IND vs AUS: ಇಂದೋರ್ ಟೆಸ್ಟ್’ನಲ್ಲಿ ಸಿಗುತ್ತಾ ಚ್ಯಾನ್ಸ್! ರೋಹಿತ್-ದ್ರಾವಿಡ್ ಕೈಯಲ್ಲಿದೆ ಈ ಇಬ್ಬರು ಆಟಗಾರರ ಭವಿಷ್ಯ

Border-Gavaskar Trophy 2023: ಇನ್ನು ಕೆಎಲ್ ರಾಹುಲ್ ಬಗ್ಗೆ ಹೇಳುವುದಾದರೆ, ಕಳೆದ ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ 40 ರನ್ ಕೂಡ ಹೊರಬಂದಿಲ್ಲ. ಅನೇಕ ಮಾಜಿ ಆಟಗಾರರು ಪ್ಲೇಯಿಂಗ್ 11 ರಲ್ಲಿ ಅವರನ್ನು ಸೇರ್ಪಡೆಗೊಳಿಸಿದ್ದಕ್ಕೆ  ಪ್ರಶ್ನೆಗಳನ್ನು ಎತ್ತಿದ್ದಾರೆ. ಇದಕ್ಕೆ ಕಾರಣ ಅವರ ಕೆಟ್ಟ ಫಾರ್ಮ್. ಕೇವಲ ಆಸ್ಟ್ರೇಲಿಯಾ ಪ್ರವಾಸದಲ್ಲಷ್ಟೇ ಅಲ್ಲ, ಅದಕ್ಕೂ ಮುಂಚಿನಿಂದಲೂ ಕಳಪೆ ಪ್ರದರ್ಶನ ತೋರುತ್ತಿದ್ದಾರೆ

Written by - Bhavishya Shetty | Last Updated : Feb 25, 2023, 09:39 PM IST
    • ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯ
    • ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಸ್ ಭರತ್ ಮತ್ತು ಆರಂಭಿಕ ಕೆಎಲ್ ರಾಹುಲ್ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ.
    • ಮಾರ್ಚ್ 1 ರಿಂದ ಎರಡೂ ತಂಡಗಳು ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಅನ್ನು ಆಡಲಿವೆ
IND vs AUS: ಇಂದೋರ್ ಟೆಸ್ಟ್’ನಲ್ಲಿ ಸಿಗುತ್ತಾ ಚ್ಯಾನ್ಸ್! ರೋಹಿತ್-ದ್ರಾವಿಡ್ ಕೈಯಲ್ಲಿದೆ ಈ ಇಬ್ಬರು ಆಟಗಾರರ ಭವಿಷ್ಯ title=
KS Bharat

Border-Gavaskar Trophy 2023: ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಇಂದೋರ್‌ನಲ್ಲಿ ಮಾರ್ಚ್ 1 ರಿಂದ ನಡೆಯಲಿದೆ. ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆದರೆ ಟೀಂ ಇಂಡಿಯಾದ ಮುಂದೆ ಅನೇಕ ಸಂಕಷ್ಟಗಳು ಉದ್ಭವಿಸಿವೆ. ಕಳೆದ ಎರಡು ಟೆಸ್ಟ್ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಸ್ ಭರತ್ ಮತ್ತು ಆರಂಭಿಕ ಕೆಎಲ್ ರಾಹುಲ್ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಇದೀಗ ಮೂರನೇ ಟೆಸ್ಟ್‌ನಲ್ಲಿ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೈಯಲ್ಲಿದೆ.

