Eight Sixes In A Over: ಒಂದೇ ಓವರ್ ನಲ್ಲಿ ಎಂಟು 6,6,6,6,6,6,6,6 ಜಡಿದು ವಿಶಿಷ್ಟ ದಾಖಲೆ ಬರೆದ ಕ್ರಿಕೆಟಿಗ

Eight Sixes In A Over - ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ವೋಬ್ಬರು ದೊಡ್ಡ ಸಾಧನೆಯೊಂದನ್ನೇ ಮಾಡಿದ್ದು, ಇಂತಹ ಸಾಧನೆಯನ್ನು ಕೇವಲ ಕನಸಿನಲ್ಲಿ ಮಾತ್ರ ಊಹಿಸಬಹುದು. ಈ ಬ್ಯಾಟ್ಸ್ ಮನ್ ಬೌಲರ್ ನ ಒಂದೇ ಓವರ್ ನಲ್ಲಿ 50 ಬಾರಿಸಿದ್ದು, ಅವುಗಳಲ್ಲಿ 8 ಸಿಕ್ಸರ್ ಗಳಿವೆ.

Written by - Nitin Tabib | Last Updated : Oct 20, 2021, 08:48 PM IST

    ಒಂದೇ ಓವರ್ ನಲ್ಲಿ 8 ಸಿಕ್ಸರ್ ಹೊಡೆದ ಆಟಗಾರ

    ವಿಶಿಷ್ಟ ದಾಖಲೆ ರಚಿಸಿದ ಆಸ್ಟ್ರೇಲಿಯನ್ ಆಟಗಾರ.

    ಬೌಲರ್ ನನ್ನು ಸಿಕ್ಕಾಪಟ್ಟೆ ದಂಡಿಸಿದ ಆಟಗಾರ

Eight Sixes In A Over: ಒಂದೇ ಓವರ್ ನಲ್ಲಿ ಎಂಟು 6,6,6,6,6,6,6,6 ಜಡಿದು ವಿಶಿಷ್ಟ ದಾಖಲೆ ಬರೆದ ಕ್ರಿಕೆಟಿಗ title=
Eight Sixes In A Over (Sam Harrison Twitter)

ನವದೆಹಲಿ: Eight Sixes In A Over - ಓರ್ವ ಬ್ಯಾಟ್ಸ್ ಮನ್ ಒಂದು ಓವರ್ ನಲ್ಲಿ ಎಷ್ಟು ರನ್ ಬಾರಿಸಬಹುದು? ಕ್ರಿಕೆಟ್ ನ ಒಂದು ಓವರ್ ನಲ್ಲಿ 6 ಬೌಲ್ ಗಳಿರುತ್ತವೆ. ಓರ್ವ ಬ್ಯಾಟ್ಸ್ ಮನ್ ಎಲ್ಲಾ ಆರು ಬೌಲ್ ಗಳಿಗೆ ಸಿಕ್ಸ್ ದಾಖಲಿಸಿದರೆ, 36 ರನ್ ಗಳಾಗಬಹುದು ಎಂದು ನೀವು ಹೇಳಬಹುದು. ಆದರೆ, ಕ್ರಿಕೆಟ್ ಜಗತ್ತಿನ ಈ ಆಟಗಾರ 6 ಬೌಲ್ ಗಳಲ್ಲಿ 36 ರನ್ ತುಂಬಾ ಕಡಿಮೆ ಎಂದು ಸಾಬೀತುಪಡಿಸಿದ್ದಾರೆ. ಏಕೆಂದರೆ ಈ ಬ್ಯಾಟ್ಸ್ ಮನ್ ಮಾಡಿರುವ ಸಾಧನೆ ಕ್ರಿಕೆಟ್ ಪಂಡಿತರ ತಲೆಗೂ ಕೂಡ ಹೊಕ್ಕಿಲ್ಲ. ಅಷ್ಟೇ ಅಲ್ಲ ಕ್ರಿಕೆಟ್ ಅಭಿಮಾನಿಗಳೂ ಕೂಡ ತಮ್ಮ ಬೆರಳನ್ನು ಕಚ್ಚಿಕೊಂಡಿದ್ದಾರೆ. ಹಾಗಾದರೆ ಬನ್ನಿ ಈ ಬ್ಯಾಟ್ಸ್ ಮನ್ ಮಾಡಿರುವ ಸಾಧನೆ ಯಾರು ಯಾವುದು ತಿಳಿದುಕೊಳ್ಳೋಣ.

