ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

ರಾಹುಲ್ ಅಮೋಘ ಶತಕ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ದಾಳಿಗೆ ಇಂಗ್ಲೆಂಡ್ ತತ್ತರ.

Last Updated : Jul 4, 2018, 10:00 AM IST
ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ title=
Pic courtesy: Reuters

ಮ್ಯಾಂಚೆಸ್ಟರ್: ಇಂಗ್ಲೆಂಡ್​​ನ ಮ್ಯಾಂಚೆಸ್ಟರ್​​ನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟಿ-20 ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 

ಮೊದಲು ಟಾಸ್ ಗೆದ್ದು ಫೀಲ್ಡಿಂಗ್  ಆಯ್ಕೆ ಮಾಡಿಕೊಂಡ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಕುಲ್ದೀಪ್ ಯಾದವ್ ಸ್ಪಿನ್ ದಾಳಿ ನೆರವಾಯಿತು. ಕುಲ್ದೀಪ್ ಅವರ ಸ್ಪಿನ್ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಮುಖಮಾಡಿದರು. ನಿಗದಿತ 20 ಓವರ್ ಗಳಲ್ಲಿ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ, ಭಾರತಕ್ಕೆ 160ರನ್ ಗಳ ಗುರಿ ನೀಡಿತು. 

160 ರನ್ ಗಳ ಸಾಧಾರಣ ಮೊತ್ತದ ಬೆನ್ನತ್ತಿದ್ದ ಟೀಂ ಇಂಡಿಯಾ 18. 2 ಓವರ್ ಗಳಲ್ಲಿ  2 ವಿಕೆಟ್ ನಷ್ಟಕ್ಕೆ 163 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ಶಿಖರ್ ಧವನ್ ಮೊದಲ ಓವರ್​​ನಲ್ಲೇ ಕೇವಲ 4 ರನ್​ಗಳಿಸಿ ಔಟ್ ಆದರು. ಬಳಿಕ ರೋಹಿತ್ ಜೊತೆಗೂಡಿದ ಕನ್ನಡಿಗ ಕೆ. ಎಲ್. ರಾಹುಲ್ ಅವರು ಸ್ಪೋಟಕ ಆಟಕ್ಕೆ ಮುಂದಾದರು. ಸಿಡಿಲಬ್ಬರದ ಬ್ಯಾಟಿಂಗ್ ಆರಂಭಿಸಿದ ರಾಹುಲ್ ಇಂಗ್ಲೆಂಡ್ ಬೌಲರ್​​ಗಳ ಬೆವರಿಳಿಸಿದರು. ರೋಹಿತ್ ಗೆ ರಾಹುಲ್ ಉತ್ತಮ ಸಾತ್ ನೀಡಿದರು. ರೋಹಿತ್ ಶರ್ಮಾ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 32 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ನಾಯಕ ವಿರಾಟ್ ಕೊಹ್ಲಿ ಜತೆಗೂಡಿದ ರಾಹುಲ್ ತಮ್ಮ ಅಬ್ಬರದ ಆಟವನ್ನು ಮುಂದುವರಿಸಿ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಭಾರತ ಇನ್ನು 10 ಬೌಲ್ ಬಾಕಿ ಇರುವಾಗಲೇ ಗೆಲುವು ಸಾಧಿಸಿತು. 

ಸ್ಕೋರ್ ವಿವರ: ಇಂಗ್ಲೆಂಡ್ ತಂಡ (159/8) ಜೋಸ್ ಬಟ್ಲರ್ 69, ಜಾಸನ್ ರಾಯ್ 30, ಕುಲ್ದೀಪ್ ಯಾದವ್ 5/24
ಭಾರತ ತಂಡ- (163/2) ಕೆಎಲ್ ರಾಹುಲ್ 101 ರನ್ ಔಟ್, ರೋಹಿತ್ ಶರ್ಮಾ 32, ವಿರಾಟ್ ಕೊಹ್ಲಿ 20 ನಾಟ್ ಔಟ್ 

Trending News