ಆಸೀಸ್ ವಿರುದ್ಧ ಟಿ20 ತಂಡ ಪ್ರಕಟವಾದಂತೆ ರೆಡಿಯಾಯ್ತು ಭಾರತದ ಪ್ಲೇಯಿಂಗ್ 11: ಈ ಹೊಸ ಆಟಗಾರರಿಗೆ ಖಚಿತ ಸ್ಥಾನ

india vs australia, india playing 11 for t20 series: ಹಾರ್ದಿಕ್ ಪಾಂಡ್ಯ ವಿಶ್ವಕಪ್ ಪಂದ್ಯದ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೂ ಸಹ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಅವರನ್ನು ಹೊರತುಪಡಿಸಿ ಅನೇಕ ಹಿರಿಯ ಆಟಗಾರರಿಗೂ ವಿಶ್ರಾಂತಿ ನೀಡಲಾಗಿದೆ.

Written by - Bhavishya Shetty | Last Updated : Nov 21, 2023, 06:23 PM IST
    • ಭಾರತ ಮತ್ತು ಆಸ್ಟ್ರೇಲಿಯಾ 5 ಪಂದ್ಯಗಳ T20 ಸರಣಿ
    • ಹಲವು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ
    • ಈ ಬೆನ್ನಲ್ಲೇ ಸರಣಿಗೆ ಪ್ಲೇಯಿಂಗ್ 11 ಹೀಗಿರಲಿದೆ ಎಂಬ ಮಾಹಿತಿ
ಆಸೀಸ್ ವಿರುದ್ಧ ಟಿ20 ತಂಡ ಪ್ರಕಟವಾದಂತೆ ರೆಡಿಯಾಯ್ತು ಭಾರತದ ಪ್ಲೇಯಿಂಗ್ 11: ಈ ಹೊಸ ಆಟಗಾರರಿಗೆ ಖಚಿತ ಸ್ಥಾನ  title=
india vs australia

India vs Australia T20 Series: 5 ಪಂದ್ಯಗಳ T20 ಸರಣಿಯ ಮೊದಲ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 23 ರಂದು ನಡೆಯಲಿದೆ. ಸೋಮವಾರ ರಾತ್ರಿ ಈ ಸರಣಿಗೆ ಭಾರತ ತಂಡವನ್ನೂ ಪ್ರಕಟಿಸಲಾಗಿದ್ದು, ಹಲವು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಹಾರ್ದಿಕ್ ಪಾಂಡ್ಯ ವಿಶ್ವಕಪ್ ಪಂದ್ಯದ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೂ ಸಹ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಅವರನ್ನು ಹೊರತುಪಡಿಸಿ ಅನೇಕ ಹಿರಿಯ ಆಟಗಾರರಿಗೂ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಬದಲಿಗೆ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌’ಮನ್ ಸೂರ್ಯಕುಮಾರ್ ಯಾದವ್ ಅವರಿಗೆ ಟಿ20 ನಾಯಕತ್ವ ನೀಡಲಾಗಿದೆ.

ಇದನ್ನೂ ಓದಿ: “ಟೀಂ ಇಂಡಿಯಾ ಮಾಡಿದ ಈ ತಪ್ಪಿನಿಂದಲೇ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ”- ಶೋಯೆಬ್ ಅಖ್ತರ್ ಹೇಳಿಕೆ

ಈ ಬೆನ್ನಲ್ಲೇ ಸರಣಿಗೆ ಪ್ಲೇಯಿಂಗ್ 11 ಹೀಗಿರಲಿದೆ ಎಂಬ ಮಾಹಿತಿ ಮೂಲಗಳಿಂದ ಹೊರಬಿದ್ದಿದೆ. ನವೆಂಬರ್ 23ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಸೋಮವಾರ ನೇಮಿಸಲಾಗಿದೆ.

ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ

ಈಗ ಈ ಆಟಗಾರರ ಪೈಕಿ ಪ್ಲೇಯಿಂಗ್ 11ನ್ನು ಆಯ್ಕೆ ಮಾಡಲಾಗುತ್ತದೆ. ಮಾಹಿತಿ ಅನುಸಾರ ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ ಆಡುವ 11ರ ಬಳಗದಲ್ಲಿರಲಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಟಿ20 ಸರಣಿ

  • 1ನೇ ಟಿ20 ಪಂದ್ಯ - 23 ನವೆಂಬರ್, ಸಂಜೆ 7, ವಿಶಾಖಪಟ್ಟಣ
  • 2ನೇ ಟಿ20 ಪಂದ್ಯ - 26 ನವೆಂಬರ್, ರಾತ್ರಿ 7, ತಿರುವನಂತಪುರ
  • 3ನೇ ಟಿ20 ಪಂದ್ಯ - 28 ನವೆಂಬರ್, ರಾತ್ರಿ 7, ಗುವಾಹಟಿ
  • 4ನೇ ಟಿ20 ಪಂದ್ಯ - 1 ಡಿಸೆಂಬರ್, ರಾತ್ರಿ 7, ನಾಗ್ಪುರ
  • 5ನೇ ಟಿ20 ಪಂದ್ಯ - 3 ಡಿಸೆಂಬರ್, ರಾತ್ರಿ 7, ಹೈದರಾಬಾದ್

ಇದನ್ನೂ ಓದಿ: ರಾಹುಲ್ ದ್ರಾವಿಡ್ ಬಳಿಕ ಭಾರತದ ಹೆಡ್ ಕೋಚ್ ವಿವಿಎಸ್ ಲಕ್ಷಣ್ ಅಲ್ಲ! ಜಗತ್ತಿನ ಈ ಶ್ರೇಷ್ಠ ಮಾಜಿ ನಾಯಕ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News