2024ರಲ್ಲಿ ವಿರಾಟ್ ಕೊಹ್ಲಿ ಬ್ರೇಕ್ ಮಾಡಬಹುದಾದ 5 ಪ್ರಮುಖ ದಾಖಲೆಗಳಿವು

Virat Kohli: 2023ರಲ್ಲಿ ಭಾರತದ ರನ್ ಮೆಷನ್ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮುರಿದರು. ಇದರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಏಕದಿನ ಶತಕಗಳನ್ನು ಹಿಂದಿಕ್ಕಿದ ದಾಖಲೆ ಕೂಡ ಸೇರಿದೆ. 

Written by - Yashaswini V | Last Updated : Jan 3, 2024, 12:27 PM IST
  • ವಿರಾಟ್ ಕೊಹ್ಲಿ ಏಕದಿನದಲ್ಲಿ 14000 ರನ್ ಗಳಿಸುವ ವೇಗದ ಬ್ಯಾಟರ್ ಆಗಲು ಕೇವಲ 152 ರನ್‌ಗಳ ಕೊರತೆಯಿದೆ.
  • ಸಚಿನ್ ತೆಂಡೂಲ್ಕರ್ ಅವರು 350 ಪಂದ್ಯಗಳಲ್ಲಿ ಈ ದಾಖಲೆಯನ್ನು ಹೊಂದಿದ್ದಾರೆ.
  • ಟಿ20 ಕ್ರಿಕೆಟ್‌ನಲ್ಲಿ 12000 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ವಿರಾಟ್ ಕೊಹ್ಲಿಗೆ ಕೇವಲ 35 ರನ್‌ಗಳ ಅಗತ್ಯವಿದೆ.
2024ರಲ್ಲಿ ವಿರಾಟ್ ಕೊಹ್ಲಿ ಬ್ರೇಕ್ ಮಾಡಬಹುದಾದ 5 ಪ್ರಮುಖ ದಾಖಲೆಗಳಿವು  title=

Virat Kohli Records: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗೆ 2023ರ ವರ್ಷ ಅಮೋಘವಾಗಿತ್ತು. ಕಳೆದ ವರ್ಷ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ದೇವರು ಎಂತಲೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೂಡ ಮುರಿದಿದ್ದರು. ಈ ವರ್ಷವೂ ಕೂಡ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಾಶಪಡಿಸುವ ನಿರೀಕ್ಷೆಯಿದೆ. 

ಹೌದು, 2024ರಲ್ಲಿಯೂ ವಿರಾಟ್ ಕೊಹ್ಲಿ ಕೆಲವು ದೀರ್ಘಕಾಲದ ರೆಕಾರ್ಡ್ ಗಳನ್ನು ಬ್ರೇಕ್ ಮಾಡುವ ಸಾಧ್ಯತೆ ಇದೆ. ಹಾಗಿದ್ದರೆ 2024ರಲ್ಲಿ ವಿರಾಟ್ ಕಣ್ಣಿಟ್ಟಿರುವ 5 ಪ್ರಮುಖ ದಾಖಲೆಗಳು ಯಾವುವು ಎಂದು ತಿಳಿಯೋಣ. 

2024ರಲ್ಲಿ ವಿರಾಟ್ ಕೊಹ್ಲಿ ಬ್ರೇಕ್ ಮಾಡಬಹುದಾದ 5 ಪ್ರಮುಖ ದಾಖಲೆಗಳೆಂದರೆ... 
1) ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಪೂರೈಸುವ ಹೊಸ್ತಿಲಿನಲ್ಲಿ ವಿರಾಟ್:

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ವಿರಾಟ್ ಕೊಹ್ಲಿ ಇದೀಗ 14,000 ರನ್ ಗಳಿಸುವ ಅಂಚಿನಲ್ಲಿದ್ದಾರೆ. ಇದಕ್ಕಾಗಿ ವಿರಾಟ್ ಗೆ ಅಗತ್ಯವಿರುವುದು ಕೇವಲ 152 ರನ್‌ಗಳು ಮಾತ್ರ. ಸದ್ಯ ವಿರಾಟ್ ಕೊಹ್ಲಿ 292 ಏಕದಿನ ಪಂದ್ಯಗಳಲ್ಲಿ 13848 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಈ ದಾಖಲೆ ಮಾಡಿದರೆ ಏಕದಿನ ಕ್ರಿಕೆಟ್‌ನಲ್ಲಿ ಈ ದಾಖಲೆಯನ್ನು ಮಾಡಿದ ವಿಶ್ವದ ಮೂರನೇ ಆಟಗಾರ, ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 350 ಪಂದ್ಯಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್  14,000 ರನ್‌ಗಳನ್ನು ಗಳಿಸಿದ್ದಾರೆ.  

