ಲಿ ಆಸ್ಟ್ರೇಲಿಯಾ ತಂಡವು 5 ವಿಕೆಟ್‌ಗಳನ್ನು ಕಳೆದುಕೊಂಡು 256 ರನ್‌ಗಳಿಸಿದೆ.

ಏರಡನೇ ದಿನದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಆಟಗಾರ ಐಡೆನ್‌ ಮಾರ್ಕ್ರಂ ಅವರನ್ನು ಕೇವಲ 5 ರನ್‌ಗಳಿಗೆ ಔಟ್‌ ಮಾಡಿ ಪೆವಿಲಿಯನ್‌ ದಾರಿ ತೋರಿಸದಿರು. ಆದರೆ ಇನ್ನೊಂದು ಕಡೆ ಆರಂಭಿಕಾರಗಿ ಕಣಕಿಳಿದಿದ್ದ ಎಲ್ಗರ್‌ ಗೆ ಜೊತೆಯಾದ ಟೋನಿ ಡಿ ಜಾರ್ಜಿ ತಂಡವು ನೂರರ ಗಡಿದಾಟಲು ನೆರವಾದರು. ಇವರಿಬ್ಬರು ಭಾರತದ ಬೌಲರ್ಸ್‌ ಗೆ ಬ್ಯಾಟಿಂಗ್‌ನಲ್ಲಿ ಕಾಟ ನೀಡಿದರು. ಈ ಜೊತೆಯಾಟ ಮುರಿಯಲು ವಿರಾಟ್‌ ಒಂದು ರಣ ತಂತ್ರ ರೂಪಿಸ ಬೇಕಾಯತಿ.

ಇದನ್ನು ಒದಿ-ಸೆಂಚುರಿಯನ್’ನಲ್ಲಿ ರಾಹುಲ್ ಭರ್ಜರಿ ಸೆಂಚುರಿ: ಕ್ರಿಕೆಟ್ ಇತಿಹಾಸದಲ್ಲಿ ಈ ವಿಶ್ವದಾಖಲೆ ಬರೆದ ಏಕೈಕ ಕ್ರಿಕೆಟಿಗ

ಈ ಇಬ್ಬರು ಆಟಗಾರರ ಜೊತೆಯಾಟ ಮುರಿಯಲು ಬೌಲರ್ಸ್‌ಗಳು ಹರಸಾಹಸ ಪಡುತ್ತಿದ್ದರು. ವಿರಾಟ್‌ ಕೊಹ್ಲಿ ಬೇಲ್ಸ್‌ ಟ್ರಿಕ್ಸ್‌ ಮಾಡಿದ ನಂತರದ ಒವರ್‌ನಲ್ಲೇ ಈ ಜೊತೆಯಾಟ ಅಂತ್ಯಗೊಂಡಿದಿರುವು ಭಾರಿ ಚರ್ಚೆಯಾಗುತ್ತಿದೆ. ವಿರಾಟ್‌ ಅಚ್ಚರಿಯೆನ್ನುವಂತೆ 28ನೇ ಒವರ್‌ನ ಅಂತ್ಯದಲ್ಲಿ ವಿಕೆಟ್‌ ಬೇಲ್ಸ್‌ ಗಳನ್ನು ಅದಲು ಬದಲು ಮಾಡಿದರು. ಆದರೇ ವಿಚಿತ್ರ ಎಂಬುವಂತೆ ಮುಂದಿನ ಒವರ್‌ ನಲ್ಲಿ ಟೋನಿ ಡಿ ಜಾರ್ಜಿ ಅವರು ಬೂಮ್ರ ಒವರ್‌ನಲ್ಲಿ ಕ್ಯಾಚ್‌ ನೀಡಿ ಔಟ್‌ ಆದರು. ಅಷ್ಟೇ ಅಲ್ಲದೇ ಬೂಮ್ರ ಅವರ ಮುಂದಿನ ಒವರ್‌ ನಲ್ಲಿ ಕೀಗನ್ ಪೀಟರ್ಸನ್  ಕೂಡ ಬೋಲ್ಡ್‌ ಆಗಿ ಪೆವಿಲಿಯನ್‌ಗೆ ಮರಳಿದರು.

ದಕ್ಷಿಣ ಆಫ್ರಿಕಾ ಬ್ಯಾಟರ್ಸ್‌ ಇಬ್ಬರು ಔಟ್‌ ಆಗಲು ವಿರಾಟ್‌ ಅವರ ಬೇಲ್ಸ್‌ ಟ್ರಿಕ್‌ ಕಾರನ ಎಂದು ಎಲ್ಲಡೇ ಹೇಳಲಾಗುತ್ತಿದೆ. ಈ ರೀತಿಯ ಟ್ರಿಕ್‌ಗಳು ಒಂದು ತಂಡದ ಲಕ್‌ ಅನ್ನು ಬದಲಿಸುತ್ತವೆ. ಈ ಹಿಂದೆ ವಿರಾಟ್‌ ಅವರು ಆಟಗಾರರೊಂದಿಗೆ ವಾಗ್ವಾಧಕ್ಕೆ ಇಳಿದು ಅವರ ಮನಸನ್ನು ಕದಡುವ ಮೂಲಕ ಅವರ ವಿಕೆಟ್‌ ಪಡೆಯುವ ಟ್ರಿಕ್‌  ಬಳಕೆ ಮಾಡ್ತ ಇದ್ದರು. ಆದರೆ ಇದೇ ಮೊದಲ ಭಾರಿಗೆ ಅವರು ಬೇಲ್ಸ್‌ಗಳನ್ನು ಬದಲಿಸುವ ಟ್ರಿಕ್ಸ್‌ ಮಾಡಿದ್ದು, ಇದರ ಪರಿಣಾಮ ಟೀಂ ಇಂಡಿಯಾಗೆ 2 ವಿಕೆಟ್‌ ದೊರೆತಿವೆ.

ಇದನ್ನು ಒದಿ-ಟಿ20 ವಿಶ್ವಕಪ್ ಗೆಲ್ಲಲು ಮಾಸ್ಟರ್ ಪ್ಲಾನ್: 12 ಸಾವಿರ ರನ್ ಗಳಿಸಿದ ಈ ದಿಗ್ಗಜನನ್ನು ಕೋಚ್ ಆಗಿ ನೇಮಿಸಿದ ಸಮಿತಿ

ಕ್ರಿಕೇಟ್‌ನಲ್ಲಿ ಇತಿಹಾಸದಲ್ಲಿ ಈ ಹಿಂದೆಲೇ ಬೇಲ್ಸ್‌ ಟ್ರಿಕ್‌  ಬಳಕೆಮಾಡಲಾಗಿತ್ತು, ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಅವರು ಈ ಟ್ರಿಕ್‌ ಪ್ರಯೋಗ ಮಾಡಿ ಹಲವು ಭಾರಿ ಯಶಸ್ಸು ಪಡೆದಿದ್ಧಾರೆ. ಇದೇ ಪ್ರಯೋಗಕ್ಕೆ ವಿರಾಟ್‌ ಮುಂದಾಗಿದ್ದು ಅವರು ಕೂಡ ಈ ಇದರ ಪ್ರಯೋಜನವನ್ನು ಪಡೆದಿದ್ದಾರೆ. ಅದೇನೆಯಾದರು ಟೀಂ ಇಂಡಿಯಾಕೆ ಎರಡು ವಿಕೆಟ್‌ಗಳ ಲಾಭ ದೊರೆತಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News