ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲು ಈ ಆಟಗಾರನ ಶತಪ್ರಯತ್ನ! ಕಡೆಗೂ ಸಿಗುತ್ತಾ ಚ್ಯಾನ್ಸ್?

Asia Cup 2023: ಐಪಿಎಲ್‌ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಅವರು ಋತುವಿನ ಮಧ್ಯದಲ್ಲಿ ಗಾಯಗೊಂಡಿದ್ದರು. ಈ ಗಾಯದ ನಂತರ ಅವರು ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ನಿಂದ ಹಿಂದೆ ಸರಿದಿದ್ದರು. ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

Written by - Bhavishya Shetty | Last Updated : Jun 17, 2023, 11:36 AM IST
    • ಈ ವರ್ಷ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ.
    • ಆ ಸಂದರ್ಭದಲ್ಲಿ ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
    • ಈ ಆಟಗಾರ ಏಷ್ಯಾಕಪ್‌ನಲ್ಲಿ ಆಡುವ ಅವಕಾಶ ಪಡೆಯಬಹುದು.
ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲು ಈ ಆಟಗಾರನ ಶತಪ್ರಯತ್ನ! ಕಡೆಗೂ ಸಿಗುತ್ತಾ ಚ್ಯಾನ್ಸ್? title=
kl rahul

Asia Cup 2023: ಮುಂಬರುವ ಏಷ್ಯಾಕಪ್ 2023 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಏಷ್ಯಾಕಪ್ 2023 ಆಗಸ್ಟ್ 31 ರಿಂದ ಆರಂಭವಾಗಲಿದೆ. ಈ ವರ್ಷ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಹೈಬ್ರಿಡ್ ಮಾದರಿಯಲ್ಲಿ ಈ ಟೂರ್ನಿ ನಡೆಯಲಿದೆ. ಆ ಸಂದರ್ಭದಲ್ಲಿ ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಈ ಟೂರ್ನಿಗೂ ಮುನ್ನ ಟೀಂ ಇಂಡಿಯಾದ ಆಟಗಾರನೊಬ್ಬ ಮೈದಾನಕ್ಕೆ ಮರಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಆಟಗಾರ ಏಷ್ಯಾಕಪ್‌ನಲ್ಲಿ ಆಡುವ ಅವಕಾಶ ಪಡೆಯಬಹುದು.

ಇದನ್ನೂ ಓದಿ: 37 ವರ್ಷದ ಈ ಆಟಗಾರನಿಗೆ ಏಷ್ಯಾಕಪ್ ಕೊನೆ ಪಂದ್ಯ: ಟೆಸ್ಟ್’ನಲ್ಲಿ 7 ಶತಕ ಬಾರಿಸಿದ ಡ್ಯಾಶಿಂಗ್ ಓಪನರ್ ನಿವೃತ್ತಿ ಪಕ್ಕಾ!

ಐಪಿಎಲ್‌ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಅವರು ಋತುವಿನ ಮಧ್ಯದಲ್ಲಿ ಗಾಯಗೊಂಡಿದ್ದರು. ಈ ಗಾಯದ ನಂತರ ಅವರು ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ನಿಂದ ಹಿಂದೆ ಸರಿದಿದ್ದರು. ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಕೆಎಲ್ ರಾಹುಲ್ ಪ್ರಸ್ತುತ ಪುನರ್ವಸತಿಗಾಗಿ NCA (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಯಲ್ಲಿದ್ದಾರೆ. ಕೆಎಲ್ ರಾಹುಲ್ ಮೈದಾನಕ್ಕೆ ಮರಳಲು ಕಸರತ್ತು ನಡೆಸುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಫಿಸಿಯೋಥೆರಪಿ ಮಾಡಿಸಿಕೊಂಡಿರುವುದನ್ನು ಕಾಣಬಹುದು.

 

ಕೆಎಲ್ ರಾಹುಲ್ 2023ರ ಮಾರ್ಚ್‌ ನಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯ ಆಡಿದ್ದರು. ಅವರು ಆಸ್ಟ್ರೇಲಿಯಾ ವಿರುದ್ಧ ODI ಪಂದ್ಯವನ್ನು ಆಡಿದ್ದರು. ಅದೇ ವೇಳೆ ಏಕದಿನ ಮಾದರಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ ವಿಕೆಟ್ ಕೀಪರ್ ಜವಾಬ್ದಾರಿಯನ್ನೂ ನಿಭಾಯಿಸುತ್ತಿರುವ ರಾಹುಲ್, ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಏಕದಿನ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಕೆಎಲ್ ರಾಹುಲ್ ಅವರು ಏಷ್ಯಾಕಪ್‌ ನಲ್ಲಿ ಟೀಂ ಇಂಡಿಯಾಗೆ ದೊಡ್ಡ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಬಹುದು.

ಇದನ್ನೂ ಓದಿ: "ಐಪಿಎಲ್ ನಿಂದ ಅಂತರಾಷ್ಟ್ರೀಯ ಪಂದ್ಯಗಳಿಗೆ ತೊಂದರೆಯಿಲ್ಲ!."

ಕೆಎಲ್ ರಾಹುಲ್ ಟೀಂ ಇಂಡಿಯಾ ಪರ 54 ಏಕದಿನ ಪಂದ್ಯಗಳಲ್ಲಿ 5 ಶತಕ ಸೇರಿದಂತೆ 1986 ರನ್ ಗಳಿಸಿದ್ದಾರೆ. ಅವರು 47 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಕೆಎಲ್ ರಾಹುಲ್ 33.44ರ ಸರಾಸರಿಯಲ್ಲಿ 2642 ರನ್ ಗಳಿಸಿದ್ದಾರೆ. ಈ ವೇಳೆ ಕೆಎಲ್ ರಾಹುಲ್ ಬ್ಯಾಟ್‌ನಿಂದ 13 ಅರ್ಧ ಶತಕ ಹಾಗೂ 7 ಶತಕಗಳು ಸಿಡಿದಿವೆ. ಟಿ20ಯಲ್ಲಿ ರಾಹುಲ್ ಅಂಕಿ-ಅಂಶಗಳೂ ಆಕರ್ಷಕವಾಗಿವೆ. 72 ಟಿ20 ಪಂದ್ಯಗಳನ್ನು ಆಡಿರುವ ಅವರು 2265 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News