ಮಾಲ್‌ನಲ್ಲಿ ‘ಸೆಕ್ಯೂರಿಟಿ ಗಾರ್ಡ್’ ಆಗಿದ್ದವ ಗಬ್ಬಾದಲ್ಲಿ ವಿಂಡೀಸ್‌ಗೆ ಟೆಸ್ಟ್ ಪಂದ್ಯ ಗೆಲ್ಲಿಸಿದ!

Inspirational Story Of Shamar Joseph: ಶಮರ್ ಜೋಸೆಫ್ ಕಳೆದ ಬಾರಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಬೆಳಕಿಗೆ ಬಂದಿದ್ದ ಪ್ರತಿಭೆ. ಗಯಾನದ ಮಾಲ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಹುಡುಗ ಗಯಾನ ಅಮೆಜಾನ್ ವಾರಿಯರ್ಸ್ ತಂಡಕ್ಕೆ ನೆಟ್ ಬೌಲರ್ ಆಗಿ ಬಂದಿದ್ದ. ಕಾಲಲ್ಲಿ spike shoe ಸಹ ಇರ್ಲಿಲ್ಲ. 

Written by - Puttaraj K Alur | Last Updated : Jan 29, 2024, 04:00 PM IST
  • ಗಬ್ಬಾದಲ್ಲಿ ಆಸ್ಟ್ರೇಲಿಯಾದ 7 ವಿಕೆಟ್‌ ಕಬಳಿಸಿ ಮಿಂಚಿದ ಶಮರ್ ಜೋಸೆಫ್
  • ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಯುವಕನ ಯಶಸ್ಸಿನ ಕಥೆ
  • ಶಮರ್ ಜೋಸೆಫ್‌ನೊಳಗೆ ಅಡಗಿದ್ದ ಕಿಚ್ಚನ್ನು ಗುರುತಿಸಿದ್ದು ಯಾರು ಗೊತ್ತಾ?
ಮಾಲ್‌ನಲ್ಲಿ ‘ಸೆಕ್ಯೂರಿಟಿ ಗಾರ್ಡ್’ ಆಗಿದ್ದವ ಗಬ್ಬಾದಲ್ಲಿ ವಿಂಡೀಸ್‌ಗೆ ಟೆಸ್ಟ್ ಪಂದ್ಯ ಗೆಲ್ಲಿಸಿದ! title=
ಶಮರ್ ಜೋಸೆಫ್ ಯಶಸ್ಸಿನ ರೋಚಕ ಕಥೆ

ನವದೆಹಲಿ: ಶಮರ್ ಜೋಸೆಫ್ ಎಂಬ ಹುಡುಗನ ನಂಬಲು ಅಸಾಧ್ಯವಾದ ಕಥೆಯಿದು. ಕ್ರಿಕೆಟ್ ಜಗತ್ತಿನ ಡೆಡ್ಲಿ ಬೌನ್ಸಿ ಟ್ರ್ಯಾಕ್ ಪರ್ತ್‌ನ ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದು ಸುಲಭದ ಮಾತಲ್ಲ. ಕಳೆದ ಬಾರಿ ಭಾರತ ಅಲ್ಲಿ ಗೆದ್ದಿತ್ತು. ಈಗ ವೆಸ್ಟ್ ಇಂಡೀಸ್ ಐತಿಹಾಸಿಕ ಗೆಲುವು ದಾಖಲಿಸಿ. ಈ ಸಾಧನೆಯ ಹಿಂದಿರುವ ಹೆಸರೇ ಶಮರ್ ಜೋಸೆಫ್. ಹೌದು, ಗಬ್ಬಾ ಟೆಸ್ಟ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಾಡ್ನಿ ಹಾಗ್, ವೆಸ್ಟ್ ಇಂಡಿಸ್ ತಂಡವನ್ನು pathetic and hopeless ಎಂದು ಕಟುವಾಗಿ ಟೀಕಿಸಿದ್ದರು. ಇದರಿಂದ ಕೆರಿಬಿಯನ್ ಹುಡುಗರು ಕೆರಳಿ ಬಿಟ್ಟಿದ್ದರು. ಎಷ್ಟರ ಮಟ್ಟಿಗೆ ಅಂದ್ರೆ ಗಬ್ಬಾದಲ್ಲಿ ಕಾಂಗರೂಗಳ ಸೊಕ್ಕಡಗಿಸುವಷ್ಟರ ಮಟ್ಟಿಗೆ.

