ICC T20 World Cup 2023: ಟಿ20 ವಿಶ್ವಕಪ್‍ಗೆ ಹೊಸ ಸ್ವರೂಪ, 20 ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ   

ICC Men's T20 World Cup 2024: ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದ್ದು, 5 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ತನ್ನ ಗುಂಪಿನ ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಿದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ.

Written by - Puttaraj K Alur | Last Updated : Dec 1, 2023, 10:44 AM IST
  • ಹೊಸ ಸ್ವರೂಪದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ
  • 2024ರ ಜೂನ್‍ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟೂರ್ನಿ
  • ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 20 ರಾಷ್ಟ್ರಗಳ ಕ್ರಿಕೆಟ್ ತಂಡಗಳು ಭಾಗವಹಿಸಲಿವೆ
ICC T20 World Cup 2023: ಟಿ20 ವಿಶ್ವಕಪ್‍ಗೆ ಹೊಸ ಸ್ವರೂಪ, 20 ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ    title=
T20 ವಿಶ್ವಕಪ್ 2024

ನವದೆಹಲಿ: ಇತ್ತೀಚೆಗಷ್ಟೇ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಆಯೋಜಿಸಿದ್ದ ಐಸಿಸಿ ಮತ್ತೊಂದು ಮಹತ್ವದ ಪಂದ್ಯಾವಳಿ ಆಯೋಜಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಮುಂದಿನ ವರ್ಷ ಅಂದರೆ 2024ರ ಜೂನ್‍ ತಿಂಗಳಿನ್ಲಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಹೊಸ ಸ್ವರೂಪದಲ್ಲಿ ಆಯೋಜಿಸಲಾಗುತ್ತಿದೆ.

ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ರವಾಂಡ ವಿರುದ್ಧ 9 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದ ಉಗಾಂಡ ಐತಿಹಾಸಿಕ ಸಾಧನೆ ಮಾಡಿದೆ. ಹೊಸ ಸ್ವರೂಪದ ಈ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 20 ರಾಷ್ಟ್ರಗಳ ಕ್ರಿಕೆಟ್ ತಂಡಗಳು ಭಾಗವಹಿಸಲಿವೆ. ಟಿ20 ವಿಶ್ವಕಪ್ ಟೂರ್ನಿಯ ಕ್ವಾಲಿಫೈಯರ್ ಪಂದ್ಯಗಳಲ್ಲಿ ಜಿಂಬಾಬ್ವೆ ಅರ್ಹತೆ ಪಡೆಯಲು ಸಾಧ್ಯವಾಗದೆ ನಿರಾಸೆ ಅನುಭವಿಸಿದೆ.  ನಮೀಬಿಯಾ ಮತ್ತು ಉಗಾಂಡಾ ಅರ್ಹತೆ ಪಡೆಯುವ ಮೂಲಕ ಬಲಿಷ್ಠ ರಾಷ್ಟ್ರಗಳ ವಿರುದ್ಧ ಸೆಣಸಾಟ ನಡೆಸಲು ಸಿದ್ಧವಾಗಿವೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ರೋಹಿತ್ ಶರ್ಮಾ ಬದಲು ಈತನಿಗೆ ನಾಯಕತ್ವ ವಹಿಸಿದ ಬಿಸಿಸಿಐ

T20 ವಿಶ್ವಕಪ್ 2024ರ ಸ್ವರೂಪ

ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದ್ದು, 5 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ತನ್ನ ಗುಂಪಿನ ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಿದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8ರಲ್ಲಿನ ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಸೂಪರ್ 8ರ ಪ್ರತಿ ಗುಂಪಿನಿಂದ 2 ತಂಡಗಳು ಸೆಮಿಸ್‌ಗೆ ಅರ್ಹತೆ ಪಡೆಯುತ್ತವೆ. ನಂತರ ಸೆಮಿಫೈನಲ್ ತದನಂತರ ಫೈನಲ್ ಫೈಟ್ ನಡೆಯಲಿದೆ.  

ಅರ್ಹತೆ ಪಡೆದ ಎಲ್ಲಾ 20 ತಂಡಗಳು

2024ರ ಟಿ20 ವಿಶ್ವಕಪ್ ಟೂರ್ನಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯುತ್ತಿರುವುದರಿಂದ ಈ ದೇಶಗಳ ತಂಡಗಳು ನೇರ ಅರ್ಹತೆ ಪಡೆದಿವೆ. ಟಾಪ್ 8 ತಂಡಗಳ ಪೈಕಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ಇವೆ. ನಂತರದ ಉತ್ತಮ ರ್ಯಾಂಕಿಂಗ್ ಪಡೆದ ತಂಡಗಳ ಪೈಕಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಅವಕಾಶ ಸಿಕ್ಕಿದೆ. ಇನ್ನೂ ಅಮೆರಿಕದ ವಲಯದಿಂದ ಕೆನಡಾ, ಏಷ್ಯಾ ವಲಯದಿಂದ ನೇಪಾಳ ಮತ್ತು ಓಮನ್, ಈಸ್ಟ್ ಏಷ್ಯಾ ಪೆಸಿಫಿಕ್ ವಲಯದಿಂದ ಪಪುವಾ ನ್ಯೂ ಗಿನಿಯಾ, ಯುರೋಪ್ ವಲಯದಿಂದ ಐರ್ಲೆಂಡ್ ಮತ್ತು ಸ್ಕಾಟ್‌ಲೆಂಡ್ ಮತ್ತು ಆಫ್ರಿಕಾ ವಲಯದಿಂದ ನಮಿಬಿಯಾ ಹಾಗೂ ಉಗಾಂಡ ತಂಡಗಳು ಅರ್ಹತೆ ಪಡೆದುಕೊಂಡಿವೆ.

ಇದನ್ನೂ ಓದಿ: ‘ಎಲ್ಲರೂ ಧೋನಿ ಎನ್ನುತ್ತಾರೆ.. ಆದ್ರೆ ನನಗೆ ಈತನೇ ಅತ್ಯುತ್ತಮ ನಾಯಕ’: ಆರ್ ಅಶ್ವಿನ್ ಹೇಳಿಕೆ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News