ಇದನ್ನೂ ಓದಿ- ಮತ್ತೊಂದು ವಿಶ್ವದಾಖಲೆಯತ್ತ ವಿರಾಟ್ ಚಿತ್ತ… ಒಂದೇ ಹೊಡೆತಕ್ಕೆ ಇಬ್ಬರು ದಿಗ್ಗಜರ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಂಗ್ ಕೊಹ್ಲಿ?

2) ಟಿ 20 ಮಾದರಿಯಲ್ಲಿ 12,000 ರನ್: 
ಟಿ 20 ಮಾದರಿಯಲ್ಲಿ 12,000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ  ಪಾತ್ರರಾಗಲು ವಿರಾಟ್ ಕೊಹ್ಲಿಗೆ ಕೇವಲ  35 ರನ್ ಗಳಿಸಬೇಕಾಗಿದೆ. ಸದ್ಯ ವಿರಾಟ್ 374 ಪಂದ್ಯಗಳಲ್ಲಿ 11,965 ರನ್ ಗಳಿಸಿದ್ದಾರೆ. ಅವರಿಗಿಂತ ಮೊದಲು ಕ್ರಿಸ್ ಗೇಲ್ (463 ಪಂದ್ಯಗಳಲ್ಲಿ 14562), ಶೋಯೆಬ್ ಮಲಿಕ್ (525 ಪಂದ್ಯಗಳಲ್ಲಿ 12993 ರನ್), ಕೀರಾನ್ ಪೊಲಾರ್ಡ್ (637 ಪಂದ್ಯಗಳಲ್ಲಿ 12390 ರನ್) ಗಳಿಸಿದ್ದಾರೆ. 

3) 10000 ಟೆಸ್ಟ್ ರನ್: 
ವಿರಾಟ್ ಕೊಹ್ಲಿ ಪ್ರಸ್ತುತ ತಮ್ಮ ಹೆಸರಿನಲ್ಲಿ 8790 ಟೆಸ್ಟ್ ರನ್‌ಗಳನ್ನು ಗಳಿಸಿದ್ದಾರೆ. ಶೀಘ್ರದಲ್ಲೇ ಅವರು 9000 ರನ್‌ಗಳನ್ನು ಪೂರ್ಣಗೊಳಿಸಲಿದ್ದಾರೆ. ಆದಾಗ್ಯೂ, ಈ ವರ್ಷ ಭಾರತ ಸುಮಾರು 15 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು ವಿರಾಟ್ 2024ರಲ್ಲಿ ಟೆಸ್ಟ್ ಪಂದ್ಯಗಳಲ್ಲಿ 10000 ರನ್‌ಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. 

4) ತವರಿನಲ್ಲಿ ಶತಕ: 
ವಿರಾಟ್ ಅವರು ತವರಿನಲ್ಲಿ ಇನ್ನೂ 5 ಶತಕಗಳನ್ನು ಗಳಿಸಿದರೆ ಸಚಿನ್ ಅವರ ದಾಖಲೆಯನ್ನು ಮತ್ತೆ ಮುರಿಯಲಿದ್ದಾರೆ. 14 ಟೆಸ್ಟ್ ಮತ್ತು 24 ಏಕದಿನ ಶತಕಗಳೊಂದಿಗೆ, ವಿರಾಟ್ ಕೊಹ್ಲಿ ತವರು ನೆಲದಲ್ಲಿ ಒಟ್ಟು 38 ಶತಕಗಳನ್ನು ಹೊಂದಿದ್ದಾರೆ. ಇದೇ ವೇಳೆ ಸಚಿನ್ ತೆಂಡೂಲ್ಕರ್  ಟೆಸ್ಟ್ ನಲ್ಲಿ 22 ಶತಕ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ  20 ಶತಕ ಸಿಡಿಸಿ ತವರು ನೆಲದಲ್ಲಿ ಒಟ್ಟು 42 ಶತಕಗಳ ದಾಖಲೆ ಹೊಂದಿದ್ದಾರೆ. 2024ರಲ್ಲಿ ವಿರಾಟ್ ಕೊಹ್ಲಿ ಭಾರತದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ 4ಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದರೆ ಸಚಿನ್ ಅವರ ಈ ದಾಖಲೆಯನ್ನು ಮುರಿಯಲಿದ್ದಾರೆ. 

ಇದನ್ನೂ ಓದಿ- ದಕ್ಷಿಣ ಆಫ್ರಿಕಾ ನೆಲದಲ್ಲಿ ಹೊಸ ಇತಿಹಾಸ ಸೃಷ್ಠಿಸಲು ರೋಹಿತ್ ಗೆ ಚಾನ್ಸ್‌ ?

5) ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್: 
2024ರ ಜನವರಿಯಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸುವ ಅವಕಾಶವನ್ನು ಹೊಂದಿದ್ದಾರೆ.   ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ 2535 ರನ್‌ಗಳ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ 544 ರನ್ ಅಗತ್ಯವಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News