ಗಬ್ಬಾ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸುವ ಮೂಲಕ ವೆಸ್ಟ್ ಇಂಡೀಸ್‌ಗೆ 8 ರನ್‌ಗಳ ರೋಚಕ ಗೆಲುವು ತಂದುಕೊಟ್ಟ ಶಮರ್ ಜೋಸೆಫ್ ಎಂಬ ಹುಡುಗನ ಕಥೆ ‘ಗಬ್ಬಾ’ ಗೆಲುವಿಗಿಂತಲೂ ರೋಚಕ. ಈತ ಕಳೆದ ಬಾರಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಬೆಳಕಿಗೆ ಬಂದಿದ್ದ ಪ್ರತಿಭೆ. ಗಯಾನದ ಮಾಲ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಹುಡುಗ ಗಯಾನ ಅಮೆಜಾನ್ ವಾರಿಯರ್ಸ್ ತಂಡಕ್ಕೆ ನೆಟ್ ಬೌಲರ್ ಆಗಿ ಬಂದಿದ್ದ. ಕಾಲಲ್ಲಿ spike shoe ಸಹ ಇರ್ಲಿಲ್ಲ. 

ಇದನ್ನೂ ಓದಿ: ಟಾಮ್ ಹಾರ್ಟ್ಲಿ ಕೈಚಳಕಕ್ಕೆ ಟೀಮ್ ಇಂಡಿಯಾ ಕಂಗಾಲು, ಇಂಗ್ಲೆಂಡ್ ಗೆ 28 ರನ್ ಗಳ ರೋಚಕ ಜಯ 

Normal shoesನಲ್ಲಿ ಓಡಿ ಬಂದ ಶಮರ್ ಜೋಸೆಫ್, ಪಾಕಿಸ್ತಾನದ ಅಜಮ್ ಖಾನ್‌ಗೆ ಸಖತ್‌ ಆಗಿ ಚೆಂಡೆಸೆಯುತ್ತಾನೆ. ಈತನ ಬೌಲಿಂಗ್‌ ಪ್ರತಿಭೆ ಕಂಡ ಒಬ್ಬ ವ್ಯಕ್ತಿ ಬೆರಗಾಗಿದ್ದರು. ಅವರ ಹೆಸರೇ ಗಯಾನ ಅಮೆಜಾನ್ ವಾರಿಯರ್ಸ್ ತಂಡದ talent scout ಪ್ರಸನ್ನ ರಾಮನ್. ಶಮರ್ ಜೋಸೆಫ್‌ನನ್ನು ಹತ್ತಿರಕ್ಕೆ ಕರೆದ ಪ್ರಸನ್ನ ‘ಯಾರಪ್ಪ ನೀನು’ ಎಂದು ಪ್ರಶ್ನಿಸ್ತಾರೆ. ‘ನಾನೊಬ್ಬ ಸೆಕ್ಯೂರಿಟಿ ಗಾರ್ಡ್ ಸರ್. ಗಯಾನ ತಂಡದ ನೆಟ್ಸ್‌ಗೆ ಬೌಲಿಂಗ್ ಮಾಡಲು ಬಂದಿದ್ದೇನೆ. ದುಡ್ಡು ಕೊಡುತ್ತೇವೆ ಅಂದಿದ್ದಾರೆ, ಹೀಗಾಗಿ ಬಂದೆ’ ಅಂತಾ ಶಮರ್ ಜೋಸೆಫ್ ಹೇಳಿದ್ದ.

