MI vs KKR, IPL 2022: ಮುಂಬೈ ಇಂಡಿಯನ್ಸ್​ಗೆ ಮತ್ತೊಂದು ಹೀನಾಯ ಸೋಲು

ಐಪಿಎಲ್ ಟೂರ್ನಿಯ 56ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ಸಾಧಿಸಿದೆ.

Written by - Puttaraj K Alur | Last Updated : May 10, 2022, 12:22 AM IST
  • ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕೋಲ್ಕತ್ತಾ ನೈಟ್ ರೈಡರ್ಸ್
  • ಇಶಾನ್ ಕಿಶನ್ ಅರ್ಧಶತಕ, ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿ ವ್ಯರ್ಥ
  • ಮತ್ತೊಂದು ಹೀನಾಯ ಸೋಲಿನ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ರೋಹಿತ್ ಪಡೆ
MI vs KKR, IPL 2022: ಮುಂಬೈ ಇಂಡಿಯನ್ಸ್​ಗೆ ಮತ್ತೊಂದು ಹೀನಾಯ ಸೋಲು title=
ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ ಮುಂಬೈ

ಮುಂಬೈ: ಇಲ್ಲಿನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 56ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 52 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತ್ತಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. ಗೆಲುವಿನ ಗುರಿ ಬೆನ್ನತ್ತಿದ ರೋಹಿತ್ ಶರ್ಮಾ ಪಡೆ ಶ್ರೇಯಸ್ ಅಯ್ಯರ್ ಪಡೆಯ ಬೌಲಿಂಗ್ ದಾಳಿಗೆ ಸಿಲುಕಿ ಸೋಲೊಪ್ಪಿಕೊಂಡಿತು. 17.3 ಓವರ್ ಗಳಲ್ಲಿ ಸರ್ವಪತನ ಕಂಡ ಮುಂಬೈ ಕೇವಲ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈ ಮತ್ತೊಂದು ಹೀನಾಯ ಸೋಲು ಕಂಡಿದ್ದು, ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ.  

ಇದನ್ನೂ ಓದಿ: CSK vs DC : ಡೆಲ್ಲಿ ಕ್ಯಾಪಿಟಲ್ಸ್‌ನ ಈ ಸ್ಟಾರ್ ಆಟಗಾರ ಆಸ್ಪತ್ರೆಗೆ ದಾಖಲು!

ಬುಮ್ರಾ ಬೌಲಿಂಗ್ ವ್ಯರ್ಥ

ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್(43), ನಿತೀಶ್ ರಾಣಾ(43), ಅಜಿಂಕ್ಯ ರಹಾನೆ(25) ಮತ್ತು ರಿಕು ಸಿಂಗ್(ಅಜೇಯ 23) ರನ್ ಗಳಿಸಿದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 10ಕ್ಕೆ 5 ಶ್ರೇಷ್ಠ ಬೌಲಿಂಗ್ ಮಾಡಿ ಮಿಂಚಿದರು. ಕುಮಾರ್ ಕಾರ್ತಿಕೇಯ 2, ಡೆನಿಯಲ್ ಸ್ಯಾಮ್ ಮತ್ತು ಎಂ.ಅಶ್ವಿನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಮುಂಬೈ

166 ರನ್ ಗಳ ಗುರಿ ಬೆನ್ನತ್ತಿದ ಮುಂಬೈ ಪರ ಇಶಾನ್ ಕಿಶನ್(51) ಬಿಟ್ಟರೆ ಮತ್ಯಾವ ಆಟಗಾರನು ಹೆಚ್ಚುಹೊತ್ತು ಕ್ರೀಸ್‍ ನಲ್ಲಿ ನಿಂತು ಆಡಲಿಲ್ಲ. ಕೀರಾನ್ ಪೊಲಾರ್ಡ್ (15), ಟಿಮ್ ಡೇವಿಡ್(13) ಮತ್ತು ರಮಣದೀಪ್ ಸಿಂಗ್(12) ರನ್ ಗಳಿಸಿದರು. ಕೋಲ್ಕತ್ತಾ ಪರ ಪ್ಯಾಟ್ ಕಮಿನ್ಸ್ 3, ಆಂಡ್ರೂ ರಸೆಲ್ 2, ಟಿಮ್ ಸೌಥಿ ಮತ್ತು ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು. ಪ್ರಸಕ್ತ ಟೂರ್ನಿಯಲ್ಲಿ ಮುಂಬೈ 9ನೇ ಸೋಲು ಕಂಡರೆ, 5ನೇ ಗೆಲುವು ದಾಖಲಿಸಿದ ಕೆಕೆಆರ್ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ. ಆದರೆ, ಶ್ರೇಯಸ್ ಅಯ್ಯರ್ ಪಡೆ ಪ್ಲೇ ಆಫ್ ಪ್ರವೇಶ ಕಠಿಣವಾಗಿದೆ.  

ಇದನ್ನೂ ಓದಿMS Dhoni : ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಟ ದ್ವಿಶತಕ ಸಾಧನೆ ಮಾಡಿದ ಎಂಎಸ್ ಧೋನಿ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News