‘ವಿಶ್ವಕಪ್ ಆಡುವ ಅವಕಾಶ ಕೈತಪ್ಪಿದಂತೆ ಭಾಸವಾಗುತ್ತಿದೆ’ : ಕೆಎಲ್ ರಾಹುಲ್ ಹೀಗಂದಿದ್ದೇಕೆ?

KL Rahul Reaction: ಟೀಂ ಇಂಡಿಯಾದ ಸ್ಟಾರ್‌ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಶಸ್ತ್ರಚಿಕಿತ್ಸೆಯ ನಂತರ ಮೂರ್ನಾಲ್ಕು ವಾರಗಳ ವರಗೆ ಕಾಲಿನ ಮೇಲೆ ನಿಲ್ಲಲು ಸಹ ಸಾಧ್ಯವಾಗಲಿಲ್ಲ.

Written by - Chetana Devarmani | Last Updated : Dec 31, 2023, 07:37 AM IST
  • ಟೀಂ ಇಂಡಿಯಾದ ಸ್ಟಾರ್‌ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್
  • ‘ವಿಶ್ವಕಪ್ ಆಡುವ ಅವಕಾಶ ಕೈತಪ್ಪಿದಂತೆ ಭಾಸವಾಗುತ್ತಿದೆ’
  • ಟೀಮ್‌ ಇಂಡಿಯಾಗೆ ಟ್ರಬಲ್ ಶೂಟರ್ ಕೆಎಲ್ ರಾಹುಲ್
‘ವಿಶ್ವಕಪ್ ಆಡುವ ಅವಕಾಶ ಕೈತಪ್ಪಿದಂತೆ ಭಾಸವಾಗುತ್ತಿದೆ’ : ಕೆಎಲ್ ರಾಹುಲ್ ಹೀಗಂದಿದ್ದೇಕೆ?  title=
KL Rahul

KL Rahul Reaction: ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಕೆಎಲ್ ರಾಹುಲ್ ಶಸ್ತ್ರಚಿಕಿತ್ಸೆಯ ನಂತರ ಮೂರ್ನಾಲ್ಕು ವಾರಗಳ ಕಾಲ ಕಾಲಿನ ಮೇಲೆ ನಿಲ್ಲಲು ಸಹ ಸಾಧ್ಯವಾಗಲಿಲ್ಲ. ಅಂತಹ ಸಮಯದಲ್ಲಿ ಈ ವರ್ಷ 2023 ರ ವಿಶ್ವಕಪ್ ಆಡುವ ಬಗ್ಗೆ ಯೋಚಿಸುವುದು ಕೆಎಲ್ ರಾಹುಲ್‌ಗೆ ಕಷ್ಟಕರವಾಗಿತ್ತು. ಆದರೆ ಅವರು ಪಂದ್ಯಾವಳಿಯಲ್ಲಿ 452 ರನ್ ಗಳಿಸುವ ಮೂಲಕ ಅದ್ಭುತ ಪುನರಾಗಮನವನ್ನು ಮಾಡಿದರು. ಟೀಮ್‌ ಇಂಡಿಯಾಗೆ ಟ್ರಬಲ್ ಶೂಟರ್ ಆದರು. 

ಈ ವರ್ಷ ಭಾರತದಲ್ಲಿ ನಡೆದ 2023 ರ ವಿಶ್ವಕಪ್‌ನಲ್ಲಿ ಶಸ್ತ್ರಚಿಕಿತ್ಸೆಯ ನಂತರ ನೀಡಿದ ಪ್ರದರ್ಶನದ ಕುರಿತು ಕೆಎಲ್‌ ರಾಹುಲ್ ಮಾತನಾಡಿದ್ದಾರೆ. ಮರಳಿ ತಂಡಕ್ಕೆ ಬರಲು ಒತ್ತಡವಿತ್ತು. ಆದರೆ ನಾನು ಆ ಸಮಯದಲ್ಲಿ ನನ್ನ ಜೀವನದ ಅತ್ಯಂತ ಕೆಟ್ಟ ಹಂತವನ್ನು ಎದುರಿಸುತ್ತಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : IPL 2024 : ಸುರೇಶ್‌ ರೈನಾ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಸೇರ್ಪಡೆ.! 