ಪ್ರಸನ್ನ ರಾಮನ್‌ಗೆ ಒಂದು ಕ್ಷಣ ಅಚ್ಚರಿಯಾಗಿತ್ತು. ‘ಏನು, ಸೆಕ್ಯೂರಿಟಿ ಗಾರ್ಡ್ ಹಾ..?’ ಅಂತಾ ಆಶ್ಚರ್ಯಚಕಿತರಾಗಿ ಹುಡುಗನನ್ನು ಪ್ರಶ್ನಿಸ್ತಾರೆ. ‘ಹೌದು ಸರ್, ಇಲ್ಲಿ ಬೌಲಿಂಗ್ ಮುಗಿಸಿ ಬೇಗ ಕೆಲಸಕ್ಕೆ ವಾಪಸ್ ಹೋಗ್ಬೇಕು. ಸಮಯಕ್ಕೆ ಸರಿಯಾಗಿ ಹೋಗದಿದ್ದರೆ, ಮಾಲ್‌ನವರು ಸಂಬಳ ಕಟ್ ಮಾಡ್ತಾರೆ’ ಅಂತಾ ಶಮರ್ ಹೇಳಿದ್ದ. ಎರಡೇ ಎಸೆತಗಳಲ್ಲಿ ಶಮರ್ ಜೋಸೆಪ್‌ನಲ್ಲಿದ್ದ ಅದ್ಭುತ ಪ್ರತಿಭೆಯನ್ನು ಗುರುತಿಸಿದ್ದ ಪ್ರಸನ್ನ ರಾಮನ್, ʼನೀನು ಸದ್ಯದಲ್ಲಿ CPL ಮತ್ತು ವೆಸ್ಟ್ ಇಂಡೀಸ್ ಪರ ಟೆಸ್ಟ್ ಕ್ರಿಕೆಟ್ ಆಡುತ್ತೀಯಾʼ ಅಂತಾ ಹೇಳುತ್ತಾರೆ. ಅಲ್ಲಿಂದ ಮುಂದೇನಾಯ್ತು ಅನ್ನೋದು ಇದೀಗ ಇತಿಹಾಸ!

ಇದನ್ನೂ ಓದಿ: Cricket Experts on Shreyas Iyer: ಮುಗಿದೇ ಹೋಯಿತಾ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್ ಬದುಕು? ಅಯ್ಯರ್ ಬದಲಿಗೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲಿದ್ದಾರೆ ಈ ಆಟಗಾರ !

