IPL 2024: ಈ ಪೋಸ್ಟರ್ Rohit Sharma ಕಣ್ಣಿಗೆ ಬಿದ್ದಿದ್ದರೆ, ಏನಾಗುತಿತ್ತೋ ಆ ದೇವರಿಗೆ ಗೊತ್ತು!

Indian Premier League 2024: ಇಂಡಿಯನ್ ಪ್ರೀಮಿಯರ್ ಲೀಗ್ ನ ನಿನ್ನೆ ಜೈಪುರ್ ನ ಸವಾಯಿ ಮಾನಸಿಂಗ್ ಮೈದಾನದಲ್ಲಿ MI ವಿರುದ್ಧ RR ಪಂದ್ಯ ನಡೆದಿದೆ.   

Written by - Nitin Tabib | Last Updated : Apr 23, 2024, 04:13 PM IST
  • ಈ ಪೋಸ್ಟರ್ ನಲ್ಲಿ ಸಂಜು ಸ್ಯಾಮ್ ಸನ್ ಹಾಗೂ ರೋಹಿತ್ ಶರ್ಮಾ ಭಾವಚಿತ್ರವಿತ್ತು.
  • ಭಾವಚಿತ್ರಗಳ ಜೊತೆಗೆ "Dal Bati vs Vada Pav" ಎಂದು ಬರೆಯಲಾಗಿತ್ತು ಮತ್ತು
  • ವಾಸ್ತವದಲ್ಲಿ ರೋಹಿತ್ ಶರ್ಮಾ ಅವರನ್ನು ವಡಾ ಪಾವ್ ಹೆಸರಿನಿಂದ ಟ್ರೋಲ್ ಮಾಡಲಾಗುತ್ತದೆ ಮತ್ತು ಮೀಮ್ಸ್ ಗಳನ್ನು ಕೂಡ ತಯಾರಿಸಲಾಗುತ್ತದೆ.
IPL 2024: ಈ ಪೋಸ್ಟರ್ Rohit Sharma ಕಣ್ಣಿಗೆ ಬಿದ್ದಿದ್ದರೆ, ಏನಾಗುತಿತ್ತೋ ಆ ದೇವರಿಗೆ ಗೊತ್ತು! title=

IPL 2024 MI vs RR: ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೂ ಕೂಡ ಕಾಲಕಾಲಕ್ಕೆ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತದೆ. ಇದಕ್ಕೆ ಕಾರಣ ಎಂದರೆ ಅವರ ಫಿಟ್ನೆಸ್ ಹಾಗೂ ತೂಕ. ಅದನ್ನು ನೋಡಿ ಅಭಿಮಾನಿಗಳು ಅವರಿಗೆ ಅಭಿಮಾನಿಗಳು ತರಹೇವಾರಿ ಹೆಸರುಗಳನ್ನಿಟ್ಟು ಕರೆಯುತ್ತಾರೆ. ಈ ಬಾರಿ RR ತಂಡದ ವಿರುದ್ಧ MI ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಓರ್ವ ಮಹಿಳಾ ಅಭಿಮಾನಿ ಹದ್ದು ಮೀರಿ ಒಂದು ವಿಶಿಷ್ಟ ಪೋಸ್ಟರ್ ಹಿಂಡಿದುಕೊಂಡು ಸ್ಟೇಡಿಯಂಗೆ ಆಮಿಸಿದ್ದರು. 

RR ತಂಡದ ವಿರುದ್ಧ ಫ್ಲಾಪ್ ಆಗಿದ್ದಾರೆ ರೋಹಿತ್ 
ಹೌದು, ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಈ ಬಾರಿ ರೋಹಿತ್ ಶರ್ಮಾ ನೀರಸ ಪ್ರದರ್ಶನ ತೋರಿದ್ದಾರೆ. ಈಶಾನ್ ಜೊತೆಗೆ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೈದಾನಕ್ಕಿಳಿದ ರೋಹಿತ್ ಶರ್ಮಾ ಕೇವಲ 6 ರನ್ ಗಳಿಸಿ ಪೆವಳಿಯಂಗೆ ಮರಳಿದ್ದಾರೆ. 