ಶಸ್ತ್ರಚಿಕಿತ್ಸೆಯ ನಂತರ ಮೊದಲ ಮೂರರಿಂದ ನಾಲ್ಕು ವಾರಗಳವರೆಗೆ ನಾನು ನಡೆಯಲು ಸಹ ಸಾಧ್ಯವಾಗಲಿಲ್ಲ. ನಾನು ವಾಕರ್ ಸಹಾಯದಿಂದ ನಡೆಯಲು ಪ್ರಾರಂಭಿಸಿದೆ. ನನಗೆ ವಿಶ್ವಕಪ್ ಆಡಲು ಸಾಧ್ಯವಿಲ್ಲ ಎಂದೇ ನಾನು ಭಾವಿಸಿದೆ. ಮೇ ತಿಂಗಳಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಐದು ತಿಂಗಳವರೆಗೆ ನಾನು ರೆಸ್ಟ್‌ ಮಾಡಬೇಕು ಎಂದು ಸರ್ಜನ್ ಹೇಳಿದರು. ವಿಶ್ವಕಪ್ ಆಡಲು ನೇರವಾಗಿ ಹೋಗಲು ಸಾಧ್ಯವಿರಲಿಲ್ಲ. ಕೆಲವು ಪಂದ್ಯಗಳಲ್ಲಿ ಅಭ್ಯಾಸ ಮಾಡುವುದು ಅಗತ್ಯವಾಗಿತ್ತು. ಆದರೆ ಅದರ ಬಗ್ಗೆ ಯೋಚಿಸಿ ಒತ್ತಡಕ್ಕೆ ಒಳಗಾಗಬಾರದು ಎಂದು ನಾನು ಅಂದುಕೊಂಡೆ. ಏನಾಗುವುದೋ ಕಾದು ನೋಡೋಣ ಅಂತ ಸಮಾಧಾನ ಮಾಡಿಕೊಂಡೆ ಎಂದು ಕೆಎಲ್‌ ರಾಹುಲ್‌ ಹೇಳಿದ್ದಾರೆ. 

ವಿಶ್ವಕಪ್‌ ಸೋಲಿನ ನಂತರ ಡ್ರೆಸ್ಸಿಂಗ್ ರೂಮಿನಲ್ಲಿದ್ದವರೆಲ್ಲ ಭಾವುಕರಾದರು. ನಾನು ಅದನ್ನು ಇನ್ನೂ ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ಎಲ್ಲರೂ ಈ ರೀತಿ ಅಳುವುದು ಮತ್ತು ನಿರಾಶೆಗೊಳ್ಳುವುದನ್ನು ನಾನು ಎಂದೂ ನೋಡಿಲ್ಲ. ಇದು ಒಳ್ಳೆಯ ನೆನಪಲ್ಲದಿದ್ದರೂ ನಮಗೆ ಪಾಠವಾಗಿತ್ತು ಎಂದರು. 3

ಇದನ್ನೂ ಓದಿ : ಮೊಹಮ್ಮದ್ ಶಮಿ ಮತ್ತೆ ತಂಡದಿಂದ ಹೊರಗೆ! ಈ ಹೊಸ ಬೌಲರ್‌ಗೆ ಸಿಗಲಿದೆಯಾ ಅವಕಾಶ? 

ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅವರು 97 ರನ್‌ ಗಳಿಸಿದರು. ನೆದರ್ಲೆಂಡ್ಸ್ ವಿರುದ್ಧ ಅವರು ಕೇವಲ 62 ಎಸೆತಗಳಲ್ಲಿ ಶತಕ ಗಳಿಸಿದರು. ಇಡೀ ಪಂದ್ಯಾವಳಿಯಲ್ಲಿ 11 ಪಂದ್ಯಗಳಲ್ಲಿ 452 ರನ್ ಗಳಿಸಿದ್ದಲ್ಲದೆ, 15 ಕ್ಯಾಚ್‌ಗಳನ್ನು ಪಡೆದರು. ಭಾರತ ತಂಡವು ಸತತ ಹತ್ತು ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್ ಫೈನಲ್ ತಲುಪಿತು. ಆದರೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News