ಶಮರ್ ಜೋಸೆಫ್ ಎಂಬ ಹುಡುಗನೊಳಗೆ ಅಡಗಿದ್ದ ಕಿಚ್ಚನ್ನು ಗುರುತಿಸಿದ ಪ್ರಸನ್ನ ರಾಮನ್, ಅಲ್ಲಿಂದ ನೇರವಾಗಿ ಗಯಾನ ಅಮೆಜಾನ್ ವಾರಿಯರ್ಸ್ ತಂಡದ ನಾಯಕ, ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಬಳಿ ಬಂದು, ʼಒಬ್ಬ ಹುಡುಗ ಇದ್ದಾನೆ, ಭರ್ಜರಿ ಬೌಲಿಂಗ್ ಮಾಡ್ತಾನೆ. ಆತನನ್ನು ಮುಂದಿನ ಪಂದ್ಯದಲ್ಲಿ ನೇರವಾಗಿ ಪ್ಲೇಯಿಂಗ್ XIನಲ್ಲಿ ಆಡಿಸಲು ಸಾಧ್ಯವೇ..? ಅಂತಾ ಪ್ರಶ್ನಿಸಿದ್ದರು. ಪ್ರಸನ್ನ ರಾಮನ್ ಹಾಗೆಲ್ಲಾ ಯಾರ ಬಗ್ಗೆಯೂ ಸುಖಾಸುಮ್ಮನೆ ಬಿಲ್ಡಪ್ ಕೊಡುವವರಲ್ಲವೆಂಬುದು ಇಮ್ರಾನ್ ತಾಹಿರ್‌ಗೆ ತಿಳಿದಿತ್ತು. ದಕ್ಷಿಣ ಆಫ್ರಿಕಾ ತಂಡದ performance analyser ಆಗಿದ್ದಾಗ ಪ್ರಸನ್ನರ ಕಾರ್ಯವೈಖರಿ, ವಿಶ್ವಾಸಾರ್ಹತೆಯನ್ನು ಪ್ರತ್ಯಕ್ಷವಾಗಿ ಕಂಡಿದ್ದರು. ಇಂತಹ ಪ್ರಸನ್ನ ಹೇಳುತ್ತಿದ್ದಾರೆ ಅಂದ್ರೆ ಆ ಹುಡುಗನಲ್ಲಿ ಏನೋ ಇದೆ ಅಂತಾ ಅರಿತ ತಾಹಿರ್, ಮರುಮಾತಿಲ್ಲದೆ CPLನಲ್ಲಿ ಗಯಾನ ಅಮೆಜಾನ್ ವಾರಿಯರ್ಸ್ ತಂಡದ ಪರ ಆಡುವ ಅವಕಾಶ ಕೊಡ್ತಾರೆ. ಅಲ್ಲಿಂದ ಶುರುವಾದ ಪ್ರಯಾಣ ಈಗ ಆಸ್ಟ್ರೇಲಿಯಾದ ಅಡಿಲೇಡ್ ಮೈದಾನದಲ್ಲಿ test debutವರೆಗೆ ಬಂದು ನಿಂತಿದೆ.

ಈಗ ಗಬ್ಬಾ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ೭ ವಿಕೆಟ್ ಕಬಳಿಸಿದ ಶಮರ್ ಜೋಸೆಫ್ ವೆಸ್ಟ್ ಇಂಡೀಸ್ ತಂಡಕ್ಕೆ famous victory ತಂದು ಕೊಟ್ಟಿದ್ದಾನೆ. ಪ್ರಸನ್ನ ರಾಮನ್ ಅವರನ್ನು ನಾನು ಕಳೆದ 16 ವರ್ಷಗಳಿಂದ ಬಲ್ಲೆ. 2006ರಲ್ಲಿ ಪರಿಚಯವಾದವರು ಈಗಲೂ ಸಂಪರ್ಕದಲ್ಲಿದ್ದಾರೆ. ಕರ್ನಾಟಕ ರಣಜಿ ತಂಡದ video anayst ಆಗಿದ್ದವರನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ಕರೆದೊಯ್ದದ್ದು Royal Challengers Bangalore ತಂಡ. 2008ರಲ್ಲಿ ಪ್ರಸನ್ನ ರಾಮನ್ RCB ತಂಡದ performance analyst ಆಗಿದ್ದಾಗ ಅವರ ಕಾರ್ಯವೈಖರಿಯನ್ನ ಮೆಚ್ಚಿದ್ದ ದಕ್ಷಿಣ ಆಫ್ರಿಕಾದ ದಿಗ್ಗಜರಾದ ಡೇಲ್ ಸ್ಟೇನ್, ಜ್ಯಾಕ್ ಕಾಲೀಸ್, ಮಾರ್ಕ್ ಬೌಷರ್, “ನಮ್ಮ ಜೊತೆ ದಕ್ಷಿಣ ಆಫ್ರಿಕಾಗೆ ಬರ್ತೀರಾ” ಎಂದು ಪ್ರಶ್ನಿಸಿದಾಗ ಹಿಂದೆ ಮುಂದೆ ನೋಡದೆ “Yes”ಎಂದವರು ಪ್ರಸನ್ನ ರಾಮನ್. World class performance analyst ಆಗಿದ್ದ ಪ್ರಸನ್ನ ರಾಮನ್ ಈಗ talent scout ಆಗಿ ಶಮರ್ ಜೋಸೆಫ್ ಎಂಬ ಪ್ರತಿಭೆಯನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News