ಇದನ್ನೂ ಓದಿ-IPL 2024 KKR vs RCB: "ಎದೆತಟ್ಟಿ ಹೇಳುವೆ Virat Kohli ವಿಕೆಟ್ ಗೆ ಅಂಪೈರ್ ತಪ್ಪು ನಿರ್ಣಯವೇ ಕಾರಣ"

ರೋಹಿತ್ ಈ ಪೋಸ್ಟರ್ ನೋಡಿದ್ದರೆ ಕೆಂಡಾಮಂಡಲವಾಗುತ್ತಿದ್ದರು
ನಿನ್ನೆ ಜೈಪುರ್ ನ ಸವಾಯಿ ಮಾನಸಿಂಗ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಪಂದ್ಯ ನಡೆದಿದೆ. ಈ ಸಂದರ್ಭದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಪೋಸ್ಟರ್ ವೊಂದನ್ನು ತೆಗೆದುಕೊಂಡು ಸ್ಟೇಡಿಯಂಗೆ ಎಂಟ್ರಿ ನೀಡಿದ್ದಾರೆ. ಈ ಪೋಸ್ಟರ್ ನಲ್ಲಿ ಸಂಜು ಸ್ಯಾಮ್ ಸನ್ ಹಾಗೂ ರೋಹಿತ್ ಶರ್ಮಾ ಭಾವಚಿತ್ರವಿತ್ತು. ಭಾವಚಿತ್ರಗಳ ಜೊತೆಗೆ "Dal Bati vs Vada Pav" ಎಂದು ಬರೆಯಲಾಗಿತ್ತು ಮತ್ತು ಎಲ್ಲರೂ ಆ ಪೋಸ್ಟರ್ ಅನ್ನೆ ನೋಡುತ್ತಿದ್ದರು. ವಾಸ್ತವದಲ್ಲಿ ರೋಹಿತ್ ಶರ್ಮಾ ಅವರನ್ನು ವಡಾ ಪಾವ್ ಹೆಸರಿನಿಂದ ಟ್ರೋಲ್ ಮಾಡಲಾಗುತ್ತದೆ ಮತ್ತು ಮೀಮ್ಸ್ ಗಳನ್ನು ಕೂಡ ತಯಾರಿಸಲಾಗುತ್ತದೆ. 

ಇದನ್ನೂ ಓದಿ-IPL 2024 RR vs MI: Yujvendra Chahal ವಿಶಿಷ್ಟ ದ್ವೀಶತಕ, ಇದುವರೆಗೂ ಈ ಸಾಧನೆ ಯಾರೂ ಮಾಡಿಲ್ಲ!

ರೋಹಿತ್ ಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ರೈನಾ
ಇತ್ತೀಚೆಗೆ ಸುರೇಶ್ ರೈನಾ ಸಂದರ್ಶನವೊಂದರಲ್ಲಿ ರೋಹಿತ್ ಶರ್ಮಾ ಅವರನ್ನು ಎಂಐ ನಾಯಕತ್ವದಿಂದ ತೆಗೆದು ಹಾಕಿರುವ ಬಗ್ಗೆ ಮಾತನಾಡಿದ್ದರು. ರೋಹಿತ್ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದು ನನಗೆ ಆಶ್ಚರ್ಯ ತಂದಿದೆ , ಈ ನಿರ್ಧಾರ ನನಗೆ ಅರ್ಥವಾಗಲಿಲ್ಲ. ಎಂಐ ತಂಡ ಹಾರ್ದಿಕ್ ನಾಯಕತ್ವದಲ್ಲಿ ಸೋಲು ಕಂಡಿದ್ದರೂ, ತಂಡದ ಪ್ರದರ್ಶನವನ್ನು ನೋಡಿದರೆ, ಈ ತಂಡವು ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಗಳಿಸುವುದು ಕಷ್ಟವೇ ಎನಿಸುತ್ತಿದೆ ಎಂದಿದ್ದರು. ಈ ತಂಡವು 2020 ರಲ್ಲಿ ಕೊನೆಯ ಬಾರಿಗೆ ಪ್ರಶಸ್ತಿಯನ್ನು ಗೆದ್ದಿದ್ದರೂ, ಅಂದಿನಿಂದ ತಂಡವು ಪ್ರಶಸ್ತಿಯನ್ನು ಗೆಲ್ಲಲು ಹೆಣಗಾಡುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News