ಒಂದೇ ಓವರ್ ನಲ್ಲಿ 8 ಸಿಕ್ಸರ್
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಯಾಮ್ ಹ್ಯಾರಿಸನ್ (Sam Harrison), ಸೊರೆಂಟೊ ಡನ್‌ಕ್ರೇಗ್ ಸೀನಿಯರ್ ಕ್ಲಬ್‌ಗಾಗಿ ಆಡುತ್ತಿದ್ದಾರೆ, ನಾಥನ್ ಬೆನೆಟ್ ಅವರ ಒಂದು ಓವರ್‌ನಲ್ಲಿ 50 ರನ್ ಬಾರಿಸಿದ್ದಾರೆ. ಬೆನೆಟ್ ತನ್ನ ಒಂದು ಓವರ್ ನಲ್ಲಿ 8 ಎಸೆತಗಳನ್ನು ಎಸೆದಿದ್ದಾರೆ ಏಕೆಂದರೆ ಅದರಲ್ಲಿ ಒಟ್ಟು 2 ನೋ ಬಾಲ್‌ಗಳು ಸೇರಿದ್ದವು. ಆಟದ 39 ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಈ ಕರಾಮತ್ತಿನ  ಆಸ್ಟ್ರೇಲಿಯಾ ಆಟಗಾರ ತನ್ನ 39 ನೇ ಒಂದೇ  ಓವರ್‌ನಲ್ಲಿ ಅರ್ಧಶತಕ ಪೂರೈಸಿದ್ದಾರೆ ಮತ್ತು 40 ನೇ ಓವರ್‌ನಲ್ಲಿ ಶತಕ ಗಳಿಸಿದ್ದಾರೆ. ಸ್ಯಾಮ್ 80 ರನ್ ಗಳಿಸಿ ಆಟವಾಡುತ್ತಿದ್ದ ವೇಳೆ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಅವರು ಬಿರುಗಾಳಿಯ ರೀತಿಯಲ್ಲಿ ಬ್ಯಾಟ್ ಬೀಸಿ 22 ರನ್ ಗಳಿಸಿದ್ದಾರೆ. ಸೊರೆಂಟೊ ಡನ್‌ಕ್ರೇಗ್ 40 ಓವರ್‌ಗಳಲ್ಲಿ 276 ರನ್ ಗಳಿಸಿದೆ. ಇದರಲ್ಲಿ ಸ್ಯಾಮ್ ಅವರ ಅದ್ಭುತ ಶತಕ ಸೇರಿತ್ತು.

ಇದನ್ನೂ ಓದಿ-T20 WC 2021 : ಈ 3 ಸ್ಪಿನ್ನರ್‌ಗಳಿಂದ ಎದುರಾಳಿ ತಂಡಗಳ ಎದೆಯಲ್ಲಿ ಶುರುವಾಗುತ್ತೆ ಭಯ!

ಕ್ರಿಕೆಟ್ ಲೋಕದ ಅತ್ಯಂತ ದುಬಾರಿ ಓವರ್
ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ ಬರ್ಟ್ ವೆಂಸ್ ಈ ವಿಷಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್ ವರೆಗೆ ಆಡಿರುವ ವೆಂಸ್ 1990ರಲ್ಲಿ ಒಂದೇ ಓವರ್ ನಲ್ಲಿ 77 ಕ್ಕೂ ಅಧಿಕ ರನ್ ಗಳನ್ನು ನೀಡಿದ್ದಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್ ನ ಇದುವರೆಗಿನ  ಅತ್ಯಂತ ದುಬಾರಿ  ಓವರ್ ಇದಾಗಿದೆ. ಈ ಓವರ್ ನಲ್ಲಿ ವೆಂಸ್ ಹಲವು ಫುಲ್ ಟಾಸ್ ಹಾಗೂ ನೋ ಬಾಲ್ ಗಳನ್ನು ಎಸೆದಿದ್ದಾರೆ. ಈ ವೇಳೆ ಅವರ ಬೌಲಿಂಗ್ ನ ಸತತ ಐದು ಬೌಲ್ ಗಳ ಮೇಲೆ 5 ಸಿಕ್ಸರ್ ಬಾರಿಸಲಾಗಿದೆ. ಇದು ಕ್ರಿಕೆಟ್ ಲೋಕದ ಅತ್ಯಂತ ದುಬಾರಿ ಓವರ್ ಎಂದೇ ಇತಿಹಾಸದಲ್ಲಿ ನಮೂದಾಗಿದೆ.

ಇದನ್ನೂ ಓದಿ-IND-PAK ಕ್ರಿಕೆಟ್ ಪಂದ್ಯಕ್ಕೆ ವಿರೋಧ, ಸೋಲು ಗೆಲುವಿನ ನಿರ್ಧಾರ ಗಡಿಯಲ್ಲಾಗಲಿ ಎಂದ ವಿಶ್ವ ಹಿಂದೂ ಪರಿಷತ್

6 ಸಿಕ್ಸ್ ಹೊಡೆದ ಯುವರಾಜ್ ಸಿಂಗ್ (Yuvaraj Singh)
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇದುವರೆಗೆ ಒಟ್ಟು ಮೂವರು ಆಟಗಾರರು 6 ಸಿಕ್ಸರ್ ಬಾರಿಸಿದ್ದಾರೆ. 2007 ರ ಟಿ 20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ಯುವರಾಜ್ ಸಿಂಗ್ 6 ಸಿಕ್ಸರ್‌ಗಳನ್ನು ಬಾರಿಸಿದ್ದರು. ನಂತರ ಅವರು ಒಂದೇ ರಾತ್ರಿಯಲ್ಲಿ  ಹೀರೋ ಆಗಿದ್ದರು. ಅದೇ ಸಮಯದಲ್ಲಿ, 6 ಸಿಕ್ಸರ್‌ಗಳನ್ನು ಹೊಡೆಯುವ ವರ್ಚಸ್ವಿ ಸಾಧನೆಯನ್ನು ಮೊದಲು ಮಾಡಿದವರು ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ (Herschelle Gibbs). ಅವರು 2007 ರಲ್ಲಿ ನೆದರ್ಲೆಂಡ್ಸ್ ವಿರುದ್ಧ ಈ ಕೆಲಸ ಮಾಡಿದರು. ಶ್ರೀಲಂಕಾ ವಿರುದ್ಧ ಕೀರನ್ ಪೊಲಾರ್ಡ್ (Kieron Pollard) 6 ಸಿಕ್ಸರ್ ಬಾರಿಸಿದ್ದರು.

ಇದನ್ನೂ ಓದಿ-ICC Mens T20 World Cup Warm-up Match, 2021: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News