ಏಷ್ಯಾಕಪ್ 2023ಕ್ಕೆ ಟೀಂ ಇಂಡಿಯಾ ಪ್ರಕಟ! ಕನ್ನಡಿಗ ಸೇರಿ ಇಬ್ಬರು ಮ್ಯಾಚ್ ವಿನ್ನರ್’ಗಳೇ ಔಟ್

Ravi Shastri: ಏಷ್ಯಾಕಪ್ 2023 ಅನ್ನು ಪಾಕಿಸ್ತಾನ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಸಲಾಗುತ್ತಿದೆ. ಇನ್ನು ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸದ್ದು, ಒಟ್ಟು 13 ಪಂದ್ಯಗಳು ಆಯೋಜನೆಗೊಳ್ಳಲಿವೆ

Written by - Bhavishya Shetty | Last Updated : Aug 16, 2023, 11:41 AM IST
    • ಏಷ್ಯಾ ಕಪ್ 2023ಗಾಗಿ ಭಾರತದ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ.
    • ದೊಡ್ಡ ಮ್ಯಾಚ್ ವಿನ್ನರ್‌’ಗಳನ್ನು ರವಿಶಾಸ್ತ್ರಿ ಕೈಬಿಟ್ಟಿರುವುದು ಅತ್ಯಂತ ಆಶ್ಚರ್ಯಕರ ಸಂಗತಿಯಾಗಿದೆ
    • ಇದುವರೆಗೆ ತನ್ನ 15 ಆವೃತ್ತಿಗಳಲ್ಲಿ ಭಾರತ ಗರಿಷ್ಠ 7 ಬಾರಿ ಪ್ರಶಸ್ತಿ ಗೆದ್ದಿದೆ
ಏಷ್ಯಾಕಪ್ 2023ಕ್ಕೆ ಟೀಂ ಇಂಡಿಯಾ ಪ್ರಕಟ! ಕನ್ನಡಿಗ ಸೇರಿ ಇಬ್ಬರು ಮ್ಯಾಚ್ ವಿನ್ನರ್’ಗಳೇ ಔಟ್ title=
Ravi Shastri selected squad for Asia Cup 2023

Asia Cup 2023: ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಏಷ್ಯಾ ಕಪ್ 2023ಗಾಗಿ ಭಾರತದ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ಅವರ ನೆಚ್ಚಿನ ಈ ತಂಡದಿಂದ ಭಾರತದ ಇಬ್ಬರು ದೊಡ್ಡ ಮ್ಯಾಚ್ ವಿನ್ನರ್‌’ಗಳನ್ನು ರವಿಶಾಸ್ತ್ರಿ ಕೈಬಿಟ್ಟಿರುವುದು ಅತ್ಯಂತ ಆಶ್ಚರ್ಯಕರ ಸಂಗತಿಯಾಗಿದೆ.

ಇದನ್ನೂ ಓದಿ:10 ಓವರ್’ಗೆ 5 ವಿಕೆಟ್ ಕಬಳಿಸಿ ವಿಶ್ವದಾಖಲೆ ಬರೆದಿದ್ದ 26 ವರ್ಷದ ಈ ಸ್ಟಾರ್ ಸ್ಪಿನ್ನರ್ ಟೆಸ್ಟ್ ಕ್ರಿಕೆಟ್’ಗೆ ನಿವೃತ್ತಿ ಘೋಷಣೆ!

ಏಷ್ಯಾಕಪ್ 2023 ಅನ್ನು ಪಾಕಿಸ್ತಾನ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಸಲಾಗುತ್ತಿದೆ. ಇನ್ನು ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸದ್ದು, ಒಟ್ಟು 13 ಪಂದ್ಯಗಳು ಆಯೋಜನೆಗೊಳ್ಳಲಿವೆ.

ರವಿಶಾಸ್ತ್ರಿ ನೆಚ್ಚಿನ ಏಷ್ಯಾಕಪ್‌ ಭಾರತ ತಂಡ ಹೀಗಿದೆ:

ಏಷ್ಯಾಕಪ್‌’ನಲ್ಲಿ ಭಾರತವಲ್ಲದೆ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ತಂಡಗಳು ಭಾಗವಹಿಸಲಿವೆ. ಇದುವರೆಗೆ ತನ್ನ 15 ಆವೃತ್ತಿಗಳಲ್ಲಿ ಭಾರತ ಗರಿಷ್ಠ 7 ಬಾರಿ ಪ್ರಶಸ್ತಿ ಗೆದ್ದಿದೆ. ಭಾರತದ ನಂತರ ಅತಿ ಹೆಚ್ಚು ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದ ದಾಖಲೆ ಶ್ರೀಲಂಕಾ ಹೆಸರಿನಲ್ಲಿ ದಾಖಲಾಗಿದೆ. ಶ್ರೀಲಂಕಾ 6 ಬಾರಿ ಪ್ರಶಸ್ತಿ ವಶಪಡಿಸಿಕೊಂಡಿದೆ. ಈ ವರ್ಷ ODI ವಿಶ್ವಕಪ್ ಆಯೋಜಿಸಲಾಗಿರುವುದರಿಂದ, ಏಷ್ಯಾ ಕಪ್ 2023 ಸಹ ODI ಸ್ವರೂಪದಲ್ಲಿ ಆಡಲಾಗುತ್ತದೆ. ಏಸ್ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ರವಿಶಾಸ್ತ್ರಿ 2023 ರ ಏಷ್ಯಾ ಕಪ್ ಗಾಗಿ ಭಾರತದ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ.

ರವಿಶಾಸ್ತ್ರಿ ಅವರು ಶುಭಮನ್ ಗಿಲ್, ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಅವರನ್ನು ಏಷ್ಯಾ ಕಪ್ 2023 ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾಗಿದ್ದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾತ್ರಕ್ಕೆ ಇಶಾನ್ ಕಿಶನ್ ಅವರನ್ನು ರವಿಶಾಸ್ತ್ರಿ ಆಯ್ಕೆ ಮಾಡಿದ್ದಾರೆ. ಟೀಂ ಇಂಡಿಯಾದಲ್ಲಿ ಆಲ್ ರೌಂಡರ್ ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಅವರಿಗೆ ರವಿಶಾಸ್ತ್ರಿ ಸ್ಥಾನ ನೀಡಿದ್ದಾರೆ. ಇನ್ನು ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಗೆ ರವಿಶಾಸ್ತ್ರಿ ಸ್ಥಾನ ನೀಡಿಲ್ಲ.

ಇದನ್ನೂ ಓದಿ:ಮೊದಲ ಟಿ20ಗೆ ಆರಂಭಿಕ ಜೋಡಿ ಇವರೇ! ನೂತನ ನಾಯಕ, ಕೋಚ್ ಬಳಿಕ ಓಪನರ್ಸ್ ಕೂಡ ಹೊಸಬರು

ಏಷ್ಯಾಕಪ್‌’ಗೆ ರವಿಶಾಸ್ತ್ರಿ ಆಯ್ಕೆ ಮಾಡಿದ ಟೀಂ ಇಂಡಿಯಾ ಇದು…

ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಸಿರಾಜ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News