ಇದನ್ನೂ ಓದಿ: Women's T20 World Cup: ಮೊದಲ ಬಾರಿ ಫೈನಲ್’ಗೆ ಪ್ರವೇಶಿಸುವ ಮೂಲಕ ಇತಿಹಾಸ ಬರೆದ ದ.ಆಫ್ರಿಕಾ ವನಿತೆಯರು

ಇನ್ನು ಕೆಎಲ್ ರಾಹುಲ್ ಬಗ್ಗೆ ಹೇಳುವುದಾದರೆ, ಕಳೆದ ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ 40 ರನ್ ಕೂಡ ಹೊರಬಂದಿಲ್ಲ. ಅನೇಕ ಮಾಜಿ ಆಟಗಾರರು ಪ್ಲೇಯಿಂಗ್ 11 ರಲ್ಲಿ ಅವರನ್ನು ಸೇರ್ಪಡೆಗೊಳಿಸಿದ್ದಕ್ಕೆ  ಪ್ರಶ್ನೆಗಳನ್ನು ಎತ್ತಿದ್ದಾರೆ. ಇದಕ್ಕೆ ಕಾರಣ ಅವರ ಕೆಟ್ಟ ಫಾರ್ಮ್. ಕೇವಲ ಆಸ್ಟ್ರೇಲಿಯಾ ಪ್ರವಾಸದಲ್ಲಷ್ಟೇ ಅಲ್ಲ, ಅದಕ್ಕೂ ಮುಂಚಿನಿಂದಲೂ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಕೆಎಸ್ ಭರತ್ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 37 ರನ್ ಗಳಿಸಿದ್ದಾರೆ.

ಇಶಾನ್ ಕಿಶನ್-ಶುಭ್ಮನ್ ಗಿಲ್ ಗೆ ಅವಕಾಶ ಸಿಗುತ್ತಾ?

ಒಂದು ಕಡೆ ಕೆಎಲ್ ರಾಹುಲ್ ಕಳಪೆ ಫಾರ್ಮ್ ನಲ್ಲಿರುವುದು ಟೀಂ ಇಂಡಿಯಾಗೆ ಆತಂಕ ತಂದಿದ್ದರೆ, ಶುಭಮನ್ ಗಿಲ್ ಬಿರುಸಿನ ಫಾರ್ಮ್ ನಲ್ಲಿದ್ದಾರೆ. ರೋಹಿತ್ ಅವರ ಆರಂಭಿಕ ಪಾಲುದಾರರಾಗಿ ತಂಡದ ಆಡಳಿತವು ಶುಭಮನ್ ಗಿಲ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಗಿಲ್ ದ್ವಿಶತಕ ಗಳಿಸಿದ್ದರು.

ಇನ್ನೊಂದೆಡೆ ಕೆಎಸ್ ಭರತ್ ಸ್ಥಾನದಲ್ಲಿ ಇಶಾನ್ ಕಿಶನ್ ಗೆ ಅವಕಾಶ ಸಿಗಬಹುದು. ಕಿಶನ್ ಬಾಂಗ್ಲಾದೇಶ ವಿರುದ್ಧ ದ್ವಿಶತಕ ಸಿಡಿಸಿದ್ದರು. ಜಾರ್ಖಂಡ್ ಪರ ರಣಜಿ ಟ್ರೋಫಿಯಲ್ಲೂ ಶತಕ ಬಾರಿಸಿದ್ದರು. ಮೂರನೇ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ಮತ್ತು ಕೆಎಸ್ ಭರತ್ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಗಬಹುದು. ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಮೈದಾನದಲ್ಲಿ ಆಡುವುದನ್ನು ಕಾಣಬಹುದು ಎಂದು ಊಹಿಸಲಾಗಿದೆ.

ಇದನ್ನೂ ಓದಿ: IND vs AUS: ಕೇವಲ 4 ದಿನಗಳಲ್ಲಿ ಕೊನೆಯಾಗಲಿದೆ ಈ ಸ್ಟಾರ್ ಕ್ರಿಕೆಟಿಗನ ವೃತ್ತಿ ಜೀವನ!

ಮಾರ್ಚ್ 1 ರಿಂದ ಎರಡೂ ತಂಡಗಳು ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಅನ್ನು ಆಡಲಿವೆ. ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News